ಮಂಗಳೂರು : ನಗರದ ಹೊರಹೊಲಯದ ನೀರುಮಾರ್ಗದಲ್ಲಿರುವ ಪ್ರತಿಷ್ಠಿತ ಕರಾವಳಿ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯಲ್ಲಿ ಕರಾವಳಿ ಕಾಲೇಜಿನ ಇಂಟೀರಿಯರ್ ಡಿಸೈನ್ ಮತ್ತು ಫ್ಯಾಶನ್ ಡಿಸೈನ್ ವಿಭಾಗಗಳ ಹಾಗೂ ಕರಾವಳಿ ಇನ್‌ಸ್ಟಿಟ್ಯೂಟ್ ಆಪ್ ಟೆಕ್ನಾಲಜಿಯ ಎಂಬಿಎ ಸ್ನಾತಕೋತ್ತರ ವಿಭಾಗದ ಸಹಯೋಗದೊಂದಿಗೆ ಶನಿವಾರ ರಾಷ್ಟ್ರ ಮಟ್ಟದ ಯೂತ್ ಫೆಸ್ಟ್ “ಡಿಸೈನ್ ಫಿಯೆಸ್ಟ – 2015” ಸ್ಫರ್ಧೆ ನಡೆಯಿತು.
ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾಟಿಸಿ, ಇಂದಿನ ವಿದ್ಯಾರ್ಥಿಗಳು ತಮ್ಮಲ್ಲಿ ಹುದುಗಿರುವ ಪ್ರತಿಭೆಗಳನ್ನು ಹೊರತರುವಲ್ಲಿ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿದೆ. ಕರಾವಳಿ ಕಾಲೇಜು ಸಮೂಹದ ವತಿಯಿಂದ ವಿಧ್ಯಾರ್ಥಿಗಳ ಪ್ರತಿಭೆಗಳನ್ನು ಬೆಳಕಿಗೆ ತರುವಂತಹ ಇಂತಹ ಕಾರ್ಯಕ್ರಮಗಳು ಅಗುತ್ತಿರುವುದು ತುಂಬಾ ಹೆಮ್ಮೆಯ ವಿಷಯ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.
ಎಲ್ಲಾ ರಂಗಗಳಲ್ಲೂ ವಿಫುಲ ಅವಕಾಶಗಳಿರುವ ಇಂದಿನ ದಿನಗಳಲ್ಲಿ ಯುವ ಸಮೂಹವೂ ತಮ್ಮಲ್ಲಿರುವ ಅಗಾಧವಾದ ಪ್ರತಿಭೆಗಳ ಮೂಲಕ ದೇಶಕ್ಕೆ ಕೀರ್ತಿ ತರುವಂತಹ ನಕ್ಷತ್ರಗಳಾಗಿ ರೂಪುಗೊಳ್ಳಬೇಕು ಎಂದು ಶುಭ ಹಾರೈಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಕರಾವಳಿ ಕಾಲೇಜುಗಳ ಸಮೂಹದ ಆಡಳಿತ ಮಂಡಳಿ ಹಾಗೂ ಜಿ.ಆರ್.ಎಜುಕೇಶನ್ ಟ್ರಸ್ಟ್ ಸ್ಥಾಪಕಾಧ್ಯಕ್ಷ ಎಸ್.ಗಣೇಶ್ ರಾವ್ ಮಾತನಾಡಿ, ಶಿಕ್ಷಣ ಸಂಸ್ಥೆಗಳು ವಿಧ್ಯಾರ್ಥಿಗಳಿಗೆ ಶಿಕ್ಷಣ ನೀಡುತ್ತದೆ. ಆದರೆ ಅದಕ್ಕೂ ಮೀರಿದ ಪ್ರತಿಭೆಗಳು ವಿಧ್ಯಾರ್ಥಿಗಳಲ್ಲಿ ಇರುತ್ತದೆ. ಈ ರೀತಿ ವಿಧ್ಯಾರ್ಥಿಗಳಲ್ಲಿ ಅಡಗಿರುವ ಪ್ರತಿಭೆಗಳನ್ನು ಬೆಳಕಿಗೆ ತರುವ ಕೆಲಸವನ್ನು ಕರಾವಳಿ ಕಾಲೇಜು ಮಾಡುತ್ತಿದೆ. ನಾವು ಪಾಲ್ಗೊಳ್ಳುವ ಯಾವೂದೇ ಸ್ಫರ್ಧೆಗಳಲ್ಲಿ ಬಹುಮಾನ ಸಿಗಲಿ, ಸಿಗದಿರಲಿ, ಆದರೆ ಸ್ಪರ್ಧೆಗಳಲ್ಲಿ ಭಾಗವಹಿಸುವ ಮನೋಭಾವನೆ ಅತೀ ಮುಖ್ಯ. ಶಿಕ್ಷಣ ಸಂಸ್ಥೆಯಾಗಲಿ, ಸಂಘ ಸಂಸ್ಥೆಯಾಗಲಿ, ಸರಕಾರವಾಗಲಿ, ಇವರೆಲ್ಲರಿಂದ ಪ್ರತಿಯೋಬ್ಬ ವಿಧ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸುವ ಕೆಲಸವಾಗಬೇಕಿದೆ ಎಂದರು.
