ಕನ್ನಡ ವಾರ್ತೆಗಳು

ಕರಾವಳಿ ಉತ್ಸವ ವರ್ಣರಂಜಿತ ಸಾಂಸ್ಕೃತಿಕ ಮೆರವಣಿಗೆ

Pinterest LinkedIn Tumblr

karvali_ustva_udgatane_1

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲಾ ಕರಾವಳಿ ಉತ್ಸವ ಪ್ರಯುಕ್ತ ಅಯೋಜಿಸಲಾದ ಜಿಲ್ಲಾ ಕರಾವಳಿ ಉತ್ಸವ – 2014 ರ ಸಾಂಸ್ಕೃತಿಕ ಮೆರವಣಿಗೆಯನ್ನು ಮಂಗಳವಾರ ಶಾಸಕ ಜೆ.ಆರ್‌. ಲೋಬೊ ಅವರ ಅಧ್ಯಕ್ಷತೆಯಲ್ಲಿ ಹಿರಿಯ ಸಾಹಿತಿಗಳು, (ರಂಭೂಮಿ/ಚಲನಚಿತ್ರ ನಿರ್ದೇಶಕರು) ಶ್ರೀ ಸದಾನಂದ ಸುವರ್ಣ ಅವರು ಉದ್ಘಾಟಿಸಿದರು. ಕರಾವಳಿ ಉತ್ಸವ ಮೆರವಣಿಗೆ ಸಮಿತಿಯ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ಅವರು ಮೆರವಣಿಗೆಯ ನೇತ್ರತ್ವ ವಹಿಸಿದ್ದರು.

ಮೆರವಣಿಗೆಯು ನೆಹರೂ ಮೈದಾನದಿಂದ ಹೊರಟು ಎ.ಬಿ. ಶೆಟ್ಟಿ ವೃತ್ತ, ಯು.ಪಿ. ಮಲ್ಯ ರಸ್ತೆ, ಗಡಿಯಾರ ಗೋಪುರ, ಹಂಪನ್‌ಕಟ್ಟ್ಟೆ, ಕಾರ್ನಾಡ್ ಸದಾಶಿವ ರಾವ್ ರಸ್ತೆ, ಬಿಷಪ್ ನಿವಾಸ, ಮಂಜೇಶ್ವರ ಗೋವಿಂದ ಪೈ ವೃತ್ತ (ನವಭಾರತ ವೃತ್ತ), ಪಿ.ವಿ.ಎಸ್. ವೃತ್ತ, ಮಹಾತ್ಮಾಗಾಂಧಿ ರಸ್ತೆ, ಬಲ್ಲಾಳ್‌ಭಾಗ್, ಮಹಾನಗರ ಪಾಲಿಕೆ, ಲಾಲ್‌ಭಾಗ್ ಮೂಲಕ ಬಂದು ಕರಾವಳಿ ಉತ್ಸವ ಮೈದಾನದಲ್ಲಿ ಸಂಪನ್ನಗೊಂಡಿತ್ತು.

karavali_ustava_photo_4 karavali_ustava_photo_3

ಉಸ್ತುವಾರಿ ಸಚಿವರು, ಮಹಾಪೌರರು, ಜನ ಪ್ರತಿನಿಧಿಗಳು, ಅಧಿಕಾರಿ ಬಂಧುಗಳು, ಪುರ ಪ್ರಮುಖರು, ಆಢ್ಯ ಗಣ್ಯ ಬಂಧುಗಳು ಸೇರಿದಂತೆ ಜಿಲ್ಲೇಯ ಅತಿ ವಿಶಿಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ ಜಿಲ್ಲೆಯ ಕಲಾವಿದರು ಈ ವರ್ಣ ರಂಜಿತ ಮೇರವಣಿಗೆಯಲ್ಲಿ ಪಾಲ್ಗೊಂಡು ಕರಾವಳಿ ಉತ್ಸವಕ್ಕೆ ಮೆರಗು ನೀಡಿದರು.

