ಕನ್ನಡ ವಾರ್ತೆಗಳು

ಬಂಟರ ಸಂಘದ ಉನ್ನತ ಶಿಕ್ಷಣ ಕಾಲೇಜುಗಳ ವಾರ್ಷಿಕೋತ್ಸವ, ಜಲ್ಲೋಶ್‌ ಸಮಾರಂಭ

Pinterest LinkedIn Tumblr

mumbai_ewsr_alli_1

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ಬಂಟರ ಸಂಘದ ಉನ್ನತ ಶಿಕ್ಷಣ ಕಾಲೇಜುಗಳ 7ನೇ ವಾರ್ಷಿಕೋತ್ಸವ ಜಲ್ಲೋಶ್‌ ಸಮಾರಂಭವು ಡಿ. 22ರಂದು ಬಂಟರ ಭವನದ ರಾಧಾಬಾಯಿ ಟಿ. ಭಂಡಾರಿ ಸಭಾಗೃಹದಲ್ಲಿ ಜರಗಿದ್ದು ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದ ಬಂಟರ ಸಂಘ ಮುಂಬಯಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿಯವರು ಪದವಿ ಗಳಿಕೆಯೊಂದೇ ಶಿಕ್ಷಣದ ಉದ್ದೇಶವಾಗಿರದೆ ವ್ಯಕ್ತಿತ್ವ ವಿಕಸನಕ್ಕೂ ಮಹತ್ವ ನೀಡಬೇಕು ಎಂದರು. ಆಧುನಿಕ ಸೌಲಭ್ಯಗಳನ್ನು ಅಳವಡಿಸುತ್ತಿರಬೇಕು. ವಾರ್ಷಿಕೋತ್ಸವ ಕಾರ್ಯಕ್ರಮವು ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಉತ್ತಮ ವೇದಿಕೆಯಾಗಿದೆ.ವಿದ್ಯಾರ್ಥಿಗಳ ಸಂಘಟನಾ ಚಾತುರ್ಯವನ್ನು ಪ್ರದರ್ಶಿಸಲು ಒಂದು ಅವಕಾಶ ಇದಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಪ್ರತಿಭೆ ಇದೆ, ಎಂದರು.

mumbai_ewsr_alli_2 mumbai_ewsr_alli_3

ಗೌರವ ಅತಿಥಿಯಾಗಿ ಟಿವಿ ಸೀರಿಯಲ್‌ ಸಿಐಡಿ ಖ್ಯಾತಿಯ ನಟ ನರೇಂದ್ರ ಗುಪ್ತಾ ಆಗಮಿಸಿದ್ದರು.

ಇದೇ ಸಂದರ್ಭದಲ್ಲಿ ಕಾಲೇಜ್‌ಮ್ಯಾಗಜಿನ್‌ಗಳನ್ನು ಅಧ್ಯಕ್ಷರು,ಅತಿಥಿ-ಗಣ್ಯರು ಬಿಡುಗಡೆಗೊಳಿಸಿ ದರು. ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿಯನ್ನು ಮೂರನೇ ವರ್ಷದ ಬಿಎಂಎಸ್‌ ವಿದ್ಯಾರ್ಥಿ ವಿನಿತ್‌ ಜೈನ್‌ ಮತ್ತು ಬಂಟರ ಸಂಘ ಮುಂಬಯಿ ಅಧ್ಯಕ್ಷರ ರೋಲಿಂಗ್‌ ಟ್ರೋಯನ್ನು ಬಿಎಸ್‌ಸಿ ಅಂತಿಮ ವರ್ಷದ ಜೀಶಾಂತ್‌ ಸಾಲ್ಯಾನ್‌ ಪಡೆದರು. ವಿವಿಧ ಕಾರ್ಯಚಟುವಟಿಕೆಗಳಿಗಾಗಿ ನಿಖೀತಾ ಬಂಗೇರ ಮತ್ತು ಅತ್ಯುತ್ತಮ ವಿದ್ಯಾರ್ಥಿ ಪ್ರಶಸ್ತಿ ನಬೀಲಾ ಕುರೇಶಿ ಪಡೆದುಕೊಂಡರು.

ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ ಸ್ವಾಗತಿಸಿ ಸಂಸ್ಥೆಯ ಕಾರ್ಯಚಟುವಟಿಕೆಗಳನ್ನು ವಿವರಿಸಿದರು. ಉಪ ಕಾರ್ಯಾಧ್ಯಕ್ಷ ಬಿ. ಆರ್‌. ಶೆಟ್ಟಿ ಸಂಸ್ಥೆಯ ವಾರ್ಷಿಕ ವರದಿ ವಾಚಿಸಿದರು. ಪ್ರಾಂಶುಪಾಲ ಡಾ| ಕೆ. ಎಸ್‌. ಚೀಮಾ ಅವರು ಕಾಲೇಜಿನ ವರದಿಯನ್ನು ಮಂಡಿಸಿದರು.

mumbai_ewsr_alli_4 mumbai_ewsr_alli_5

ಇದೇ ಸಂದರ್ಭ ಮುಖ್ಯ ಅತಿಥಿ ಕರ್ನಿರೆ ವಿಶ್ವನಾಥ ಶೆಟ್ಟಿ, ಗೌರವಾನ್ವಿತ ಅತಿಥಿ ನರೇಂದ್ರ ಗುಪ್ತ ಅವರನ್ನು ಚಂದ್ರಹಾಸ ಕೆ. ಶೆಟ್ಟಿ ಹಾಗೂ ಬಿ. ಆರ್‌.ಶೆಟ್ಟಿ ಸಮ್ಮಾನಿಸಿದರು. ಮ್ಯಾನೇಜ್‌ ಮೆಂಟ್‌ ಇನಿಸ್ಟಿಟ್ಯೂಟ್‌ ನಿರ್ದೇಶಕ ಡಾ| ಕೃಷ್ಣ ಶೆಟ್ಟಿ, ಆಡಳಿತಾಧಿಕಾರಿ ಪ್ರಕಾಶ್‌ ಮೋರೆ ಅತಿಥಿಗಳನ್ನು ಪರಿಚಯಿಸಿದರು. ಕೊನಾರ್ಡ್‌ ಡಿ’ ಸೋಜಾ ಹಾಗೂ ಪ್ರೀತಿ ಸಿಂಗ್‌ ಕಾರ್ಯಕ್ರಮ ನಿರೂಪಿಸಿದರು. ಪ್ರಾ| ಮಂಗೇಶ್‌ ಪಾಟೀಲ್‌ ವಂದಿಸಿದರು.ವಿದ್ಯಾರ್ಥಿ – ವಿದ್ಯಾರ್ಥಿನಿಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು.

ಉಪಾಧ್ಯಕ್ಷ ಪ್ರಭಾಕರ ಎಲ್‌. ಶೆಟ್ಟಿ,ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ಚಂದ್ರಹಾಸ ಕೆ. ಶೆಟ್ಟಿ, ಸಂಘದ ಕಾರ್ಯದರ್ಶಿ ಉಳ್ತೂರು ಮೋಹನ್‌ ದಾಸ್‌ ಶೆಟ್ಟಿ, ಗೌ| ಕೋಶಾಧಿಕಾರಿ ಸಿಎ ಐ. ಆರ್‌. ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಉಪ ಕಾರ್ಯಾಧ್ಯಕ್ಷ ಬಿ. ಆರ್‌. ಶೆಟ್ಟಿ, ಕೋಶಾಧಿಕಾರಿ ಸಿಎ ಹರೀಶ್‌ ಡಿ. ಶೆಟ್ಟಿ, ಹಾಸ್ಪಿಟಾಲಿಟಿ ಕಾಲೇಜ್‌ ಪ್ರಾಂಶುಪಾಲೆ ಸಂಯೋಜಿತಾ ಮೊರಾರ್ಜಿ, ಮ್ಯಾನೇಜ್‌ಮೆಂಟ್‌ ಇನ್‌ಸ್ಟಿಟ್ಯೂಟ್‌ ನಿರ್ದೇಶಕ ಡಾ| ಕೃಷ್ಣ ಶೆಟ್ಟಿ, ಆಡಳಿತಾಧಿಕಾರಿ ಪ್ರಕಾಶ್‌ ಮೋರೆ, ಜೂನಿಯರ್‌ ಕಾಲೇಜ್‌ ಪ್ರಧಾನ ಸಮನ್ವಯಕಿ ಶಿಲ್ಪಾ ಠಾಕೂರ್‌ ವೇದಿಕೆಯಲ್ಲಿದ್ದರು.

Write A Comment