ಕನ್ನಡ ವಾರ್ತೆಗಳು

ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಮಹಾಸಮ್ಮೇಳನದಲ್ಲಿ ಮುತ್ತುಕೋಯ ತಂಙಳ್

Pinterest LinkedIn Tumblr

ssf_samelana_photo_1

ಮಂಗಳೂರು, ಜ.12:  ಇಸ್ಲಾಮ್ ಧರ್ಮದ ಫಿಕ್‌ಅ್ಗಳಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾದಾಗ ಅದಕ್ಕೆ ಪರಿಹಾರ ನೀಡಲು ಉಲಮಾಗಳ ಸಂಘಟನೆ ಇದೆ. ರಾಜಕೀಯ ಮುಖಂಡರು, ಇನ್ನಿತರ ಕ್ಷೇತ್ರದ ತಜ್ಞರು ಆ ವಿಷಯದಲ್ಲಿ ಮಧ್ಯಪ್ರವೇಶ ಮಾಡುವ ಅಗತ್ಯವಿಲ್ಲ. ಉಳ್ಳಾಲದ ಮಸೀದಿಯೊಂದರ ಜುಮಾ ನಮಾಝ್‌ಗೆ ಸಂಬಂಧಿಸಿ ಕರ್ನಾಟಕ ರಾಜ್ಯ ವಕ್ಫ್ ಬೋರ್ಡ್ ನಮಾಝ್ ಹರಾಂ ಎಂದು ಫತ್ವಾ ನೀಡಿರುವುದು ಖಂಡನೀಯ. ಆ ಅಧಿಕಾರವನ್ನು ವಕ್ಫ್ ಬೋರ್ಡ್‌ಗೆ ನೀಡಿದವರು ಯಾರು ? ಅವರಿಗೆ ಫತ್ವಾ ನೀಡಲು ಯಾವ ಅರ್ಹತೆ ಇದೆ? ಎಂದು ಸಮಸ್ತ ಕೇಂದ್ರ ಮುಶಾವರ ಕೋಶಾಧಿಕಾರಿ ಶೈಖುನಾ ಸೈಯದ್ ಮುಹಮ್ಮದ್ ಜಿಫ್ರಿ ಮುತ್ತುಕೋಯ ತಂಙಳ್ ಪ್ರಶ್ನಿಸಿದ್ದಾರೆ.

ssf_samelana_photo_2

‘ನ್ಯಾಯ ಪ್ರಜ್ಞೆಯ ಪರಮ ಜಾಗೃತಿ’ ಎಂಬ ಧ್ಯೇಯ ವಾಕ್ಯದಡಿ ಎಸ್ಕೆಎಸ್ಸೆಸ್ಸೆಫ್ ಬೆಳ್ಳಿಹಬ್ಬದ ಪ್ರಯುಕ್ತ ಮಂಗಳೂರಿನ ನೆಹರೂ ಮೈದಾನದ ಶಂಸುಲ್ ಉಲಮಾ ನಗರದ ಶಹೀದ್ ಸಿ.ಎಂ.ಅಬ್ದುಲ್ಲಾ ಮುಸ್ಲಿಯಾರ್ ವೇದಿಕೆಯಲ್ಲಿ ರವಿವಾರ ನಡೆದ ದ.ಕ. ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ಮಹಾಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಸಮಸ್ತ ಸಂಘಟನೆಗೆ ಯಾವುದೇ ಭೌತಿಕ ಲಾಲಸೆ ಇಲ್ಲ. ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾವು ಬ್ಯಾಂಕ್ ಖಾತೆಯನ್ನೂ ಹೊಂದಿಲ್ಲ. ಅಷ್ಟೊಂದು ಪರಿಶುದ್ಧವಾಗಿರುವ ಸಮಸ್ತದ ಜತೆ ಎಲ್ಲರೂ ಕೈ ಜೋಡಿಸಬೇಕು ಎಂದು ತಂಙಳ್ ಕರೆ ನೀಡಿದರು.