ವಿಧ್ಯಾರ್ಥಿಗಳು ಶಿಕ್ಷಣದ ಜೊತೆಜೊತೆಗೆ ಪಾಠ್ಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು, ಸಾಧನೆ ಮಾಡಬೇಕು. ಜೊತೆಗೆ ನಮ್ಮ ದೇಶ, ಗುರು ಹಿರಿಯರು, ತಂದೆ,ತಾಯಿ ಎಲ್ಲರನ್ನೂ ಗೌರವಿಸುವ ಮನೋಭಾವನೆಯನ್ನು ಬೆಳಿಸಿಕೊಂಡು, ತಾಳ್ಮೆಯಿಂದ, ಜಾಣತನದಿಂದ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸುವಲ್ಲಿ ಮುಂದಾಗಬೇಕು ಎಂದು ಗಣೇಶ್ ರಾವ್ ಕರೆಕೊಟ್ಟರು.
ಫ್ಯಾಶನ್ ಶೋ, ಜನಪದ ನೃತ್ಯ, ಫೋಟೋಗ್ರಾಫಿ, ಕ್ಲೆ ಮಾಡೆಲಿಂಗ್, ಮಾಡೆಲ್ ಮೇಕಿಂಗ್, ಫ್ಲವರ್ ಎರೇಂಜ್‌ಮೆಂಟ್, ಎಸ್ಸೆಸರಿ ಮೇಕಿಂಗ್, ಫೇಸ್ ಪೈಂಟಿಂಗ್, ಮ್ಯಾಡ್ ಆಡ್, ಟ್ರೆಷರ್ ಹಂಟ್, ಮುಂತಾದ ವಿಷಗಳ ಬಗ್ಗೆ ಸ್ಫರ್ಧೆಗಳು ನಡೆಯಿತು.
ಸ್ಫರ್ಧೆಯ ಅಂಗವಾಗಿ ಕರಾವಳಿ ಕಾಲೇಜಿನ ಫ್ಯಾಶನ್ ಡಿಸೈನ್ ವಿಭಾಗದ ವಿಧ್ಯಾರ್ಥಿಗಳಿಂದ ಅತ್ಯಾಕರ್ಷಕ ಫ್ಯಾಶನ್ ಶೋ ನಡೆಯಿತು. ವಿದ್ಯಾರ್ಥಿಗಳು ತಾವೇ ಸಿದ್ದಪಡಿಸಿದ ಉಡುಪುಗಳನ್ನು ಧರಿಸಿ, ಫ್ಯಾಶನ್ ಶೋ ಮೂಲಕ ತಮ್ಮ ಪ್ರತಿಭೆ ಪ್ರದರ್ಶಿಸಿದರು. ಇದೇ ಸಂದರ್ಭದಲ್ಲಿ ಕರಾವಳಿ ಕಾಲೇಜಿನ ಇಂಟೀರಿಯರ್ ಡಿಸೈನ್ ವಿಭಾಗದ ವಿಧ್ಯಾರ್ಥಿಗಳು ನಿರ್ಮಿಸಿದ ಇಂಟೀರಿಯರ್ ಮಾಡೆಲ್ ಹಾಗೂ ಚಿತ್ರಕಲಾ ಪ್ರದರ್ಶನ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.
ಕಾಲೇಜಿನ ನಿರ್ದೇಶಕಿ ಲತಾ.ಜಿ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.ಕಾಲೇಜಿನ ವಿವಿಧ ವಿಭಾಗಗಳ ಪ್ರಾಂಶುಪಾಲರುಗಳಾದ ಪ್ರೋ .ಸದಾಶಿವಯ್ಯ, ಪ್ರೋ. ನಾರಾಯಣ ಸ್ವಾಮಿ, ಫ್ರೋ. ಮೋಹನ್, ಪ್ರೋ. ಅನಂದ್ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿಪೀಕಾ ಸ್ವಾಗತಿಸಿದರು, ಶೃತಿ ಕಾರ್ಯಕ್ರಮ ನಿರೂಪಿಸಿದರು, , ರೇಷ್ಮಾ ವಂದಿಸಿದರು.
ದೇಶದ ಬೇರೆ ಬೇರೆ ರಾಜ್ಯಗಳ ಸುಮಾರು 20 ಕಾಲೇಜುಗಳಿಂದ 500ಕ್ಕೂ ಹೆಚ್ಚು ವಿಧ್ಯಾರ್ಥಿಗಳು ಈ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು.
ಸಂಜೆ ಸಮಾರೋಪ :
ವೇದಿಕೆಯಲ್ಲಿ ಅತಿಥಿಗಣ್ಯರಿಂದ ಟ್ರೋಫಿ ಅನಾವರಣ ಹಾಗೂ ನಗದು ಬಹುಮಾನದ ಚೆಕ್ ಅನಾವರಣ
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಸ್ಫರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ಮತ್ತು ಟ್ರೋಫಿ, ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಗುವುದು












