ಕನ್ನಡ ವಾರ್ತೆಗಳು

ಪುನರೂರು : ಅನಧೀಕೃತ ಪ್ರಾರ್ಥನಾ ಮಂದಿರಕ್ಕೆ ಸ್ಥಳಿಯರ ಅಕ್ಷೇಪ – ಉದ್ಘಾಟನೆ ರದ್ಧು ಪಡಿಸಿದ ಪೊಲೀಸರು

Pinterest LinkedIn Tumblr

Punarooru_Divine_Center

ಮೂಲ್ಕಿ,ಫೆ.28 :ಅಕ್ರಮವಾಗಿ ನಿರ್ಮಾಣ ಆಗುತ್ತಿದೆ ಎಂಬ ಕಾರಣದಿಂದ ವಿವಾದದ ಕೇಂದ್ರವಾಗಿರುವ ಇಲ್ಲಿನ ಪುನರೂರು ಬಳಿಯ ಅನಧೀಕೃತ ಪ್ರಾರ್ಥನಾ ಮಂದಿರದ ಉದ್ಘಾಟನೆಯನ್ನು ಸ್ಥಳೀಯ ನಾಗರಿಕರ ತೀವ್ರ ವಿರೋಧದಿಂದ ಕೊನೇ ಕ್ಷಣದಲ್ಲಿ ಪೊಲೀಸರ ನಿರ್ದೇಶನದಂತೆ ರದ್ದುಗೊಳಿಸಲಾಗಿದೆ. ಪುನರೂರು ವಸತಿ ಪ್ರದೇಶದಲ್ಲಿ ಸಭಾಂಗಣವೆಂದು ಅನುಮತಿ ಪಡೆದುಕೊಂಡು ಲಕ್ಷಾಂತರ ವೆಚ್ಚದಲ್ಲಿ ನಿರ್ಮಾಣವಾದ ಈ ಕಟ್ಟಡದಲ್ಲಿ ಪ್ರಾರ್ಥನಾ ಮಂದಿರವನ್ನು ಜೇರಿ ಯಾನೆ ಜಾನ್ ಆಲಿಯಾಸ್ ಅರುಣ್ ಎಂಬುವವರಿಗಾಗಿ ನಿರ್ಮಾಣ ಆಗುತ್ತಿರುವ ಪ್ರಾರ್ಥನಾ ಮಂದಿರ ಎಂದು ಕೊನೆ ಕ್ಷಣದಲ್ಲಿ ಮಾಹಿತಿ ಪಡೆದ ಸ್ಥಳೀಯ ತಾಳಿಪಾಡಿ, ಪುನರೂರು, ಅಂಗರಗುಡ್ಡೆ, ಕೆರೆಕಾಡು ನಾಗರಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಶನಿವಾರ  ಉದ್ಘಾಟನೆಗೊಳ್ಳಬೇಕಾಗಿದ್ದು ಅದನ್ನು ಪೊಲೀಸರ ಸೂಚನೆಯಂತೆ ರದ್ದು ಪಡಿಸಲಾಗಿದೆ.

ಸ್ಥಳೀಯರ ಆರೋಪದಂತೆ ಇಲ್ಲಿ ಹೆಸರಿಗೆ ಮಾತ್ರ ಸಭಾಂಗಣ ಆದರೆ ಇಲ್ಲಿ ಅಕ್ರಮ ಪ್ರಾರ್ಥನಾ ಕೂಟದೊಂದಿಗೆ ವ್ಯವಸ್ಥಿತವಾದ ಮತಾಂತರ ನಡೆಸಲಾಗುತ್ತದೆ ಎಂಬ ಆತಂಕ ಹೊಂದಿರುವುದರಿಂದ ಸ್ಥಳೀಯವಾಗಿ ಗೊಂದಲದ ವಾತಾವರಣ ಮೂಡುತ್ತದೆ ಎಂಬ ಕಾರಣದಿಂದ ಈ ಆಕ್ಷೇಪ ಕೇಳಿ ಬಂದಿದೆ. ಈ ಬಗ್ಗೆ ನೂರಾರು ಗ್ರಾಮಸ್ಥರು ಸಹಿ ಮಾಡಿದ ಮನವಿಯನ್ನು ಶುಕ್ರವಾರ ಕಿನ್ನಿಗೋಳಿ ಗ್ರಾಮ ಪಂಚಾಯತ್‌ಗೆ ಸಲ್ಲಿಸಿದ್ದು ಇದರಲ್ಲಿ ಸಭಾಂಗಣ ಮಾಡುವುದಕ್ಕೆ ತಮ್ಮ ಆಕ್ಷೇಪ ಇಲ್ಲ ಆದರೆ ಕಾನೂನು ಬಾಹಿರವಾಗಿ ಪ್ರಾರ್ಥನೆ ಮತ್ತು ಮತಾಂತರದಂತಹ ಅಕ್ರಮ ನಡೆದಲ್ಲಿ ನೇರವಾಗಿ ಕಿನ್ನಿಗೋಳಿ ಗ್ರಾಮ ಪಂಚಾಯತ್ ಹೊಣೆ ಆಗುತ್ತದೆ ಎಂದು ಎಚ್ಚರಿಸಿದ್ದಾರೆ.

