ಕನ್ನಡ ವಾರ್ತೆಗಳು

ಬಜ್ಪೆ ಕೇಂದ್ರ ಮಸೀದಿ ಹಾಗು ಈದ್ಗಾ ಮಸೀದಿಗೆ ಕಲ್ಲು ತೂರಾಟ ; ಕಿಡಿಗೇಡಿಗಳ ಬಂಧನಕ್ಕೆ ಆಗ್ರಹ

Pinterest LinkedIn Tumblr

Bajpe_mosques_stone_1

ಮಂಗಳೂರು : ಬಜ್ಪೆ ಕೇಂದ್ರ ಜುಮ್ಮಾ ಮಸೀದಿ ಹಾಗು ಇದರ ಅಧೀನದಲ್ಲಿ ಬರುವಂತಹ ಈದ್ಗಾ ಮಸೀದಿ ಮೇಲೆ ಶನಿವಾರ ತಡರಾತ್ರಿ ಅಪರಿಚಿತ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ . ಕಲ್ಲು ತೂರಾಟದಿಂದಾಗಿ ಮಸೀದಿಯ ಗಾಜುಗಳಿಗೆ ಹಾನಿಯಾಗಿದ್ದು ಪಣಂಬೂರು ಎಸಿಪಿ ಹಾಗೂ ಬಜ್ಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮಸೀದಿಗೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿ ಹಾನಿಗೊಳೀಸಿರುವ ಬಗ್ಗೆ ಬಜ್ಪೆ ಕೇಂದ್ರ ಮಸೀದಿಯ ಅಧ್ಯಕ್ಷರಾದ ಮುಹಮ್ಮದ್ , ಪ್ರಧಾನ ಕಾರ್ಯದರ್ಶಿ ಇಸ್ಮಾಈಲ್ ಇಂಜಿನಿಯರ್ ಪೊಲೀಸರಿಗೆ ದೂರು ನೀಡಿದ್ದಾರೆ.

Bajpe_mosques_stone_2 Bajpe_mosques_stone_3 Bajpe_mosques_stone_4 Bajpe_mosques_stone_5 Bajpe_mosques_stone_6 Bajpe_mosques_stone_7 Bajpe_mosques_stone_8

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಖಂಡನೆ : ಕಿಡಿಗೇಡಿಗಳ ಶೀಘ್ರ ಪತ್ತೆಗೆ ಆಗ್ರಹ

ಇದೇ ಸಂದರ್ಭದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಖಂಡರಾದ ಅತ್ಹಾವುಲ್ಲ, ಮಜೀದ್ , ನಜ್ಹೀರ್ , ರಿಯಾಜ್ ಮುಂತಾದವರ ನೇತ್ರತ್ವದಲ್ಲಿ ಘಟನೆ ನಡೆದ ಮಸೀದಿಗಳಿಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ನಿಯೋಗವು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಪ್ರಕರಣವನ್ನು ಖಂಡಿಸಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮುಖಂಡರು, ಬಜ್ಪೆ ಕೇಂದ್ರ ಮಸೀದಿ ಹಾಗು ಈದ್ಗಾ ಮಸೀದಿ ಮೇಲೆ ಕಲ್ಲು ತೂರಾಟ ನಡೆಸಿ ನಷ್ಟವುಂಟು ಮಾಡಿದ ಆರೋಪಿಗಳನ್ನು ಶೀಘ್ರ ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಪೋಲಿಸ್ ಅಧಿಕಾರಿಗಳಲ್ಲಿ ಆಗ್ರಹಿಸಿದ್ದಾರೆ.

ಕಳೆದ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಇಂತಹ ಅನೇಕ ಘಟನೆಗಳು ನಡೆಯುತಿದ್ದು, ಮೊನ್ನೆ ಕಳವಾರು ಮಸೀದಿಯ ಕಾಣಿಕೆ ಡಬ್ಬಿ ಕೂಡ ಧ್ವಂಸ ಮಾಡಲಾಗಿದೆ. ಇದೊಂದು ಪೂರ್ವಯೋಜಿತ ಕ್ರತ್ಯವಾಗಿದೆ. ಆದ್ದೂದರಿಂದ ಸಮಾಜಕ್ಕೆ ಮಾರಾಕವಾಗಿರುವ ಇಂತಹ ಕಿಡಿಗೇಡಿಗಳನ್ನು ಶೀಘ್ರವೇ ಬಂಧಿಸಬೇಕು ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಬಜ್ಪೆ ಡಿವಿಷನ್ ಅಧ್ಯಕ್ಷರಾದ ಅಬ್ದುಲ್ ಮಜೀದ್ ಆಗ್ರಹಿಸಿದ್ದಾರೆ.
ಈ ಸಂದರ್ಭ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಜಿಲ್ಲಾ ಸಮಿತಿ ಸದಸ್ಯರಾದ ಎ ಎಂ ಅತ್ಹಾವುಲ್ಲಃ ಜೋಕಟ್ಟೆ , ಡಿವಿಷನ್ ಸದಸ್ಯರಾದ ನಜ್ಹೀರ್ ಕೆ .ಪಿ ನಗರ, ರಿಯಾಜ್ ಮುಂತಾದವರು ಜೊತೆಗಿದ್ದರು.

Write A Comment