ssf_samelana_photo_3

ದ.ಕ. ಜಿಲ್ಲಾ ಸಂಯುಕ್ತ ಖಾಝಿ ಶೈಖುನಾ ತ್ವಾಕ ಅಹ್ಮದ್ ಮುಸ್ಲಿಯಾರ್ ಅಲ್ ಅಝ್‌ಹರಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಹಜ್ ಸಮಿತಿಯ ಸದಸ್ಯ ಪ್ರೊ.ಅಬ್ದುಸ್ಸಮದ್ ಪೂಕೋಟೂರು, ಇಸ್ಮಾಯೀಲ್ ಸಖಾಫಿ ತೋಟುಮುಕ್ಕಂ, ಎಸ್‌ವೈಎಸ್ ದ.ಕ. ಜಿಲ್ಲಾಧ್ಯಕ್ಷ ಬಿ.ಕೆ.ಅಬ್ದುಲ್ ಖಾದರ್ ಅಲ್ ಖಾಸಿಮಿ ಬಂಬ್ರಾಣ, ಎಸ್ಕೆಎಸ್ಸೆಸ್ಸೆಫ್ ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಅಬ್ಬಾಸ್ ದಾರಿಮಿ ಮುಖ್ಯ ಭಾಷಣ ಮಾಡಿದರು. ಸಮಸ್ತ ಮುಶಾವರ ದ.ಕ. ಜಿಲ್ಲಾಧ್ಯಕ್ಷ ಸೈಯದ್ ಝೈನುಲ್ ಆಬಿದೀನ್ ತಂಙಳ್ ದುಗ್ಗಲಡ್ಕ ಪ್ರಾಸ್ತಾವಿಸಿದರು. ಎಸ್ಕೆಎಸ್ಸೆಸ್ಸೆಫ್ ದ.ಕ. ಜಿಲ್ಲಾ ಸಮಿತಿಯ ಉಪಾಧ್ಯಕ್ಷ ಸ್ವದಕತುಲ್ಲಾ ಫೈಝಿ ದಿಕ್ಸೂಚಿ ಭಾಷಣ ಮಾಡಿದರು. ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ, ಶಾಸಕರಾದ ಜೆ. ಆರ್.ಲೋಬೊ, ಐವನ್ ಡಿಸೋಜ, ಪಿ.ಬಿ.ಅಬ್ದುರ್ರಝಾಕ್, ಮೇಯರ್ ಮಹಾಬಲ ಮಾರ್ಲ ಶುಭ ಹಾರೈ ಸಿದರು.