ಶಾಸಕರಾದ ಜೆ.ಆರ್‌. ಲೋಬೋ, ಐವನ್‌ ಡಿ’ಸೋಜಾ, ಮೇಯರ್‌ ಮಹಾಬಲ ಮಾರ್ಲ, ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ, ಜಿಪಂ ಸಿಇಒ ತುಳಸಿ ಮದ್ದಿನೇನಿ, ತುಳು ಅಕಾಡೆಮಿಯ ಅಧ್ಯಕ್ಷೆ ಜಾನಕಿ ಬ್ರಹ್ಮಾವರ, ಕೊಂಕಣಿ ಅಕಾಡೆಮಿ ಅಧ್ಯಕ್ಷ ರಾಯ್‌ ಕ್ಯಾಸ್ಟೆಲಿನೊ, ಉಪಮೇಯರ್‌ ಕವಿತಾ ವಿವಿಧ ಉಪಸಮಿತಿಗಳ ಮುಖ್ಯಸ್ಥರು, ಅಧಿಕಾರಿಗಳು ಮೆರವಣಿಗೆಯಲ್ಲಿ ಪಾಲ್ಗೊಡೀದ್ದರು.

karvali_ustva_udgatane_2 karvali_ustva_udgatane_3 karvali_ustva_udgatane_4 karvali_ustva_udgatane_5 karvali_ustva_udgatane_6 karvali_ustva_udgatane_7 karvali_ustva_udgatane_8 karvali_ustva_udgatane_9karavali_ustava_photo_5 karavali_ustava_photo_6 karavali_ustava_photo_7 karavali_ustava_photo_8 karavali_ustava_photo_9 karavali_ustava_photo_10 karavali_ustava_photo_11 karavali_ustava_photo_12 karavali_ustava_photo_13 karavali_ustava_photo_14 karavali_ustava_photo_15 karavali_ustava_photo_16 karavali_ustava_photo_17 karavali_ustava_photo_18 karavali_ustava_photo_19 karavali_ustava_photo_20 karavali_ustava_photo_21 karavali_ustava_photo_22 karavali_ustava_photo_23 karavali_ustava_photo_24 karavali_ustava_photo_25 karavali_ustava_photo_26 karavali_ustava_photo_28

ಭಾಗವಹಿಸಿದ ತಂಡಗಳು :

