ಕನ್ನಡ ವಾರ್ತೆಗಳು

ಕುಂದಾಪುರ-ಕೋಡಿ ಸಂಪರ್ಕ ಸೇತುವೆ ಉದ್ಘಾಟನೆ, ಕುಂದಾಪುರ ಮಿನಿ ವಿಧಾನಸೌಧ ಲೋಕಾರ್ಪಣೆ

Pinterest LinkedIn Tumblr

ಹೊಸ ತಾಲೂಕುಗಳು ಸೇರಿದಂತೆ ಹೋಬಳಿ, ಉಪವಿಭಾಗಗಳ ರಚನೆ ಶೀಘ್ರ-ವಿ.ಶ್ರೀನಿವಾಸ ಪ್ರಸಾದ್

ಕುಂದಾಪುರ: ಜನರಿಗೆ ಆಡಳಿತ್ಮಾಕ ಸೇವೆ ಒಂದೇ ಕಡೆ ಸಿಗಬೇಕು ಎನ್ನುವ ನೆಲೆಯಲ್ಲಿ ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ಸಂಕೀರ್ಣ, ಎಲ್ಲ ತಾಲೂಕುಗಳಲ್ಲಿ ಮಿನಿ ವಿಧಾನ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆಡಳಿತ ಇನ್ನೂ ಸುಗಮವಾಗಬೇಕು, ಪರಿಣಾಮಕಾರಿಯಾಗಿರಬೇಕು ಎನ್ನುವ ನೆಲೆಯಲ್ಲಿ ಹೊಸ ತಾಲೂಕುಗಳ ರಚನೆಯ ಜೊತೆ ಹೊಸ ಹೋಬಳಿಗಳ ರಚನೆ, ಈಗಾಗಲೇ ವಿಸ್ತಾರವಾಗಿರುವ ಉಪ ವಿಭಾಗಗಳನ್ನು ಕಿರಿದುಗೊಳಿಸಿ ಹೊಸ ಉಪವಿಭಾಗಗಳ ರಚನೆಯ ಚಿಂತನೆಯನ್ನು ಸರ್ಕಾರ ಮಟ್ಟದಲ್ಲಿ ಪ್ರಸ್ತಾವಿಸಲಾಗಿದೆ ಎಂದು ರಾಜ್ಯದ ಕಂದಾಯ ಸಚಿವ ವಿ.ಶ್ರೀನಿವಾಸ ಪ್ರಸಾದ್ ಹೇಳಿದರು.

Kundapura_Vidhanasoudha_Inaugaration (1) Kundapura_Vidhanasoudha_Inaugaration (11)

ಕಂದಾಯ ಮತ್ತು ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಉಡುಪಿ ವತಿಯಿಂದ ರೂ.೫.೭೦ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕುಂದಾಪುರ- ಕೋಡಿಯ ಸಂಪರ್ಕ ಸೇತುವೆ ಹಾಗೂ 4.90 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಕುಂದಾಪುರದ ಮಿನಿ ವಿಧಾನಸೌಧ ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಿನಿ ವಿಧಾನಸೌಧ ಉದ್ಘಾಟಿಸಿ ಮಾತನಾಡಿದರು.

ಜನರಿಗೆ ಸರಕಾರಿ ಸೇವೆ ಸುಲಭವಾಗಿ ದೊರೆಯಬೇಕು ಎನ್ನುವ ಉದ್ದೇಶದಿಂದ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಕಛೇರಿಗಳ ಸಂಕೀರ್ಣದ ರಚನೆಯ ಗುರಿ ಹೊಂದಲಾಗಿದ್ದು, 30 ಜಿಲ್ಲೆಗಳ ಪೈಕಿ 8 ಮಾತ್ರ ಆಗಬೇಕಿದೆ. ತಾಲೂಕು ಮಟ್ಟದಲ್ಲಿ ಎಲ್ಲಾ ಕಛೇರಿಗಳನ್ನು ಒಂದೇ ಸೂರಿನಡಿ ತರುವ ಕಲ್ಪನೆಯಡಿ ರಾಜ್ಯದ 178 ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಾಣದ ಗುರಿ ಹೊಂದಲಾಗಿದ್ದು,128 ತಾಲೂಕುಗಳ ಪೈಕಿ, 128 ತಾಲೂಕುಗಳಲ್ಲಿ ಮಿನಿ ವಿಧಾನಸೌಧ ಇದ್ದು, 20ಕಡೆ ಕಾಮಗಾರಿ ಪ್ರಗತಿಯಲ್ಲಿದೆ. ಹೊಸದಾಗಿ 12ಕ್ಕೆ ಅನುಮತಿ ನೀಡಲಾಗಿದ್ದು, 18ಕ್ಕೆ ಅನುಮತಿ ನೀಡಬೇಕಿದೆ. ಪ್ರಸಕ್ತ ಒಟ್ಟು 10 ಕೋಟಿ ವೆಚ್ಚದಲ್ಲಿ ಕಾಮಗಾರಿಗಳು ನಡೆಯಲಿದೆ. ಕುಂದಾಪುರ ಈ ಮಿನಿ ವಿಧಾನಸೌಧವನ್ನು ಪರಿಪೂರ್ಣ ಗೊಳಿಸಲು ಇನ್ನೂ ನೀಡಲಾಗುವುದು ಎಂದರು.

