ಕನ್ನಡ ವಾರ್ತೆಗಳು

ಜ.18 : ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮ

Pinterest LinkedIn Tumblr

pals_polio_photo

ಮಂಗಳೂರು,ಜ.12 : ಪೋಲಿಯೋ ರೋಗ ನಿರ್ಮೂಲನಾ ಕಾರ್ಯಕ್ರಮದಡಿಯಲ್ಲಿ 2015 ರ ರಾಷ್ಟ್ರೀಯ ಪಲ್ಸ್ ಪೋಲಿಯೋ ಕಾರ್ಯಕ್ರಮದ ಮೊದಲನೇ ಸುತ್ತು 18-01-2015 ರ ಭಾನುವಾರದಂದು ಜರುಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯ 0- 5 ವರ್ಷದೊಳಗಿರುವ ಎಲ್ಲಾ ಮಕ್ಕಳಿಗೂ ತಪ್ಪದೇ ಪೋಲಿಯೋ ಲಸಿಕೆ ಹಾಕಿಸಬೇಕಾಗಿರುತ್ತದೆ. ಪ್ರತಿಯೊಂದು ಮಗುವಿಗೂ ಪೋಲಿಯೋ ಲಸಿಕೆ ಹಾಕಿಸಿದಾಗ ಮಾತ್ರ ಪೋಲಿಯೋ ರೋಗ ನಿಯಂತ್ರಣ ಸಾಧ್ಯವಾಗುತ್ತದೆ. ಅದರಲ್ಲಿಯೂ ವಿಶೇಷವಾಗಿ ವಲಸೆ ಕಾರ್ಮಿಕರ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವುದು ಪ್ರಾಮುಖ್ಯವಾಗಿರುತ್ತದೆ.

ಮಂಗಳೂರು ನಗರಕ್ಕೆ ಆಗಮಿಸುವ ಕಾರ್ಮಿಕರು ಬೇರೆ ಬೇರೆ ರಾಜ್ಯಗಳಿಗೆ ಸಂಬಂಧಿಸಿದವರಾಗಿದ್ದು, ಸಾಮಾನ್ಯವಾಗಿ ಅವರ ಮಕ್ಕಳಿಗೆ ಸಾರ್ವತ್ರಿಕ ಲಸಿಕಾಕರಣ ಸರಿಯಾಗಿ ಆಗಿಲ್ಲದಿರುವುದು, ಅಲೆಮಾರಿ ಜನರು ವಾಸಿಸುವ ಪ್ರದೇಶಗಳಲ್ಲಿ ನೈರ್ಮಲ್ಯದ ಕೊರತೆ ಇರುವುದು, ಈ ಕಾರಣಗಳಿಂದ ಯಾವುದೇ ಸಮಯದಲ್ಲಿ ಪೋಲಿಯೋ ರೋಗ ಹರಡಿದರೆ ಆಶ್ಚರ್ಯವಲ್ಲ. ಇದಲ್ಲದೇ ನಮ್ಮ ಜಿಲ್ಲೆಯ ಮಕ್ಕಳನ್ನು ಕೂಡಾ ನಾವು ಪೋಲಿಯೋ ರಹಿತರನ್ನಾಗಿ ಕಾಪಾಡುವುದು ಅಗತ್ಯವಾಗಿರುತ್ತದೆ. ಈ ಕಾರಣದಿಂದಾಗಿ ನಮ್ಮ ಜಿಲ್ಲೆಯಲ್ಲಿರುವ ಎಲ್ಲಾ 0-5 ವರ್ಷದೊಳಗಿನ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸುವ ಗುರಿಯಿರಿಸಿಕೊಂಡು ಯೋಜನೆ ರೂಪಿಸಲಾಗಿರುತ್ತದೆ.

ಜನವರಿ 13, 2011 ನೇ ಇಸವಿಯಲ್ಲಿ ಪಶ್ಚಿಮಬಂಗಾಲದ ಹೌರಾದಲ್ಲಿ ಕಂಡು ಬಂದಂತಹ ಖಚಿತ ಪೋಲಿಯೋ ಪ್ರಕರಣ ನಮ್ಮ ದೇಶದಲ್ಲಿ ಕಂಡುಬಂದ ಕೊನೆಯ ಪ್ರಕರಣವಾಗಿರುತ್ತದೆ. ನಮ್ಮ ಜಿಲ್ಲೆಯ ಕೊನೆಯ ಖಚಿತ ಪೋಲಿಯೋ ಪ್ರಕರಣ 1999 ನೇ ಇಸವಿಯಲ್ಲಿ ಆಗಿರುತ್ತದೆ. 2014 ರ ಜನವರಿ 13 ಕ್ಕೆ ದೇಶವು ಪೋಲಿಯೋ ರಹಿತವಾಗಿ ಮೂರು ವರ್ಷಗಳಾದ್ದರಿಂದ ದೇಶವು ಪೋಲಿಯೋ ಪ್ರಸರಣ ನಡೆಯುವ ದೇಶಗಳ ಪಟ್ಟಿಯಿಂದ ಹೊರಬಿದಿದ್ದು ಪೋಲಿಯೋ ರಹಿತ ರಾಷ್ಟ್ರವೆಂದು ಪ್ರಮಾಣೀಕರಿಸಲ್ಪಟ್ಟಿತು.

Write A Comment