ಕನ್ನಡ ವಾರ್ತೆಗಳು

ನಗರ ಬಿಪಿ‌ಎಲ್ ಕಟುಂಬಗಳಿಗೆ ಸ್ಮಾರ್ಟ್ ಕಾರ್ಡು ವಿತರಣೆ

Pinterest LinkedIn Tumblr

smart_card_photo

ಮಂಗಳೂರು,ಜ.20 : ಮಂಗಳೂರು ನಗರದ ಬಿಪಿ‌ಎಲ್ ಕಟುಂಬಗಳಿಗೆ ರಾಷ್ಟ್ರೀಯ ಸ್ವಾಸ್ಥ್ಯ ಬಿಮಾ ಯೋಜನೆಯಡಿ ದಿನಾಂಕ: 24-01-2015 ರಿಂದ ದಿನಾಂಕ: 17-02-2015 ರ ವರೆಗೆ ಸಂಬಂಧಿಸಿದ ನ್ಯಾಯ ಬೆಲೆ ಅಂಗಡಿಗಳ ಸಮೀಪವಿರುವ ಶಾಲೆಗಳಲ್ಲಿ /ಸಮುದಾಯ ಭವನಗಳಲ್ಲಿ ಸ್ಮಾರ್ಟ್ ಕಾರ್ಡು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಿನಾಂಕ: 24-01-2015 ರಿಂದ  ದಿನಾಂಕ: 27-01-2015 ರವರೆಗೆ ( ದಿನಾಂಕ: 26/01/2015 ಹೊರತುಪಡಿಸಿ) ಮೂರು ದಿನಗಳ ಕಾಲ ಉಳ್ಳಾಲ ಮತ್ತು ತೊಕ್ಕೋಟು ವ್ಯಾಪ್ತಿಯ ನ್ಯಾಯಬೆಲೆ ಅಂಗಡಿಗಳಿಗೆ ಹೊಂದಿಕೊಂಡಿರುವ ಬಿಪಿ‌ಎಲ್ ಕಟುಂಬಗಳಿಗೆ ಉಳ್ಳಾಲದ ಪುರಸಭಯ ಕಛೇರಿ ಸಮುದಾಯ ಭವನ ಹಾಗು ತೊಕ್ಕೊಟ್ಟುವಿನ ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ಕಛೇರಿ ಕಟ್ಟಡದ ಹಾಲ್, ಒಳಪೇಟೆ, ತೊಕ್ಕೊಟುವಿನಲ್ಲಿ ನೋಂದಣಿಕಾರ್ಯ ನಡೆಯಲಿದೆ.

ಈ ಯೋಜನೆಯಡಿ ಸ್ಮಾರ್ಟ್ ಕಾರ್ಡು ಪಡೆಯಲಿರುವ ಅರ್ಹ ಕುಟುಂಬಗಳ ಪಟ್ಟಿ ಮತ್ತು ನೊಂದಣಿ ಸ್ಥಳದ ವಿವರವನ್ನು ನ್ಯಾಯ ಬೆಲೆ ಅಂಗಡಿಗಳಲ್ಲಿ ಪ್ರದರ್ಶಿಸಲಾಗುವುದು. ತಮ್ಮತಮ್ಮ ನ್ಯಾಯ ಬೆಲೆ ಅಂಗಡಿಗಳನ್ನು ಸಂಪರ್ಕಿಸಿ ತಮ್ಮ ಹೆಸರುಗಳನ್ನು ಪರಿಶೀಲಿಸಿಕೊಂಡು, ನಿಗಧಿತ ದಿನಾಂಕದಂದು ಮೂಲ ಬಿಪಿ‌ಎಲ್ ಪಡಿತರ ಚೀಟಿಯೊಂದಿಗೆ ಕುಟುಂಬದ ಮುಖ್ಯಸ್ಥರು ಹಾಗು ನಾಲ್ಕು ಜನ ಅವಲಂಬಿತ ಸದಸ್ಯರು ನೊಂದಣಿ ಕೇಂದ್ರಗಳಿಗೆ ಹಾಜರಾಗಬಹುದಾಗಿದೆ. ವಿಮೆ ಪೂರ್ಣ ಉಚಿತವಾಗಿದ್ದು, ಸ್ಮಾಟ್ ಕಾರ್ಡು ವೆಚ್ಚವಾಗಿ ರೂ.30/ ನ್ನು ಪಾವತಿಸಬೇಕಾಗಿರುತ್ತದೆ.

ಈ ಯೋಜನೆಯಡಿ ನೋಂದಾಯಿತ ಫಲಾನುಭವಿಗಳು 1516  ಬಗೆಯ ಕಾಯಲೆಗಳಿಗೆ ಹಾಗೂ ಚಿಕಿತ್ಸಾ ಕ್ರಮಗಳಿಗೆ ವಾರ್ಷಿಕ ರೂ.30,000/ ಗಳ ಉಚಿತ ಚಿಕಿತ್ಸೆಯನ್ನು ನೊಂದಾಯಿತ ಆಸ್ಪತ್ರೆಗಳಲ್ಲಿ ಪಡೆಯಬಹುದಾಗಿದೆ. ನ್ಯಾಯ ಬೆಲೆ ಅಂಗಡಿಗಳಲ್ಲಿ ಲಭ್ಯವಿರುವ ಪಟ್ಟಿಯಲ್ಲಿ ಹೆಸರು ಇರದ್ದಿದ್ದರೂ, 2013ರ ಅಂತ್ಯಕ್ಕೆ ಬಿಪಿ‌ಎಲ್ ಪಡಿತರ ಚೀಟ ಹೊಂದಿದವರಾಗಿದ್ದಲ್ಲಿ ಅಂತಹ ಪಡಿತರ ಚೀಟಿಯೊಂದಿಗೆ ನೋಂದಣಿ ಕೇಂದ್ರಕ್ಕೆ ಬಂದು ಹೆಸರು ಪರಿಶೀಲಿಸಿಕೊಳ್ಳಬಹುದು. ಹೆಸರು ಇದ್ದಲ್ಲಿ ಅವರಿಗೂ ಸಹ ಸ್ಮಾರ್ಟ್ ಕಾರ್ಡು ನೀಡಲಾಗುವುದು.

Write A Comment