ಅಂತರಾಷ್ಟ್ರೀಯ

ಮೊಗವೀರ ಮಾಸಿಕ, ಲೇಖಕರು – ಓದುಗರ ಸಮಾವೇಶ

Pinterest LinkedIn Tumblr

ವರದಿ : ಈಶ್ವರ ಎಂ. ಐಲ್ / ಚಿತ್ರ: ದಿನೇಶ್ ಕುಲಾಲ್

Mubai_Mogavir_Paper_1

ಮುಂಬಯಿ : ಮೊಗವೀರ ಪತ್ರಿಕೆಯ 75ರ ಸಂಭ್ರಮ ನಿಮಿತ್ತ ಮೊಗವೀರ ವ್ಯವಸ್ತಾಪಕ ಮಂಡಳಿ ಮೀರಾ – ಭಾಯಂಧರ್ ಸಮಿತಿ ಹಾಗೂ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಸಹಯೋಗದೊಂದಿಗೆ ಓದುಗರ ಸಮಾವೇಶವು ಭಾಯಂದರ್ ಪಶ್ಚಿಮದ ಜೋಹಲ್ ಸಭಾಗೃಹದಲ್ಲಿ ಇತ್ತೀಚೆಗೆ ಜರಗಿತು.

ವಿಮರ್ಶಕ, ರಂಗತಜ್ನ ಡಾ. ಭರತ್ ಕುಮಾರಿ ಪೊಲಿಪು ಅವರ ಅಧ್ಯಕ್ಷತೆಯಲ್ಲಿ ಜರಗಿದ ಈ ಸಮಾವೇಶದ ಬಳಿಕ ’ಬಳಿ ಮತ್ತು ಮಾತೃ ಸಂಸ್ಕೃತಿ’ ಬಗ್ಗೆ ವಿಚಾರ ಗೋಷ್ಠಿ ನಡೆಯಿತು.

ವಿಚಾರ ಗೋಷ್ಠಿ ಯಲ್ಲಿ ಖ್ಯಾತ ವಿಮರ್ಷಕ, ವಾಗ್ಮಿ ರವಿ ರಾ. ಅಂಚನ್ ಅವರು ಉಪನ್ಯಾಸವನ್ನು ನೀಡುತ್ತಾ ಮೊಗವೀರ ಪತ್ರಿಕೆಯ ಸಂಪಾದಕರು ಅರ್ಥಪೂರ್ಣವಾದ ವಿಷಯವನ್ನು ಆಯ್ಕೆಮಾಡಿದಕ್ಕೆ ಪ್ರಶಂಸೆ ವ್ಯಕ್ತಪಡಿಸಿದರು.

Mubai_Mogavir_Paper_2 Mubai_Mogavir_Paper_3

ರಮೇಶ್ ಪುತ್ರನ್ ಅವರ ’ಶಿವ ವಚನಗಳು’ ಕೃತಿಯನ್ನು ಬಿಡುಗಡೆಮಾಡಲಾಯಿತು.  ಮೊಗವೀರದ ಮಾಜಿ ಸಂಪಾದಕಿ ಜಿ. ಪಿ. ಕುಸುಮಾ ಕೃತಿ ಪರಿಚಯ ಮಾಡಿದರು.

ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಸುರೇಶ್ ಕುಂದರ್ ಸ್ವಾಗತಿಸಿದರು. ಸಂಪಾದಕರಾದ ಅಶೋಕ ಸುವರ್ಣ ಪ್ರಾಸ್ತಾವಿಕ ನುಡಿಯನ್ನಾಡಿದರು.

ವೇದಿಕೆಯಲ್ಲಿ ಮಂಡಳಿಯ ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು. ಗೋಪಾಲ ತ್ರಾಸಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.

Write A Comment