Kundapura_Vidhanasoudha_Inaugaration (14) Kundapura_Vidhanasoudha_Inaugaration (13) Kundapura_Vidhanasoudha_Inaugaration (12) Kundapura_Vidhanasoudha_Inaugaration (11) Kundapura_Vidhanasoudha_Inaugaration (9) Kundapura_Vidhanasoudha_Inaugaration (10) Kundapura_Vidhanasoudha_Inaugaration (8) Kundapura_Vidhanasoudha_Inaugaration (7) Kundapura_Vidhanasoudha_Inaugaration (6) Kundapura_Vidhanasoudha_Inaugaration (5) Kundapura_Vidhanasoudha_Inaugaration (4) Kundapura_Vidhanasoudha_Inaugaration (3) Kundapura_Vidhanasoudha_Inaugaration (1) Kundapura_Vidhanasoudha_Inaugaration (2) Kundapura_Vidhanasoudha_Inaugaration (25) Kundapura_Vidhanasoudha_Inaugaration (24) Kundapura_Vidhanasoudha_Inaugaration (21) Kundapura_Vidhanasoudha_Inaugaration (22) Kundapura_Vidhanasoudha_Inaugaration (23) Kundapura_Vidhanasoudha_Inaugaration (26) Kundapura_Vidhanasoudha_Inaugaration (20) Kundapura_Vidhanasoudha_Inaugaration (19) Kundapura_Vidhanasoudha_Inaugaration (18) Kundapura_Vidhanasoudha_Inaugaration (15) Kundapura_Vidhanasoudha_Inaugaration (16) Kundapura_Vidhanasoudha_Inaugaration (17)

ಎಲ್ಲ ಇಲಾಖೆಗಳಿಗೂ ಕಂದಾಯ ಇಲಾಖೆ ಮಾತೃ ಸಂಸ್ಥೆ ಆದ್ದರಿಂದ ಸಮನ್ವಯತೆಯಿಂದ ಕೆಲಸ ಮಾಡಲಾಗುತ್ತಿದೆ. ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ಮೂಲಕ ಸಮಸ್ಯೆಗಳ ಪರಿಹರಿಸುವ ಕೆಲಸ ಆಗುತ್ತಿದೆ. 94ಸಿಯಲ್ಲಿ ಮನೆಯಡಿ ಸ್ಥಳ ಸಕ್ರಮೀಕರಣ ಹಕ್ಕುಪತ್ರ ನೀಡುವ ಕಾರ್ಯ ಆರಂಭವಾಗಿದೆ.2016 ಮಾರ್ಚ್ ಅಂತ್ಯದೊಳಗೆ ಎಲ್ಲ ಆರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ನೀಡಲಾಗುವುದು. ಪ್ರಸ್ತಾವಿತ 94 ಸಿಸಿ ಮೂಲಕವೂ ಸಕ್ರಮೀಕರಣ ಪ್ರಕ್ರಿಯೆ ನಡೆಯಲಿದೆ.9/11 ಭೂಮಿಯ ಬಗ್ಗೆ ಮಂಗಳವಾರ ಸಭೆ ಸೇರಲಿದ್ದು, ಸಂಬಂಧಪಟ್ಟ ಸಚಿವರು, ಶಾಸಕರು, ಅಧಿಕಾರಿಗಳು ಭಾಗವಹಿಸಲಿದ್ದಾರೆ. ಒಟ್ಟಾರೆಯಾಗಿ ಕರಾವಳಿ ಭಾಗದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಆಗುತ್ತಿದೆ ಎಂದರು.

