ಕನ್ನಡ ವಾರ್ತೆಗಳು

ನಂತೂರು ಅಪಾಘಾತ ಖಂಡಿಸಿ ಸ್ಥಳೀಯರಿಂದ ತಡ ರಾತ್ರಿ ಪ್ರತಿಭಟನೆ – ಪೊಲೀಸರಿಂದ ಲಘು ಲಾಠಿ ಚಾರ್ಜ್..

Pinterest LinkedIn Tumblr

nantoor_lathi_charg_1

ಮಂಗಳೂರು,ಫೆ.28 : ನಂತೂರು ಜಂಕ್ಷನ್ ನಲ್ಲಿ ಶುಕ್ರವಾರ ಸಂಜೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಓರ್ವ ಮಹಿಳೆ ಸಹಿತ ಮೂವರು ಸಾವನ್ನಪ್ಪಿದ್ದು, ಮೂವರು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ ಘಟನೆ ನಡೆದ ಹಿನ್ನೆಲೆಯಲ್ಲಿ ಸ್ಥಳೀಯ ನಾಗರಿಕರು ನಂತೂರು ಜಂಕ್ಷನ್ ಪರಿಸರದಲ್ಲಿ ಪ್ರತಿಭಟನೆ ನಡೆಸಿದ ಘಟನೆ ರಾತ್ರಿ ನಡೆದಿದೆ. ಅವೈಜ್ಞಾನಿಕ ರಸ್ತೆ ನಿರ್ಮಾಣ, ಮತ್ತು ಆಸಮರ್ಪಕ ಸಂಚಾರ ನಿರ್ವಹಣೆಯೇ ಅಪಘಾತಕ್ಕೆ ಕಾರಣ ಎಂದು ಆರೋಪಿಸಿ ಸಾರ್ವಜನಿಕರು ರಾತ್ರಿ ನಂತೂರ್ ಜಂಕ್ಷನ್ ನ ರಸ್ತೆಯಲ್ಲಿಯೇ ಕುಳಿತು ಪ್ರತಿಭಟನೆ ನಡೆಸಿದಾಗ ಪೋಲಿಸರು ಲಘು ಲಾಠಿಚಾರ್ಜ್ ನಡೆಸಿ ಗುಂಪನ್ನು ಚದುರಿಸಿದರು.

nantoor_lathi_charg_2 nantoor_lathi_charg_3 nantoor_lathi_charg_4 nantoor_lathi_charg_5 nantoor_lathi_charg_6 nantoor_lathi_charg_7 nantoor_lathi_charg_8 nantoor_lathi_charg_9 nantoor_lathi_charg_10 nantoor_lathi_charg_11 nantoor_lathi_charg_12 nantoor_lathi_charg_13

ರಾತ್ರಿ 10 ಗಂಟೆ ಸುಮಾರಿಗೆ ಸ್ಥಳದಲ್ಲಿ ಜಮಾಯಿಸಿದ್ದ ಸುಮಾರು 200-300 ಸಾರ್ವಜನಿಕರು ಹಠಾತ್ ಪ್ರತಿಭಟನೆ ನಡೆಸಿದರು. ಇದರಿಂದ ಸುತ್ತಲೂ ಟ್ರಾಫಿಕ್ ಜಾಂ ಉಂಟಾಯಿತು. ಜನರನ್ನು ಸ್ಥಳದಿಂದ ತೆರಳುವಂತೆ ಪೊಲೀಸರು ವಿನಂತಿಸಿದಾಗ ಮಾತಿನ ಚಕಮಕಿ ನಡೆದು ಕೊನೆಗೆ ಲಘು ಲಾಠಿ ಚಾರ್ಜ್ ನಡೆಸಲಾಯಿತು. ಈ ಸಂಧರ್ಭ ಲಾರೆನ್ಸ್ ಅವರಿಗೆ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

Write A Comment