ಕನ್ನಡ ವಾರ್ತೆಗಳು

ಶ್ರೀನಿವಾಸ್ ಕಾಲೇಜ್‌ನಲ್ಲಿ ‘ಯುವ ಪರಿವರ್ತನ 2015 – ಯುವ ಸಮೂಹದ ಸಂಸ್ಕೃತಿಯ ಪ್ರದರ್ಶನದಿಂದ ಭಾರತ ದರ್ಶನವಾಗಿದೆ: ಸಂಸದ ನಳಿನ್ ಕುಮಾರ್

Pinterest LinkedIn Tumblr

shrinvas_yuva_fest_1

ಮಂಗಳೂರು,ಜ.05: ಜಗತ್ತಿಗೆ ಸಾಂಸ್ಕೃತಿಕವಾಗಿ ಅದ್ಭುತ ಕೊಡುಗೆ ನೀಡಿದ ದೇಶ ಭಾರತ. ಈ ರಾಷ್ಟ್ರದ ಶಕ್ತಿಯಾದ ಯುವ ಸಮೂಹ ವಿಜ್ಞಾನ, ಉದ್ಯಮ, ಸಾಹಿತ್ಯ, ಸಂಗೀತ ಹೀಗೆ ನಾನಾ ಕ್ಷೇತ್ರದಲ್ಲಿ ಅರ್ಥಪೂರ್ಣವಾಗಿ ತೊಡಗಿಸಿಕೊಳ್ಳುವ ಮೂಲಕ ಪ್ರಧಾನಿ ನರೇಂದ್ರ ಮೋದಿಯವರ ಮೇಕ್ ಇನ್ ಇಂಡಿಯಾ ಪರಿಕಲ್ಪನೆ ಸಾಕಾರಗೊಳಿಸಬೇಕು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು.

srivans_yuva_photo_1

srivans_yuva_photo_2 srivans_yuva_photo_3

ನಗರದ ಶ್ರೀನಿವಾಸ್ ಗ್ರೂಪ್ ಆಫ್ ಕಾಲೇಜಸ್ ವತಿಯಿಂದ ವಳಚ್ಚಿಲ್‌ನ ಶ್ರೀನಿವಾಸ್ ಕಾಲೇಜು ಕ್ಯಾಂಪಸ್ ಆವರಣದಲ್ಲಿ ಭಾನುವಾರ ‘ಯುವ ಪರಿವರ್ತನ 2015’ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

shrinvas_yuva_fest_2 shrinvas_yuva_fest_3 shrinvas_yuva_fest_4 shrinvas_yuva_fest_5 shrinvas_yuva_fest_6 shrinvas_yuva_fest_7 shrinvas_yuva_fest_8 shrinvas_yuva_fest_9 shrinvas_yuva_fest_10 shrinvas_yuva_fest_11 shrinvas_yuva_fest_12

ಇಂತಹ ಕಾರ್ಯಕ್ರಮದ ಮೂಲಕ ಯುವ ಪರಿವರ್ತನೆ ಸಾಧ್ಯ. ಇದು ಇಲ್ಲಿಂದ ಆರಂಭಗೊಂಡಿದೆ. ಇಲ್ಲಿ ದೇಶದ ನಾನಾ ಪ್ರದೇಶಗಳ ಸಂಸ್ಕೃತಿಯ ಪ್ರದರ್ಶನ ಆಗುವ ಮೂಲಕ ಭಾರತ ದರ್ಶನವೂ ಆಗಿದೆ. ಭಾರತಮಾತೆಯ ಅರ್ಚನೆಯೂ ಆಗಿದೆ ಎಂದರು.

srivans_yuva_photo_4 srivans_yuva_photo_6 srivans_yuva_photo_7

ಸಚಿವ ವಿನಯ ಕುಮಾರ್ ಸೊರಕೆ ಮಾತನಾಡಿ, ನಮ್ಮ ದೇಶ ವಿಶ್ವದಲ್ಲಿಯೇ ಅತೀ ಹೆಚ್ಚು ಯುವ ಸಂಪತ್ತನ್ನು ಹೊಂದಿದೆ. ಈ ಮಾನವ ಸಂಪನ್ಮೂಲವನ್ನು ದೇಶದ ಸಂಪತ್ತನ್ನಾಗಿ ಮಾಡುವ ಕೆಲಸ ಇಂತಹ ಯುವ ಪರಿವರ್ತನ್ ಕಾರ್ಯಕ್ರಮದ ಮೂಲಕ ಆಗಬೇಕಾಗಿದೆ ಎಂದರು.

Write A Comment