ಕನ್ನಡ ವಾರ್ತೆಗಳು

2013ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿ : ಪ್ರಾದೇಶಿಕ ಚಿತ್ರ ವಿಭಾಗದಲ್ಲಿ ರಿಕ್ಷಾ ಡ್ರೈವರ್ ತುಳು ಸಿನಿಮಾಕ್ಕೆ ಪ್ರಶಸ್ತಿ

Pinterest LinkedIn Tumblr

Riksha_driver_Movie1

ಮಂಗಳೂರು: 2013ರ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳು ಪ್ರಕಟಗೊಂಡಿದ್ದು, ಪ್ರಾದೇಶಿಕ ಭಾಷಾ ಚಲನಚಿತ್ರ ವಿಭಾಗದಲ್ಲಿ ತುಳುವಿನ ರಿಕ್ಷಾ ಡ್ರೈವರ್ ಸಿನಿಮಾಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿ ಲಭಿಸಿದೆ.

ಶ್ರೀ ಮುತ್ತು ಫಿಲಂ ಲಾಂಛನದಲ್ಲಿ ಪ್ರವೀಣ್ ಕೊಂಚಾಡಿ ನಿರ್ಮಿಸಿದ ರಿಕ್ಷಾ ಡ್ರೈವರ್ ಚಿತ್ರವನ್ನು ಹ.ಸು.ರಾಜಶೇಖರ್ ನಿರ್ದೇಶಿಸಿದ್ದಾರೆ. ಪ್ರವೀಣ್ ಕೊಂಚಾಡಿ ಅವರ ನಿರ್ಮಾಣದ ಸಿನಿಮಾಕ್ಕೆ ಇದು ಎರಡನೇ ಪ್ರಶಸ್ತಿಯಾಗಿದೆ. ಈ ಹಿಂದೆ ಅವರು ಕನ್ನಡದಲ್ಲಿ ನಿರ್ಮಿಸಿದ ಏಕಮೇವ ಸಿನಿಮಾಕ್ಕೆ ಅಮೆರಿಕಾದ ಮೆಕ್ಸಿಕೋದಲ್ಲಿ ನಡೆದ ಅಂತರಾಷ್ಟ್ರೀಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಲಭಿಸಿತ್ತು. ಸ್ಪರ್ಧೆಯಲ್ಲಿ 162 ದೇಶದ ಸಿನಿಮಾಗಳು ಇತ್ತು. ಈ ಸಿನಿಮಾಕ್ಕೆ ಎರಡು ರಾಜ್ಯ ಪ್ರಶಸ್ತಿ ಲಭಿಸಿತ್ತು. ಉತ್ತಮ ನಟ, ಮತ್ತು ಉತ್ತಮ ಸಂಭಾಷಣೆಗೆ ಪ್ರಶಸ್ತಿ ದೊರಕಿತ್ತು.

Riksha_Driver_Press_11 Riksha_Driver_Press_9 Riksha_Driver_Press_3 Riksha driver-2013-101 Riksha driver-2013-095 Riksha driver-2013-045 Riksha driver-2013-035 Riksha driver-2013-037 Riksha driver-2013-032 Riksha driver-2013-031 Riksha driver-2013-033 Riksha driver-2013-009 Riksha driver-2013-040

ಪ್ರಶಸ್ತಿ ಖುಷಿ ತಂದಿದೆ: ರಿಕ್ಷಾ ಡ್ರೈವರ್ ಸಿನಿಮಾಕ್ಕೆ ಉತ್ತಮ ಪ್ರಾದೇಶಿಕ ಭಾಷಾ ಲಭಿಸಿರುವುದು ತುಂಬಾ ಖುಷಿ ಕೊಟ್ಟಿದೆ. ಇದು ತುಳುವರ ಆಶೀರ್ವಾದದ ಫಲ ಎಂದು ನಿರ್ಮಾಪಕ ಪ್ರವೀಣ್ ಕೊಂಚಾಡಿ ತಿಳಿಸಿದ್ದಾರೆ.

Write A Comment