ಕನ್ನಡ ವಾರ್ತೆಗಳು

ಆಸ್ತಿಗಾಗಿ ಶಿವಶರಣೆ ಆತ್ಮಹತ್ಯೆಗೆ ಶರಣು

Pinterest LinkedIn Tumblr

shiva_nnada_matta

ಕೊಪ್ಪಳ,ಜ. 20 : ಆಸೆಗಳಿಂದ ದೂರಾಗಿ, ಸಂಸಾರ ತ್ಯಜಿಸಿ ಮಠದಲ್ಲಿದ್ದ ಶಿವಶರಣೆ ಆಸ್ತಿ ಸಲುವಾಗಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆಸ್ತಿ ವಿವಾದದ ಸೇಡು ತೀರಿಸಿಕೊಳ್ಳಲು ತನ್ನ ಗುರುಗಳಿಗೇ ಬೆಂಕಿ ಇಟ್ಟಿದ್ದಾಳೆ.

ಯಲಬುರ್ಗಾ ತಾಲೂಕು ಮರಕಟ್ ಗ್ರಾಮದ ಶಿವನಂದ ಮಠದಲ್ಲಿ ಸೋಮವಾರ ಈ ಘಟನೆ ನಡೆದಿದೆ. ಸೀಮೆಎಣ್ಣೆ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡ ಶಿವಶರಣೆ ಪ್ರಭಾವತಿ ದೇವಿ(40) ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಗಾಯಗೊಂಡಿರುವ ಶಿವಾನಂದ ಮಠದ ಶಿವಯ್ಯ ತಾತ(80) ಬಾಗಲಕೋಟೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಪರಿಸ್ಥಿತಿ ಚಿಂತಾಜನಕವಾಗಿದೆ.

ಏನು ಕಾರಣ? ಮಠದ ಆಸ್ತಿಯ ವಿವಾದ ಮತ್ತು ಉತ್ತಾರಾಧಿಕಾರಿ ನೇಮಕ ಕುರಿತು ಐದು ವರ್ಷಗಳಿಂದ ಶಿವಯ್ಯ ತಾತನವರು ಹಾಗೂ ಪ್ರಭಾವತಿದೇವಿ ನಡುವೆ ವಿವಾದ ಇತ್ತು. ಮಠದ ಉತ್ತಾರಾಧಿಕಾರ ನೇಮಕ ಹಾಗೂ ಆಸ್ತಿ ಕುರಿತು ಉಯಿಲು ಬರೆದು ಗದುಗಿನ ಶಿವಾನಂದ ಮಠದ ಶ್ರೀಗಳಿಗೆ ಶಿವಯ್ಯ ತಾತ ಐದು ವರ್ಷ ಹಿಂದೆಯೇ ನೀಡಿದ್ದರು.

ಇದರಿಂದ ಬೇಸತ್ತಿದ್ದ ಪ್ರಭಾವತಿದೇವಿ ನಾಲ್ಕಾರು ಬಾರಿ ಮಠ ಬಿಟ್ಟುಹೋಗಿದ್ದರು. ಗ್ರಾಮಸ್ಥರೇ ಸಮಾಧಾನ ಮಾಡಿ, ಮರಳಿ ಕರೆತಂದಿದ್ದರು. ಆದರೆ, ಸೋಮವಾರ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ. ತಾತನವರು ಪೂಜೆ ಮಾಡುತ್ತಿದ್ದ ವೇಳೆ ಮಠದ ಎರಡೂ ಬಾಗಿಲಿಗೆ ಕೀಲಿ ಹಾರಿಕೊಂಡ ಪ್ರಭಾವತಿದೇವಿ, ಮೈ ಮೇಲೆ ಸೀಮೆಎಣ್ಣೆ ಸುರಿದುಕೊಂಡು, ತಾತನವರ ಮೇಲೂ ಎರಚಿ, ಕಡ್ಡಿ ಗೀರಿದ್ದಾರೆ

Write A Comment