ಕನ್ನಡ ವಾರ್ತೆಗಳು

ಕ್ವಾಲೀಸ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ : ಶಿರಾಡಿಘಾಟ್ ಚಿತ್ರತಂಡದ ಇಬ್ಬರು ಸಿಬ್ಬಂದಿಗಳ ದುರ್ಮರಣ

Pinterest LinkedIn Tumblr

shiraadi_gath_photo

ಹಾಸನ,ಮಾ.03 : ‘ಶಿರಾಡಿಘಾಟ್‌’ ಚಿತ್ರದ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿ, ಚಿತ್ರ ತಂಡದ ಇಬ್ಬರು ಸಿಬ್ಬಂದಿ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಹಾಸನ ಜಿಲ್ಲೆಯ ಶಾಂತಿ ಗ್ರಾಮದಲ್ಲಿ ನಡೆದಿದೆ.

ಶೂಟಿಂಗ್ ಮುಗಿಸಿ ಚಿತ್ರ ತಂಡದ ಸಿಬ್ಬಂದಿ ಕ್ವಾಲಿಸ್‌ನಲ್ಲಿ ಬೆಂಗಳೂರಿನತ್ತ ಪಯಣ ಬೆಳೆಸಿದ್ದರು. ಈ ವೇಳೆ ಕ್ವಾಲೀಸ್ ಮತ್ತು ಟಿಪ್ಪರ್ ನಡುವೆ ಡಿಕ್ಕಿಯಾಗಿ ಈ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಚಿತ್ರತಂಡದ ಸಹಾಯಕ ಸಿಬ್ಬಂದಿ ಚಿರಂಜೀವಿ(32) ಮತ್ತು ಮಾಲತೇಶ್(35) ಸ್ಥಳದಲ್ಲೇ ಸಾವನಪ್ಪಪಿದ್ದಾರೆ.

ಘಟನೆಯಲ್ಲಿ ಮೂವರು ಗಂಭೀರವಾಗಿ ಗಾಯಗೊಂಡಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಶಾಂತಿ ಗ್ರಾಮ ಠಾಣೆ ಪೊಲೀಸರ ಭೇಟಿ ನೀಡಿದ್ದು, ಪರಿಶೀಲನೆ ಕೈಗೊಂಡಿದ್ದಾರೆ.

Write A Comment