ಕನ್ನಡ ವಾರ್ತೆಗಳು

ವಸಯಿ ತಾಲೂಕು ಮೊಗವೀರ ಸಂಘದಿಂದ ಅದ್ಧೂರಿಯ ತುಳು-ಕನ್ನಡಿಗರ ಹಬ್ಬ

Pinterest LinkedIn Tumblr

mumbai_tulu_fest_1

ವರದಿ : ಈಶ್ವರ ಎಂ. ಐಲ್

ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ವಸಯಿ ತಾಲೂಕು ಮೊಗವೀರ ಸಂಘದ ವತಿಯಿಂದ ತನ್ನ ಐದನೇ ವಾರ್ಷಿಕೋತ್ಸವ ನಿಮಿತ್ತ ಜ. 17 ಮತ್ತು 18ರಂದು ಎರಡು ದಿನಗಳ ಕಾಲ ವಸಯಿ ಪಶ್ಚಿಮದ ವಸಯಿ – ವಿರಾರ್ ಮಹಾನಗರ ಪಾಲಿಕೆ ಮೈದಾನದಲ್ಲಿ ತುಳು-ಕನ್ನಡಿಗರ ಹಬ್ಬ ವನ್ನು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, 30ಕ್ಕೂ ಮಿಕ್ಕಿ ಸ್ಟಾಲ್ ಗಳಲ್ಲಿ ಊರಿನ ವಿವಿಧ ತಿಂಡಿ-ತಿನಿಸು, ಮೀನಿನ ಖಾದ್ಯ, ನೃತ್ಯ, ಸಂಗೀತ, ನಾಟಕ, ಕರಾವಳಿಯ ಸೀರೆಗಳ ಪದರ್ಶನ, ಆಟೋಟಗಳ ಮಳಿಗೆಗಳು, ಇತ್ಯಾದಿಗಳಿಂದ ಆಚರಿಸಲಾಯಿತು.

mumbai_tulu_fest_2 mumbai_tulu_fest_3a mumbai_tulu_fest_4a mumbai_tulu_fest_5 mumbai_tulu_fest_6q

ವಸಯಿ ಮಣಿಕಂಠ ಸೇವಾ ಸಮಿತಿಯ ಅಧ್ಯಕ್ಷರಾದ ಕರ್ನೂರು ಶಂಕರ ಆಳ್ವ ಅವರು ಎರಡು ದಿನಗಳ ಹಬ್ಬವನ್ನು ಉದ್ಘಾಟಿಸಿ ಶುಭ ಹಾರೈಸಿದರು.

ಅತಿಥಿಗಳಾಗಿ ಆಗಮಿಸಿದ ಲ. ಶಂಕರ್ ಕೆ. ಟಿ. ಯವರು ಇಂತಹ ಹಬ್ಬಕ್ಕೆ ತುಳು-ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿ ಪ್ರೋತ್ಸಾಹಿಸಬೇಕೆಂದರು. ವಸಯಿ – ವಿರಾರ್ ಮಹಾನಗರ ಪಾಲಿಕೆಯ ಮಾಜಿ ಸದಸ್ಯೆ ರಾಜೇಶ್ವರಿ ನಾರಾಯಣ ಅವರು ಮಾತನಾಡುತ್ತಾ ಈ ಪರಿಸರದಲ್ಲಿ ಇದಕ್ಕಿಂತಲೂ ದೊಡ್ಡ ಸಂಸ್ಥೆಗಳಿದ್ದು ಇಂತಹ ಮಹತ್ತರ ಕಾರ್ಯಕ್ರಮಗಳನ್ನು ವಸಯಿ ತಾಲೂಕು ಮೊಗವೀರ ಸಂಘವು ಆಚರಿಸುತ್ತಿರುವುದು ಪ್ರಶಂಸನೀಯ ಎಂದರು.

mumbai_tulu_fest_7 mumbai_tulu_fest_8 mumbai_tulu_fest_9 mumbai_tulu_fest_10a mumbai_tulu_fest_11

ಜ. 18 ರಂದು ಸಂಜೆ ಜರಗಿದ ಸಮಾರೋಪ ಸಮಾರಂಭದ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೊಗವೀರ ಬ್ಯಾಂಕಿನ ಉಪಾಧ್ಯಕ್ಷ ಎಸ್. ವೈ. ಸುವರ್ಣ ವಹಿಸಿದ್ದು ಸಂಘದ ಐದು ವರ್ಷಗಳ ಸಾಧನೆಯನ್ನು ಮೆಚ್ಚಿದರು. ಮೊಗವೀರ ಬ್ಯಾಂಕಿನ ಅಭಿವೃದ್ದಿಗೆ ಈ ಸಂಘದ ಪ್ರೋತ್ಸಾಹದ ಬಗ್ಗೆ ಮೆಚ್ಚಿ ಮಾತನಾಡಿದರು.

