ಕನ್ನಡ ವಾರ್ತೆಗಳು

ರಾಷ್ಟೀಯ ಸಾವಯವ ಕೃಷಿ ಸಮಾವೇಶದಲ್ಲಿ ಬಿಟಿ ಹತ್ತಿ ,ಕೀಟನಾಶಕಗಳ ವಿರುದ್ಧ ಧ್ವನಿ ಎತ್ತಿದ ಮೇನಕಾ ಗಾಂಧಿ.

Pinterest LinkedIn Tumblr

 menaka_gandi_photo

ಚಂಡೀಘರ್,ಮಾರ್ಚ್.02: ರಾಷ್ಟೀಯ ಸಾವಯವ ಕೃಷಿ ಸಮಾವೇಶದಲ್ಲಿ ಮಾತನಾಡಿದ ಎಲ್ಲ ಸಚಿವರು, ಕೃಷಿಯ ಸಾಂಪ್ರದಾಯಿಕ ಬಗೆಗಳು ಮನುಷ್ಯ ಆರೋಗ್ಯ ಮತ್ತು ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಸಾವಯವ ಕೃಷಿಯ ಕಡಗೆ ಹೊರಳುವುದು ಇಂದಿನ ಅಗತ್ಯ ಮತ್ತು ಸರಿಯಾದ ದಾರಿ ಎಂದು ಕೂಡ ಅಭಿಪ್ರಾಯಪಟ್ಟಿದ್ದಾರೆ. ಇದೇ ಸಮಾವೇಶದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮೇನಕಾ ಗಾಂಧಿ ಅವರಿಂದ ಕೀಟನಾಶಕ ಮತ್ತು ಜೈವಿಕ ತಳಿ ಮಾರ್ಪಡಿಸಿದ(ಜಿಎಂ) ಬೆಳೆಗಳ ವಿರುದ್ಧ ಧ್ವನಿ ಕೇಳಿಬಂತು. ತುಂಬಿ ನೆರೆದಿದ್ದ ಜನರನ್ನು ಉದ್ದೇಶಿಸಿ ಮಾತನಾಡಿದ ಅವರು ಜೈವಿಕ ತಂತ್ರಜ್ಞಾನ ಸಂಸ್ಥೆಗಳ ವಿರುದ್ಧ ಹರಿಹಾಯ್ದರು. “ಬಿಟಿ ಹತ್ತಿಯ ಮಾಲಿಕರು (ಭಾತದಲ್ಲಿ ಬೆಳೆಯಬಹುದಾದ ಜೈವಿಕತಳಿ ಮಾರ್ಪಾಡಿನ ಒಂದೇ ವಾಣಿಜ್ಯ ಬೆಳೆ) ನಮಗೆ ಸುಳ್ಳು ಹೇಳಿದ್ದಾರೆ. ಇದಕ್ಕೆ ಕ್ರಿಮಿನಾಶಕದ ಅವಶ್ಯಕತೆ ಇಲ್ಲ ಎಂದಿದ್ದರು. ಆದರೆ ಈಗ ನಮಗೆ ಗೊತ್ತಾಗುತ್ತಿದೆ, ಅಪಾಯಕಾರಿ ಕೀಟನಾಶಕಗಳ ಹೊರತಾಗಿ ಬಿ ಟಿ ಬದನೆ ಬೆಳೆಯುವುದಿಲ್ಲ” ಎಂದು ಅವರು ಹೇಳಿದ್ದಾರೆ.
ಜೋಳ ಮತ್ತು ಬಿ ಟಿ ಬದನೆ ಬೆಳೆಯಲು ರೈತರು ಉಪಯೋಗಿಸುತ್ತಿರುವ ನಿಯೋಕಾಟಿನಾಯ್ಡ್ ಕೀಟನಾಶಕದ ಕುರಿತು ಮೇನಕ ಮಾತನಾಡುತ್ತಿದ್ದರು. ಯೂರೋಪಿನ ಹಲವು ದೇಶಗಳು ಈ ಕೀಟನಾಶಕವನ್ನು ನಿಷೇಧಿಸಿದ್ದಾರೆ ಅಥವಾ ಅದರ ಬಳಕೆಯನ್ನು ನಿಯಂತ್ರಿಸಿದ್ದಾರೆ ಆದರೆ ಇದರ ಉಪಯೋಗ ಭಾರತದಲ್ಲಿ ಎಗ್ಗಿಲ್ಲದಂತೆ ಮುಂದುವರೆಡಿದೆ.

Write A Comment