ಕಿನ್ನಿಗೋಳಿ ಪಂಚಾಯತ್‌ನಿಂದ ಕೇವಲ ಕಟ್ಟಡ ಪರವಾನಿಗೆ ಪಡೆದುಕೊಂಡು ನಿರ್ಮಿಸಿದ್ದರು ಅಧಿಕೃತವಾಗಿ ಖಾತೆ ಸಂಖ್ಯೆಯನ್ನು ನೀಡಲಾಗಿಲ್ಲ ಆದರೂ ಉದ್ಘಾಟನೆಗೆ ಮುಂದಾಗಿರುವುದು ಇಲ್ಲಿ ಗುಟ್ಟಾದ ವ್ಯವಹಾರ ನಡೆದಿದೆಯೇ ಎಂಬ ಸಂಶಯ ನಾಗರಿರದ್ದಾಗಿದ್ದು ಈ ಬಗ್ಗೆ ಶನಿವಾರ ಜಿಲ್ಲಾಧಿಕಾರಿಗಳಿಗೆ ಅಧಿಕೃತವಾಗಿ ದೂರನ್ನು ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಕಡಂದಲೆಯ ಪ್ರವೀಣ್ ಡಿಸೋಜಾ ಎಂಬುವವರು ಈ ಕಟ್ಟಡದ ಉಸ್ತುವಾರಿ ಹೊಂದಿದ್ದು ನಾಗರಿಕರ ಆಕ್ಷೇಪ ಕೇಳಿ ಬಂದ ತಕ್ಷಣ ಸ್ಥಳೀಯರ ಗುಪ್ತ ಸಭೆಯನ್ನು ನಡೆಸಿಕೊಂಡು ಆಸೆ ಆಮೀಷ ನೀಡಿದ್ದರು ಸಭೆಯಲ್ಲಿ ಅವರನ್ನು ನಾಗರಿಕರು ತೀವ್ರ ತರಾಟೆಗೆ ತೆಗೆದುಕೊಂಡಿದ್ದರಲ್ಲದೇ ಬಿಜೆಪಿಯಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವವರು ಸಹ ಅವರೊಂದಿಗೆ ಇದ್ದುದರಿಂದ ಸಭೆಯಲ್ಲಿದ್ದವರು ಬಹಿರಂಗವಾಗಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವಸತಿ ಪ್ರದೇಶದಲ್ಲಿ ಯಾವುದೇ ಕ್ರೈಸ್ತರ ಮನೆಗಳೇ ಇಲ್ಲದೇ ಇರುವುದರಿಂದ ಈ ಪ್ರಾರ್ಥನಾ ಮಂದಿರದ ಅಗತ್ಯವಿದೆಯೇ ಎಂಬ ಪ್ರಶ್ನೆಯೂ ಜನರಲ್ಲಿ ಮೂಡಿದೆ.

ಪೊಲೀಸ್ ರಕ್ಷಣೆಗೆ ಮೊರೆ..
ಈ ಎಲ್ಲಾ ಬೆಳವಣಿಗೆಯ ನಡುವೆ ಈ ಕಟ್ಟಡದ ಉದ್ಘಾಟನೆ ನಡೆಸಲು ಮೂಲ್ಕಿ ಇನ್ಸ್‌ಪೆಕ್ಟರ್‌ರಲ್ಲಿ ವಿಶೇಷ ಬಂದೋಬಸ್ತ್ ನೀಡಿ ರಕ್ಷಣೆ ನೀಡಬೇಕೆಂದು ಧರ್ಮಗುರು ಸಹಿತ ಮಂದಿರದ ಪ್ರಮುಖರು ಮನವಿ ಮಾಡಿಕೊಂಡಿದ್ದರು ಆದರೆ ಇದು ಪ್ರಾರ್ಥನಾ ಮಂದಿರವೆಂದು ದಾಖಲೆ ಸಹಿತ ಹಾಜರು ಪಡಿಸಿರಿ ಎಂದು ಇನ್ಸ್‌ಪೆಕ್ಟರ್ ತಿಳಿಸಿದ್ದರಿಂದ ಪಂಚಾಯತ್‌ಗೆ ಬಂದು ಪ್ರಾರ್ಥನಾ ಮಂದಿರವೆಂದು ಅನುಮತಿ ನೀಡಬೇಕೆಂದು ಒತ್ತಡ ಹಾಕಿದ್ದರು ಎನ್ನಲಾಗಿದೆ ಆದರೆ ನಾಗರಿಕರ ತೀವ್ರ ಆಕ್ಷೇಪ ಇರುವುದರಿಂದ ಪಂಚಾಯತ್ ನಿರಾಕರಿಸಿದೆ. ಮೂಲ್ಕಿ ಪೊಲೀಸರು ಸಹ  ಶುಕ್ರವಾರ ಇದು ಅಕ್ರಮ ಪ್ರಾರ್ಥನಾ ಮಂದಿರವೇ ಎಂದು ಪ್ರಶ್ನಿಸಿ ಕಟ್ಟಡದ ಪ್ರಮುಖರಿಗೂ ಹಾಗೂ ಕಿನ್ನಿಗೋಳಿ ಗ್ರಾಮ ಪಂಚಾಯತ್‌ನ ಅಭಿವೃದ್ಧಿ ಅಧಿಕಾರಿಗೂ ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ.

Write A Comment