ಕನ್ನಡ ವಾರ್ತೆಗಳು

ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡಾಟಾ-ಹಡೂಪ್

Pinterest LinkedIn Tumblr

shree_devi_collegee

ಮಂಗಳೂರು,ಫೆ.12 :  ಶ್ರೀದೇವಿ ತಾಂತ್ರಿಕ ಮಹಾವಿದ್ಯಾಲಯದಲ್ಲಿನ ಎಂ.ಸಿ.ಎ ವಿಭಾಗದಿಂದ  ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡಾಟಾ-ಹಡೂಪ್ ಎಂಬ ವಿಷಯದಲ್ಲಿನ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು. ಈ ಕಾರ್ಯಾಗಾರದಲ್ಲಿ ಮಂಗಳೂರಿನ ಟೆಕ್‌ಪ್ರೊಸಾಫ಼್ಟ್ ಸೋಲ್ಯುಷನ್ ಸಂಸ್ಥೆಯ ಚೇರ್ಮನ್ ಹಾಗೂ ಮ್ಯಾನೇಜಿಂಗ್ ಡೈರೆಕ್ಟರ್‌ರಾಗಿರುವ ಶ್ರೀಯುತರಾದ ಜಿ.ಕೆ.ಭಟ್‌ರವರು ಮತ್ತು ಸಾಫ಼್ಟ್‌ವೇರ್ ಡೆವಲಪರ್ ಟ್ಯಾಮ್‌ಸಿನ್ ಫ಼ೆರ್ನಾಂಡಿಸ್‌ರವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

ಈ ಕಾರ್ಯಾಗಾರದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಮತ್ತು ಬಿಗ್ ಡಾಟಾ-ಹಡೂಪ್‌ಗಳ ಕಾರ್ಯ ವೈಖರಿಯನ್ನು ಹಾಗೂ ಅದರ ಉಪಯೋಗಗಳನ್ನು ವಿವರಿಸಲಾಯಿತು. ಈ ಸಂದರ್ಭದಲ್ಲಿ ಎಂ.ಸಿ.ಎ ವಿಭಾಗದ ಹಾಗೂ ಎಂ.ಟೆಕ್(ಕಂಪ್ಯೂಟರ್ ಸೈನ್ಸ್)ವಿಭಾಗದ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ಕಾಲೇಜಿನ ಪ್ರಾಂಶುಪಾಲರಾದ ಡಾ||ದಿಲೀಪ್‌ಕುಮಾರ್.ಕೆ ರವರು ಸ್ವಾಗತ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಎಂ.ಸಿ.ಎ ವಿಭಾಗದ ಮುಖ್ಯಸ್ಥೆಯಾದ ಪ್ರೊಫ಼ೆಸರ್|| ಪಿ.ಸ್.ನೇತ್ರಾವತಿರವರು ಉಪಸ್ಥಿತರಿದ್ದರು.

Write A Comment