ಕನ್ನಡ ವಾರ್ತೆಗಳು

ಸ್ವ ಉದ್ಯೋಗ ಯೋಜನೆಯಡಿ:ಫಲಾನುಭವಿಗಳ ಮಾಹಿತಿ ಶಿಬಿರ.

Pinterest LinkedIn Tumblr

kadri_days_prgam_1

ಮಂಗಳೂರು ಫ.18:  ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರು, ಸಿಡಾಕ್, ಧಾರವಾಡ ಹಾಗೂ ಸರಕಾರಿ ಮಹಿಳಾ ಐ.ಟಿ.ಐ. ಕದ್ರಿ ಮಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ 2014-15  ನೇ ಸಾಲಿನಲ್ಲಿ ದಕ್ಞಿಣ ಕನ್ನಡ ,ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕರ್ನಾಟಕ ಸ್ವ‌ಉದ್ಯೋಗ ಯೋಜನೆಯಡಿ ಸಾಲ ಮಂಜೂರಾದ 30 ಫಲಾನುಭವಿಗಳಿಗೆ 6 ದಿನಗಳ ಮಾಹಿತಿ ಶಿಬಿರವನ್ನು ಸರಕಾರಿ ಮಹಿಳಾ ಐ.ಟಿ.ಐ.ನಲ್ಲಿ ಏರ್ಪಡಿಸಲಾಗಿತ್ತು.

ಈ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಉಪಸ್ಥಿತರಿದ್ದ ಜಿಲ್ಲಾ ಕೈಗಾರಿಕಾ ಕೇಂದ್ರ, ಮಂಗಳೂರಿನ ಜಂಟಿ ನಿರ್ದೇಶಕ .ರಮಾನಂದ ನಾಯಕ್‌ರವರು ಮಾತನಾಡಿ ಫಲಾನುಭವಿಗಳು ಕ್ರಿಯಾಶೀಲರಾಗಿ, ನಿರ್ಧಿಷ್ಟ ಗುರಿ ಇಟ್ಟು ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಸರಿಯಾಗಿ ಮರು ಪಾವತಿ ಮಾಡಿ ಯಶಸ್ವಿ ಉದ್ಯಮಶೀಲರಾಗಲು ಕರೆ ನೀಡಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ಸಿಡಾಕ್ ಜಿಲ್ಲಾ ಉಪ ನಿರ್ದೇಶಕರು ಅರವಿಂದ .ಡಿ.ಬಾಳೇರಿ, ಜಿಲ್ಲಾ ಉಪ ನಿರ್ದೇಶಕರು(ತ) ಸಿಡಾಕ್, ಮಂಗಳೂರು, ಸಹಾಯಕ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ, ಸತ್ಯನಾರಾಯಣ ಭಟ್ಟ, ಹಾಗೂ, ಪ್ರಾಂಶುಪಾಲರು, ಸರಕಾರಿ ಮಹಿಳಾ ಐ.ಟಿ.ಐ. ಕದ್ರಿ, ಸಿ.ಬಾಲಕೃಷ್ಣ ಉಪಸ್ಥಿತರಿದ್ದು ಸತೀಶ್ ಮಾಬೆನ್ ಕಾರ್ಯಕ್ರಮದ ನಿರೂಪಿಸಿದರು.

Write A Comment