ಅಂತರಾಷ್ಟ್ರೀಯ

ಮಂಗಳ ಗ್ರಹಯಾನ ಯಾತ್ರೆಗೆ ಮೂವರು ಭಾರತೀಯರಿಗೆ ಅವಕಾಶ

Pinterest LinkedIn Tumblr

images

ಲಂಡನ್ ,ಫೆ.17 : 2024 ರಲ್ಲಿ ಮಂಗಳ ಗ್ರಹಕ್ಕೆ ಯಾತ್ರೆ ಮಾಡಲಿರುವ 100 ಜನರ ಪಟ್ಟಿಯಲ್ಲಿ ಮೂವರು ಭಾರತೀಯರಿಗೆ ಅವಕಾಶ ಸಿಕ್ಕಿದೆ. ಕೇರಳದ ಪಾಲಕ್ಕಾಡ್ ನಿವಾಸಿಯಾದ ಶ್ರದ್ಧಾ ಪ್ರಸಾದ್ ಎಂಬ ಹತ್ತೊಂಬತ್ತರ ಹರೆಯದ ಸೇರಿದಂತೆ ಮೂವರು ಭಾರತೀಯರಿಗೆ ಈ ಭಾಗ್ಯ ಒಲಿದು ಬಂದಿದೆ.

ಹಾಲೆಂಡ್ ಸಂಸ್ಥೆಯೊಂದು ಮಾರ್ಸ್ ಒನ್ ಎಂಬ ಯೋಜನೆಯ ಅಂಗವಾಗಿ 4 ಜನರನ್ನು ಮಂಗಳ ಗ್ರಹಕ್ಕೆ ಕಳಿಸಲಾಗುತ್ತಿದೆ. ಈ ಯೋಜನೆಯ ಮೂರನೇ ಹಂತದಲ್ಲಿ 100 ಜನರ ಪಟ್ಟಿಯಲ್ಲಿ ಶ್ರದ್ಧಾ ಹೆಸರು ಆಯ್ಕೆ ಆಗಿದೆ.

ಪಾಲಕ್ಕಾಡ್ ನಿವಾಸಿಯಾದ ಶ್ರದ್ಧಾ ಕೊಯಂಬತ್ತೂರ್ ಅಮೃತಾ ವಿಶ್ವವಿದ್ಯಾಪೀಠದಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿನಿಯಾಗಿದ್ದಾಳೆ. ಶ್ರದ್ಧಾ ಜತೆಗೆ ತರಣ್ ಜಿತ್ ಸಿಂಗ್ ಭಾಟಿಯಾ (29), ರಿತಿಕಾ ಸಿಂಗ್ (29) ಎಂಬಿಬ್ಬರೂ ಈ ಪಟ್ಟಿಯಲ್ಲಿದ್ದಾರೆ.

ತರಣ್‌ಜಿತ್ ಯುನಿವರ್ಸಿಎಟಿ ಆಫ್ ಸೆಂಟ್ರಲ್ ಫ್ಲೋರಿಡಾದಲ್ಲಿ ವಿದ್ಯಾರ್ಥಿಯಾಗಿದ್ದಾರೆ. ಅದೇ ವೇಳೆ ರಿತಿಕಾ ದುಬೈ ನಿವಾಸಿಯಾಗಿದ್ದಾರೆ. 660 ಜನರ ಎರಡನೇ ಪಟ್ಟಿಯಲ್ಲಿ 3 ಮಲಯಾಳಿಗಳು ಸೇರಿದಂತೆ 44 ಭಾರತೀಯರು ಇದ್ದರು. ಆದಾಗ್ಯೂ, ಮೂರನೇ ಪಟ್ಟಿಯಲ್ಲಿ ಮೂರು ಭಾರತೀಯರ ಹೆಸರು ಮಾತ್ರ ಇದೆ.ಈ ಯಾತ್ರೆಗಾಗಿ 202, 586 ಅರ್ಜಿಗಳು ಬಂದಿದ್ದವು. ಇದರಲ್ಲಿ ಆಯ್ಕೆ ಮಾಡಿ, 100 ಜನರ ಪಟ್ಟಿ ತಯಾರಿಸಲಾಗಿತ್ತು. 50 ಗಂಡಸರು ಮತ್ತು 50 ಮಹಿಳೆಯರು ಈ ಪಟ್ಟಿಯಲ್ಲಿದ್ದಾರೆ. ಯುಎಸ್39, ಯುರರೋಪ್ 31, ಏಷ್ಯಾ 16, ಆಫ್ರಿಕಾ -07 ಹಾಗೂ ಒಷೇನಿಯಾದಿಂದ 7 ಮಂದಿ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಮೊದಲ ಹಂತದಲ್ಲಿ ನಾಲ್ಕು ಜನರನ್ನು ಮಂಗಳನ ಅಂಗಳಕ್ಕೆ ಕಳುಹಿಸಲು ಸಂಸ್ಥೆ ತೀರ್ಮಾನಿಸಿದೆ. ಆಮೇಲೆ ಅಲ್ಲಿ ಮನುಷ್ಯರ ಕಾಲನಿ ನಿರ್ಮಿಸುವ ಸಲುವಗಿ 40 ಜನರನ್ನು ಕಳುಹಿಸಲಾಗುವುದು. 2024ರಲ್ಲಿ ನಡೆಯಲಿರುವ ಈ ಯಾತ್ರೆಯ ಕೊನೆಯ ಸುತ್ತಿನಲ್ಲಿ ಆಯ್ಕೆಯಾದವರಿಗೆ 7 ವರ್ಷಗಳ ಕಾಲ ತರಬೇತಿ ನೀಡಲಾಗುವುದು.

Write A Comment