ಕನ್ನಡ ವಾರ್ತೆಗಳು

ನಗರಾಭಿವೃದ್ಧಿ ಪ್ರಾಧಿಕಾರದ ಆದಾಯ 90.15ಕೋಟಿ ನಿರೀಕ್ಷೆ

Pinterest LinkedIn Tumblr

Dc_Ibrahim_Pics

ಮಂಗಳೂರು, ಫೆ. 28: ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ 2015-16ನೇ ಸಾಲಿಗೆ ರೂ.90,15,61,209 ಆದಾಯ ನಿರೀಕ್ಷಿಸಲಾಗಿದೆ,ಇದೇ ಅವದಿಯಲ್ಲಿ ವಿವಿಧ ಕಾಮಗಾರಿಗಳ ಅಭಿವೃದ್ದಿಗಾಗಿ ರೂ.89,83,37,500 ವೆಚ್ಚ ಮಾಡಲಾಗುವುದೆಂದು ಜಿಲ್ಲಾಧಿಕಾರಿ ಹಾಗೂ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಎ.ಬಿ.ಇಬ್ರಾಹಿಂ ಅವರು ತಿಳಿಸಿದ್ದಾರೆ.

ಅವರುಶನಿವಾರ ಮುಡಾ ಕಛೇರಿಯಲ್ಲಿ ನಡೆದ ವಿಶೇಷ ಸಭೆ ಅಧ್ಯಕ್ಷತೆ ವಹಿಸಿಮಾತನಾಡಿದರು.ಕಳೆದ ವರ್ಷ 30,39,92,495 ರೂಗಳ ಆದಾಯ ಗಳಿಸಲಾಗಿದ್ದು, ಈ ಅವಧಿಯಲ್ಲಿ 29,68,39,988 ರೂಗಳ ವೆಚ್ಚದಲ್ಲಿ ವಿವಿಧ ಬಡಾವಣೆಗಳ ಅಭಿವೃದ್ಧಿ ಕೈಗೊಳ್ಳಲಾಗಿತ್ತು ಎಂದು ಅವರು ತಿಳಿಸಿದರು.
ಮುಡಾ ಆಯುಕ್ತರಾದ ನಜೀರ್ ಅವರು ಮಾತನಾಡಿ ಮುಡಾ ಕಛೇರಿಯನ್ನು ಕಾಗದ ರಹಿತ ಕಛೇರಿಯನ್ನಾಗಿಸುವ ನಿಟ್ಟಿನಲ್ಲಿ ಎಲ್ಲಾ ಕಡತಗಳನ್ನು ಗಣಕೀಕರಣಗೊಳಿಸಲಾಗಿದ್ದು, ಸಾರ್ವಜನಿಕಕರು 19-01-2015ರಿಂದ ಹೊಸದಾಗಿ ಸಲ್ಲಿಸಲಾದ ಎಲ್ಲಾ ದಾಖಲಾತಿಗಳನ್ನು ಅಂತರ್ಜಾಲ http//www.sakala.gov.in.d1pomudasearch/ LOP Search ಮಾಡಿ ನೋಡಬಹುದಾಗಿದೆ ಎಂದು ತಿಳಿಸಿದ್ದಾರೆ.

ಮಂಗಳೂರು ತಾಲೂಕಿನ ಕದ್ರಿ ಉದ್ಯಾನವನ ಬಳಿ ಇರುವ ಹಳೇ ಜಿಂಕೆ ಉದ್ಯಾನವನ ಸ್ಥಳದಲ್ಲಿ ಸಂಗೀತ ಕಾರಂಜಿ, ಲೇಸರ್ ಶೋ ಅಳವಡಿಸುವುದಕ್ಕಾಗಿ ಅಂದಾಜು ರೂ.2.09 ಕೋಟಿ ಹಾಗೂ ಉದ್ಯಾನವನದಲ್ಲಿ ವಿದ್ಯುದೀಕರಣಕ್ಕಾಗಿ ಅಂದಾಜು ರೂ.0. 798 ಕೋಟಿ ಮೀಸಲಿಡಲಾಗಿದೆ.ನಂತೂರ್ ಕ್ರಾಸ್ ಬಳಿ ಅಂಡರ್‌ಪಾಸ್‌ನ್ನು 60 ಕೋಟಿ ರೂ ವೆಚ್ಚದಲ್ಲಿ ನಿರ್ಮಿಸುವ ಬಗ್ಗೆ ಸಭೆಯಲ್ಲಿ ಹಾಜರಿದ್ದ ಶಾಸಕರಾದ ಜೆ.ಆರ್.ಲೊಬೊ, ವಿಧಾನ ಪರಿಷತ್ ಸದಸ್ಯರಾದ ಕ್ಯಾ.ಗಣೇಶ್ ಕಾರ್ಣಿಕ್, ಐವನ್ ಡಿ ಸೋಜಾ ಅವರು ಜಿಲ್ಲಾಧಿಕಾರಿ ಮತ್ತು ನಗರಾಭಿವೃದ್ಧಿ ಪ್ರ್ರಾಧಿಕಾರದ ಆಯುಕ್ತರೊಂದಿಗೆ ಚರ್ಚಿಸಿದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಅಭಿವೃದ್ಧಿಪಡಿಸುತ್ತಿರುವ ಬಡಾವಣೆಗಳ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸುವಂತೆ ಹಾಗೂ ಬಡಾವಣೆಗಳ ರಚನೆಯಲ್ಲಿ ಖಾಸಗಿ ಅಥವಾ ಮುಡಾದಿಂದಲೇ ಅಗಲೀ ಅಲ್ಲಿ ಎಲ್ಲಾ ಮೂಲಭೂತ ಸೌಲಭ್ಯಗಳು ದೊರಕುವಂತಿರಬೇಕು ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು. ಸಭೆಯಲ್ಲಿ ಮುಡಾ ವತಿಯಿಂದ ಕೈಗಳ್ಳಲಾಗಿರುವ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿದರು.

Write A Comment