ssf_samelana_photo_4

ಮುಖ್ಯ ಅತಿಥಿಯಾಗಿ ಸೈಯದ್ ಅಹ್ಮದ್ ಪೂಕೋಯ ತಂಙಳ್ ಪುತ್ತೂರು, ಸೈಯದ್ ಝೈನುಲ್ ಆಬಿದೀನ್ ಜಿಫ್ರಿ ತಂಙಳ್ ಕಣ್ಣೂರು, ಮೂಡುಬಿದಿರೆ ಖಾಝಿ ವಿ.ಕೆ.ಅಬೂಬಕರ್ ಮುಸ್ಲಿಯಾರ್, ಎಂ.ಎ.ಖಾಸಿಂ ಮುಸ್ಲಿಯಾರ್, ಎಂ. ಇಬ್ರಾಹೀಂ ಬಾಖವಿ ಕೆ.ಸಿ.ರೋಡ್, ಕೆ.ಪಿ.ಶರೀಫ್ ಫೈಝಿ ಕಡಬ, ಸೈಯದ್ ಅಲಿ ತಂಙಳ್ ಕರಾವಳಿ, ಸೈಯದ್ ಅಮೀರ್ ತಂಙಳ್ ಕಿನ್ಯ, ಸೈಯದ್ ಅಹ್ಮದ್ ಬಾಷಾ ತಂಙಳ್, ಅಝೀಝ್ ದಾರಿಮಿ ಕಲ್ಲೇಗ, ಹಾಜಿ ಕೆ.ಎಸ್.ಮುಹಮ್ಮದ್ ಮಸೂದ್, ಮಾಜಿ ಸಚಿವ ಕೃಷ್ಣ ಜೆ.ಪಾಲೆಮಾರ್, ಮಾಜಿ ಶಾಸಕ ವಿಜಯಕುಮಾರ್ ಶೆಟ್ಟಿ, ಕಾಂಗ್ರೆಸ್ ಮುಖಂಡ ಹಾಜಿ ಇಬ್ರಾಹೀಂ ಕೋಡಿಜಾಲ್, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಉಪಾಧ್ಯಕ್ಷ ಹಾಜಿ ಮುಹಮ್ಮದ್ ಶರೀಫ್ ಚೊಕ್ಕಬೆಟ್ಟು, ಮಾಜಿ ಅಧ್ಯಕ್ಷ ಹಾಜಿ ಎಚ್.ಎಸ್.ಉಸ್ಮಾನ್, ಎಸ್‌ಡಿ ಪಿಐ ದ.ಕ. ಜಿಲ್ಲಾಧ್ಯಕ್ಷ ಮುಹಮ್ಮದ್ ನವಾಝ್ ಉಳ್ಳಾಲ, ಜಿಪಂ ಸದಸ್ಯ ಎಂ.ಎಸ್.ಮುಹಮ್ಮದ್, ಕಾರ್ಪೊ ರೇಟರ್‌ಗಳಾದ ಲತೀಫ್ ಕಂದುಕ, ಅಬ್ದುರ್ರವೂಫ್, ಅದ್ದು ಹಾಜಿ, ಟಿ.ಎಂ.ಶಹೀದ್, ಸಿ.ಅಹ್ಮದ್ ಜಮಾಲ್, ಹನೀಫ್ ಹಾಜಿ ಬಂದರ್, ಹಾಜಿ ಕೆ.ಎಸ್. ಇಸ್ಮಾಯೀಲ್ ಕಲ್ಲಡ್ಕ, ಹಾಜಿ ಜಿ.ಅಬೂಬಕರ್ ಗೋಳ್ತಮಜಲು, ಉಸ್ಮಾನ್ ಅಬ್ದುಲ್ಲಾ ಮಿಲನ್, ಹಾಜಿ ಶಾಹುಲ್ ಹಮೀದ್ ಗುರುಪುರ, ಹಾಜಿ ಐ.ಮೊಯ್ದಿನಬ್ಬ, ಹಾಜಿ ಮೊಯ್ದಿನ್ ಕುಂಞಿ ಮರಾಠಿಮೂಲೆ, ಹಾಜಿ ಅಬ್ಬಾಸ್ ಸಜಿಪ ಮತ್ತಿತರರು ಉಪಸ್ಥಿತರಿದ್ದರು.

ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ಮಾಜಿ ಮೇಯರ್ ಕೆ.ಅಶ್ರಫ್ ಸ್ವಾಗತಿಸಿದರು. ಎಸ್ಕೆಎಸ್ಸೆಸ್ಸೆಫ್ ಜಿಲ್ಲಾ ಸಮಿತಿಯ ಕೋಶಾಧಿಕಾರಿ ಸಲೀಂ ಹಂಡೇಲು ವಂದಿಸಿದರು. ಎಸ್ಕೆಎಸ್ಸೆ ಸ್ಸೆಫ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಇಸ್ಹಾಕ್ ಫೈಝಿ ಮತ್ತು ಕುಕ್ಕಿಲ ದಾರಿಮಿ ಕಾರ್ಯಕ್ರಮ ನಿರೂಪಿಸಿದರು.

Write A Comment