ಕನ್ನಡ ವಾರ್ತೆಗಳು

ಒಂದೇ ಘಂಟೆಗೆ 27 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯ

Pinterest LinkedIn Tumblr

family_palnig_opration

ಚಂದೌಲಿ,ಮಾರ್ಚ್.08 : ಪ್ರಾಥಮಿಕ ಆರೋಗ್ಯ ಕೇಂದ್ರವೊಂದರಲ್ಲಿ ಯಾವುದೇ ಸುಸಜ್ಜಿತ ವ್ಯವಸ್ಥೆಗಳಿಲ್ಲದೆ ಒಂದೇ ಘಂಟೆಗೆ 27  ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ ಎಂಬ ಆರೋಪದ ಮೇಲೆ ಜಿಲ್ಲಾ ಅಧಿಕಾರಿಗಳು ತನಿಖೆ ನಡೆಸಲು ಮುಂದಾಗಿದ್ದಾರೆ. “ನಿಯಂತಾಬಾದ್ ನ ಈ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮುತುವರ್ಜಿ ವಹಿಸದೆ 27 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿದ ವೈದ್ಯನ ಮೇಲೆ ತನಿಖೆ ನಡೆಸಲು ಮುಖ್ಯ ಆರೋಗ್ಯ ಅಧಿಕಾರಿ ನಿರ್ದೇಶಿಸಿದ್ದಾರೆ” ಎಂದು ಜಿಲ್ಲಾ ಮೆಜೆಸ್ಟ್ರೇಟ್ ಎನ್ ಕೆ ಸಿಂಗ್ ತಿಳಿಸಿದ್ದಾರೆ.

ರೋಗಿಗಳಿಗೆ ಸರಿಯಾಗಿ ಹಾಸಿಗೆಗಳನ್ನು ಕೂಡ ಹೊಂದಿಸದೆ ಶಸ್ತ್ರಚಿಕೆತ್ಸೆ ಮಾಡಿದ್ದಲ್ಲದೆ ನೆಲದ ಮೇಲೆ ಚೇತರಿಸಿಕೊಳ್ಳಲು ಕೂಡ ಹೇಳಿರುವುದಾಗಿ ಆರೋಪ ಕೇಳಿ ಬಂದಿದ್ದು, ಆರೋಪ ಸಾಬೀತಾದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮುಖ್ಯ ಆರೋಗ್ಯ ಅಧಿಕಾರಿ 27 ಜನಕ್ಕೆ ಒಬ್ಬರೇ ಶಸ್ತ್ರಚಿಕಿತ್ಸೆ ಮಾಡಲಿಲ್ಲ ಬದಲಾಗಿ ಇಬ್ಬರು ವೈದ್ಯರಿದ್ದರು. ಎಲ್ಲ ನಿಯಮಗಳನ್ನು ಪಾಲಿಸಲಾಗಿದೆ ಆದರ ರೋಗಿಗಳು ಚೇತರಿಸಿಕೊಳ್ಳಲು ಸರಿಯಾದ ಹಾಸಿಗೆ ವ್ಯವಸ್ಥೆ ಮಾಡಿಲ್ಲ ಆಷ್ಟೇ ಎಂದಿದ್ದಾರೆ.

Write A Comment