ಕುಂದಾಪುರ-ಕೋಡಿ ಸೇತುವೆಯನ್ನು ಉದ್ಘಾಟಿಸಿದ ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ಕಂದಾಯ ಇಲಾಖೆಯ ಮೂಲಕ ಇಂದು ಸಮಗ್ರ ಬದಲಾವಣೆಗೆ ಸಾಧ್ಯವಾಗುತ್ತಿದೆ. ರಾಜ್ಯದ 1.30 ಕೋಟಿ ಆರ್.ಟಿ.ಸಿಯಲ್ಲಿ ೮೦ಲಕ್ಷ ಆರ್.ಟಿ.ಸಿಯಲ್ಲಿ ಲೋಪ ಕಂಡು ಬಂದಿತ್ತು. ಅದನ್ನು ಕಂದಾಯ ಅದಾಲತ್ ಮೂಲಕ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಭೂ ಮಾಫಕರ ಕೊರತೆಯಿಂದ 10ಲಕ್ಷಕ್ಕೂ ಅರ್ಜಿಗಳು ಬಾಕಿ ಇದ್ದು ಜಿಲ್ಲೆಯಲ್ಲಿ 52ಮಂದಿ ಸರ್ವೇಯರ್ ನೇಮಕಾತಿಯಿಂದ ಸಮಸ್ಯೆ ಪರಿಹಾರಗೊಂಡಿದೆ. ಇದೀಗ 94ಸಿಸಿ ಘೋಷಣೆಯಾಗಿದ್ದು, ಸರ್ಕಾರಿ ಸ್ಥಳದಲ್ಲಿ ಮನೆ ನಿರ್ಮಾಣ ಮಾಡಿಕೊಂಡವರಿಗೆ ಹಕ್ಕು ಪತ್ರ ದೊರೆಯಲಿದೆ ಎಂದರು.

ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಬೈಂದೂರು ಕ್ಷೇತ್ರದ ಶಾಸಕ ಕೆ.ಗೋಪಾಲ ಪೂಜಾರಿ, ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಪುರಸಭೆ ಅಧ್ಯಕ್ಷೆ ಕಲಾವತಿ ಯು.ಎಸ್., ಜಿಲ್ಲಾಧಿಕಾರಿ ಡಾ.ವಿಶಾಲ್ ಆರ್., ಜಿ.ಪಂ.ಮುಖ್ಯ ಕಾರ್ಯನಿವಣಾಧಿಕಾರಿ ಎಂ.ಕನಗವಲ್ಲಿ, ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತೆ ಚಾರುಲತಾ ಸೋಮಲ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ೯೪ಸಿಯಲ್ಲಿ ೯ ಫಲಾನುಭವಿಗಳಿಗೆ ಹಕ್ಕುಪತ್ರ ಸೇರಿದಂತೆ ವಿವಿಧ ಫಲಾನುಭವಿಗಳಿಗೆ ಸವಲತ್ತು ವಿತರಿಸಲಾಯಿತು. ಉಪ ತಹಶೀಲ್ದಾರ್ ಮುರಳಿಧರ ಶ್ಯಾನುಭಾಗ, ಆಹಾರ ನಿರೀಕ್ಷಕ ನಾಗಪ್ಪ, ಮಹಿಳಾ ಮಕ್ಕಳ ಕಲ್ಯಾಣ ಇಲಾಖೆಯ ಸದಾನಂದ, ತಾ.ಪಂಕಾರ್ಯನಿರ್ವಹಣಾಧಿಕಾರಿ ಶೇಷಪ್ಪ ಫಲಾನುಭವಿಗಳ ವಿವರ ನೀಡಿದರು. ಈ ಸಂದರ್ಭದಲ್ಲಿ ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು. ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಇಂಜಿನಿಯರ್ ಎಸ್.ಕೆ ಚಂದ್ರಶೇಖರ ಸ್ವಾಗತಿಸಿದರು. ಅಕ್ಷರ ದಾಸೋಹ ಕಾರ್ಯಕ್ರಮದ ಸೀತಾರಾಮ ಶೆಟ್ಟಿ-ಶಿಕ್ಷಣ ಇಲಾಖೆಯ ವೇಣುಗೋಪಾಲ ಹೆಗ್ಡೆ ಕಾರ್ಯಕ್ರಮ ನಿರ್ವಹಿಸಿ, ತಹಶೀಲ್ದಾರ್ ಗಾಯತ್ರಿ ನಾಯಕ್ ವಂದಿಸಿದರು.

Write A Comment