ಮಂಗಳೂರು: “ರಾಜಸ್ಥಾನ ಗ್ರಾಮೀಣ ಮೇಳ” – ರಾಜಸ್ಥಾನ ಕಲೆ ಮತ್ತು ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳ ಫೆ.13 ರಿಂದ ಮಾ.1 ರವರೆಗೆ ನಗರದ ಹೊಟೇಲ್ ಮೋತಿ ಮಹಲ್ ಸಭಾಂಗಣದಲ್ಲಿ ಅಯೋಜಿಸಲಾಗಿದೆ.
ಶುಕ್ರವಾರ ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಂಸ್ಥೆಯ ಕಾರ್ಯದರ್ಶಿ ಮಹಾವೀರ್ ಅವರು, ಈ ಗ್ರಾಮೀಣ ಮೇಳದಲ್ಲಿ ರಾಜಸ್ಥಾನ ಮಾತ್ರವಲ್ಲದೆ, ಆಂಧ್ರ ಪ್ರದೇಶ, ತಮಿಳುನಾಡು, ಗುಜರಾತ್, ಮಧ್ಯ ಪ್ರದೇಶ, ಕೇರಳ, ಕರ್ನಾಟಕ ಮುಂತಾದ ರಾಜ್ಯಗಳ ಕರಕುಶಲ ಕರ್ಮಿಗಳು ಕೈಯಲ್ಲೇ ಸಿದ್ಧಪಡಿಸಿರುವ ಉತ್ಪನ್ನಗಳು ಲಭ್ಯವಿರುತ್ತದೆ. ಬೇರೆ ಬೇರೆ ರಾಜ್ಯಗಳಿಂದ ಬಂದಂತಹ ವ್ಯಾಪಾರಿಗಳು ಇಲ್ಲಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡುತ್ತಾರೆ. ವಿವಿಧ ರೀತಿಯ, ಲೋಹಗಳ ಆಭರಣಗಳು, ಸೀರೆಗಳು, ಬಟ್ಟೆಬರೆಗಳು, ಬೆಡ್‍ಶೀಟ್‍ಗಳು, ಪೈಟಿಂಗ್ಸ್, ಕರಕುಶಲ ವಸ್ತುಗಳು, ಗೃಹಲಂಕಾರ ವಸ್ತುಗಳು, ಮಣ್ಣಿನಿಂದ ತಯಾರಿಸಿದ ವಸ್ತುಗಳು, ಪೀಠೋಪಕರಣಗಳು, ಪೂಜಾ ಸಾಮಗ್ರಿಗಳು, ಶೂ- ಚಪ್ಪಲಿಗಳು, ವಿವಿಧ ರೀತಿಯ ಮೂರ್ತಿಗಳು- ಮುಂತಾದ ವಸ್ತುಗಳು ಇಲ್ಲಿನ ಮೇಳದಲ್ಲಿ ಲಭ್ಯವಿದೆ. ಈ ಬಾರಿಯ ಮೇಳದಲ್ಲಿ ಸುಮಾರು 44 ಮಳಿಗೆಗಳನ್ನು ಇಲ್ಲಿ ತೆರೆಯಲಾಗಿದೆ ಎಂದು ಹೇಳಿದರು.
ವರ್ಷದಲ್ಲಿ ಎರಡು ಬಾರಿ ಮಂಗಳೂರಿನಲ್ಲಿ ರಾಜಸ್ಥಾನ ಗ್ರಾಮೀಣ ಮೇಳವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಪ್ರತೀ ಬಾರಿ ಮಂಗಳೂರಿನ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. “ರಾಜಸ್ಥಾನ ಗ್ರಾಮೀಣ ಮೇಳ” ಇಂದಿನಿಂದ ಆರಂಭಗೊಂಡಿದ್ದು, ಎಲ್ಲಾ ಎಲ್ಲಾ ಮಳಿಗೆಗಳು ಕಾರ್ಯಾರಂಭಗೊಂಡಿದೆ, ಪ್ರತೀ ದಿನ ಬೆಳಗ್ಗೆ 10 ರಿಂದ ರಾತ್ರಿ 9 ಗಂಟೆಯವರೆಗೆ ಮಳಿಗೆಗಳು ತೆರೆದಿರುತ್ತದೆ. ಶೇ.20 ರವರೆಗೆ ರಿಯಾಯಿತಿಯೂ ಲಭ್ಯವಿದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮೇಳದ ಪ್ರಮುಖರಾದ ವಿಜಯ್ ಶುಕ್ಲಾ, ರಾಜೀವ್ ಥಕ್ಕರ್ ಉಪಸ್ಥಿತರಿದ್ದರು.