ವಸಯಿ – ವಿರಾರ್ ಮೇಯರ್ ನಾರಾಯಣ ವೈಕರ್ ಅವರು ಮುಖ್ಯ ಅತಿಥಿಯಾಗಿದ್ದು ನಿಮ್ಮೆಲ್ಲರ ಪ್ರೋತ್ಸಾಹದಿಂದ ನಾನು ಈ ಮಟ್ಟಕ್ಕೆ ಬಂದಿದ್ದು, ನಗರ ಪಾಲಿಕೆಯಿಂದ ಹಾಗೂ ತನ್ನ ಕಚೇರಿಯಿಂದ ಸಾದ್ಯವಾದ ಸಹಕಾರ ವನ್ನು ಈ ಸಂಘಕ್ಕೆ ನೀಡುವೆನು, ಎಂದರು.  ಸಂಘದ ವತಿಯಿಂದ ಶಾಲಾ, ಕಾಲೇಜು ನಿರ್ಮಿಸುವ ಯೋಜನೆಯಿದ್ದು ಅದಕ್ಕೂ ನನ್ನ ಪ್ರೋತ್ಸಾಹವಿದೆ ಎಂದರು.

ಮುಖ್ಯ ಅತಿಥಿ ಉದ್ಯಮಿ ದೇವದಾಸ ಕರ್ಕೇರ ಅವರು ಅಭಿನಂದಿಸುತ್ತಾ ಮುಂದಿನ ಐದು ವರ್ಷಗಳಲ್ಲಿ ವಸಯಿ ತಾಲೂಕು ಮೊಗವೀರ ಸಂಘದಿಂದ ಮೊಗವೀರ ಕಾಲೊನಿ, ಶಾಲೆ, ಸಭಾಗೃಹ ಹಾಗೂ ಆಸ್ಪ್ರತ್ರೆ ಯು ಸ್ಥಾಪನಿಯಾಗಲಿ ಎಂದು ಹಾರೈಸಿದರು.

ಉದ್ಯಮಿ ಗೋವರ್ಧನ್ ಸುವರ್ಣ, ಕೆ. ಬಿ. ಪೂಜಾರಿ ಅವರೂ ಮಾತನಾಡಿದರು. ವಿರಾರ್ ಶಂಕರ್ ಶೆಟ್ಟಿ, ನಗರ ಪಾಲಿಕೆಯ ಉಮಾ ಪಾಟೀಲ್, ಪೋಲೀಸ್ ಅಧಿಕಾರಿ ಕೆ. ಎಸ್. ಹಿಗಾರಿ, ಹೋಟೇಲು ಉಧ್ಯಮಿ ಆಶೋಕ ಶೆಟ್ಟಿ, ರಜಕ ಸಂಘದ ದೇವೇಂದ್ರ ಬನ್ನನ್, ಎ. ಕೆ. ತಿಂಗಳಾಯ, ಅಧ್ಯಕ್ಷ ಯಶೋಧರ ಕೋಟ್ಯಾನ್, ಗೌರವ ಅಧ್ಯಕ್ಷ ರಘು ಸುವರ್ಣ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಮಲ್ಪೆ, ಕಾರ್ಯದರ್ಶಿ ಪ್ರದೀಪ್ ಪುತ್ರನ್, ಕೋಶಾಧಿಕಾರಿ ತಿಲಕ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಅತಿಥಿಗಳು ವಿದ್ಯಾನಿಧಿ-ಆರೋಗ್ಯ ನಿಧಿ ಸಂಚಯನ ಪ್ರಾರಂಭಿಸಿದರು

ಅರ್ಪಿತ ಶೆಟ್ಟಿ ಮತ್ತು ಚಂದ್ರಶೇಖರ ಪುತ್ರನ್ ಕಾರ್ಯಕ್ರಮವನ್ನು ಅಚ್ಚುಕಟ್ಟಾಗಿ  ನಿರ್ವಹಿಸಿದರು. ದಯಾನಂದ ಕುಂದರ್ ವಂದನಾರ್ಪಣೆ ಗೈದರು.

ಹೇಮಚಂದ್ರ ಎರ್ಮಾಳ್ ಮತ್ತು ತಂಡದವರಿಂದ ಆರ್ಕೆಸ್ಟಾ, ಮಹಿಳಾ ವಿಭಾಗದವರಿಂದ ತುಳು ನಾಟಕ ಪ್ರದರ್ಶನಗೊಂಡಿತು.

Write A Comment