ಮಂಗಳವಾದ್ಯ, ಪಕ್ಕೆ ನಿಶಾನೆ, ಕೊಂಬು ಚೆಂಡೆ, ಕದ್ರಿ ಶ್ರೀ ಮಂಜನಾಥ ದೇವಸ್ಥಾನ, ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಪೊಳಲಿ ರಾಜರಾಜೇಶ್ವರಿ ದೇವಸ್ಥಾನ, ನಂದಾವರ ಶ್ರೀ ಶಂಕರ ನಾರಾಯಣ ದೇವಸ್ಥಾನ, ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನ, ಕುಡುಪು ಶ್ರೀ ಅನಂತ ಪದ್ಮನಾಭ ದೇವಸ್ಥಾನ,ಮಂಗಳಾದೇವಿ ದೇವಸ್ಥಾನ, ಶರವು ಮಹಾಗಣಪತಿ ದೇವಸ್ಥಾನ, ವೆಂಕಟ್ರಮಣ ದೇವಸ್ಥಾನ, ಕಾಳಿಕಾಂಬಾ ದೇವಸ್ಥಾನ, ಜಿಲ್ಲಾ ಪೋಲೀಸ್ ಬ್ಯಾಂಡ್ ಸೆಟ್, ಕನ್ನಡ ಭುವನೇಶ್ವರಿ ಸ್ತಬ್ಧ ಚಿತ್ರ ಆಯೋಜಕರು- ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ, ಶಂಖ ದಾಸರು ಶ್ರೀನಿವಾಸ ಪೂಂಜಾಲ್ ಕಟ್ಟೆ ತಂಡ, ಕೊಂಬು ವಾದನ ಹರೀಶ್ ಮೂಡಬಿದ್ರೆ ತಂಡ, ಚಂಡೆ ಬಳಗ ಸುನೀಲ್ ಕೊಂಚಾಡಿ ತಂಡ, ಬಣ್ಣದ ಕೊಡೆಗಳು ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳಿಂದ, ಜಾನಪದ ಗೊಂಬೆ ಬಳಗ ಕೀಲು ಕುದುರೆ ರಮೇಶ್ ಕಲ್ಲಡ್ಕ ಶಿಲ್ಪ ಬಳಗ, ಆಟಿ ಕಳಂಜ ಕರುಣಾಕರ ಗುತ್ತಿಗಾರ್ ಬಳಗ, ಗಜಮೇಳ ಬಾಲರಾಜ್ ಮಂಗಳೂರು, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸದಸ್ಯರ ತಂಡ, ಕ್ರಿಸ್ಮಸ್ ಕ್ಯಾರಲ್ ಬ್ಯಾಂಡ್ ಸೆಟ್ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ದಪ್ಪು ಕುಣಿತ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಕೋಲ್ ಕಳಿ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ತಾಲೀಮು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ, ಮರಕಾಲು ಹುಲಿವೇಷ ದೀಪಕ್ ಸುರತ್ಕಲ್ ತಂಡ, ಸ್ಕಾಟ್ಸ್ ಎಂಡ್ ಗೈಡ್ಸ್ ಭಾರತ ಸೇವಾದಲ ನೌಕಾದಳ ೧. ಯುನಿವರ್ಸಿಟಿ ಕಾಲೇಜು ೨. ಅಲೋಸಿಯಸ್ ಕಾಲೇಜು, ಭೂದಳ ೧. ಯುನಿವರ್ಸಿಟಿ ಕಾಲೇಜು ೨. ಅಲೋಶಿಯಸ್ ಕಾಲೇಜು ವಾಯು ದಳ ಅಲೋಸಿಯಸ್ ಕಾಲೇಜು, ತಾಲೀಮು ಕಾಸರಗೋಡು ತಂಡ ಗುಣಶ್ರೀ ವಿದ್ಯಾಲಯ ಬ್ಯಾಂಡ್ ಸೆಟ್ ಅಡ್ಯಾರ್ – I ಸಿದ್ಧಕಟ್ಟೆ – IIವೀರಭದ್ರ ಕುಣಿತ ದೇವರಾಜ್ ಮಂಡ್ಯ ತಂಡ, ಸೋಮನ ಕುಣಿತ ಅನಿಲ್ ಮೈಸೂರು ತಂಡ , ಶಾರ್ದೂಲ – ಕರಡಿ ವೇಷ ಗುರುವಪ್ಪ ಮೇರಮಜಲು, ಸಾಂಸ್ಕೃತಿಕ ಶಾಲಾ ತಂಡ ಕಾಸ್ಸಿಯಾ ಪ್ರೌಢಶಾಲೆ , ಬೆಂಡರ ಕುಣಿತ ಹಾವೇರಿ, ಲೂರ್ಡ್ಸ್ ಪ್ರೌಢಶಾಲೆ ವಿದ್ಯಾರ್ಥಿಗಳು, ನಗಾರಿ ಮಂಜು ಮೈಸೂರು ತಂಡ , ಮಿಲಾಗ್ರೀಸ್ ಪ್ರೌಢಶಾಲೆ ಹಂಪನಕಟ್ಟ, ತ್ರಿವರ್ಣ ಧ್ವಜ ಆಳ್ವಾಸ್ ವಿದ್ಯಾಸಂಸ್ಥೆ ಹೊನ್ನಾವರ ಬ್ಯಾಂಡ್ ಸೆಟ್, ಅಮೃತ ಪಿಯು ಕಾಲೇಜು ಭಜನಾ ತಂಡ, ಶ್ರೀ ಕ್ಷೇತ್ರ ಧರ್ಮಸ್ಥಳ ಭಜನಾ ಮಂಡಳಿ ,೧. ನಿಟ್ಟೆ(ನಂತೂರು) ಪಿ ಯು ಕಾಲೇಜು ೨. ಬೆಸೆಂಟ್ ಪಿ ಯು ಕಾಲೇಜು , ಪುರವಂತಿಕೆ ತಂಡ ಯೋಗೇಂದ್ರ ಹಾವೇರಿ , ಸೈಂಟ್ ಅಲೋಶಿಯಸ್ ಕಾಲೇಜು, ಪೂಜಾಕುಣಿತ ದೇವರಾಜ್ ತಂಡ, ರೊಜಾರಿಯೋ ಪ್ರೌಢ ಶಾಲೆ, ಕಂಗೀಲು ನೃತ್ಯ ರಮೇಶ ಕಲ್ಮಾಡಿ ಉಡುಪಿ , ಬೊಕ್ಕಪಟ್ಣ ಪಿ.ಯು. ಕಾಲೇಜು ಬ್ಯಾಂಡ್ ಸೆಟ್ , ಗೊರವರ ಕುಣೀತ ಮಹಾದೇವ ಮೈಸೂರು ತಂಡ , ಸ್ತ್ರೀ ಶಕ್ತಿ ಸದಸ್ಯರು (ನಗರ) , ಸೈಂಟ್ ಆಗ್ನೇಸ್ ಕಾಲೇಜು ಬ್ಯಾಂಡ್ ಸೆಟ್ ಸ್ತ್ರೀ ಶಕ್ತಿ ಸದಸ್ಯರು ಗ್ರಾಮಾಂತರ , ವೀರಗಾಸೆ ರಾಘವೇಂದ್ರ ಚಿಕ್ಕಮಗಳೂರು , ಭಾರತೀಯ ಅಂಚೆ ಇಲಾಖೆ ಜೋಸೆಫ್ ರೋಡಿಗ್ರಸ್ ನೇತೃತ್ವದ ತಂಡ, ಕೇರಳ ದೇವರ ವೇಷಗಳು, ಶ್ರೀರಾಮ ವಿದ್ಯಾ ಸಂಸ್ಥೆ ಕಲ್ಲಡ್ಕ ಬ್ಯಾಂಡ್ ಸೆಟ್, ರಮೇಶ್ ಮಾಸ್ತರ್ ಜಗ್ಗಳಿಕೆ ಮೇಳ ದಿಯಾ ವುಲ್ಲಾ ತಂಡ ಧಾರವಾಡ, ಸುಗ್ಗಿ ಕುಣಿತ ಶಿರಸಿ ಚಂದ್ರಶೇಖರ ಕಾರವಾರ ತಂಡ, ಕಂಸಾಳೆ ಮಂಡ್ಯ ಸತೀಶ್ ತಂಡ, ಹಾಲಕ್ಕಿ ಕುಣಿತ ಮಂಜುಗೌಡ, ಕಾರವಾರ ಯಕ್ಷಗಾನ ವೇಷಗಳು (ತೆಂಕು ತಿಟ್ಟು – ಬಡಗು ತಿಟ್ಟು) ಬೇಡರ ಕುಣಿತ ಸಂತೋಷ ಶಿರಸಿ ತಂಡ, ಶಾರ್ದೂಲ – ಕರಡಿ ಕೊರಗಪ್ಪ ಸಿಂಗಾರ ಕೋಡಿ, ಮಂಚಿ ಮಹಿಳಾ ಡೊಳ್ಳು ಕುಣಿತ ಸಾಗರ ಶಿವಮೊಗ್ಗ ಜಿಲ್ಲೆ ರತ್ನ ಎಸ್. ನೇತೃತ್ವದ ತಂಡ, ಗಿರಿ – ಸಿರಿ ಜಾನಪದ ತಂಡ ಕನ್ಯಾನ ರವೀಂದ್ರ ನೇತೃತ್ವದ ತಂಡ, ಡೊಳ್ಳು ಕುಣೀತ ಬೂದಿಯಪ್ಪ ಶಿವಮೊಗ್ಗ , ಸೈಂಟ್ ಆಗ್ನೇಸ್ ಕಾಲೇಜು ಬ್ಯಾಂಡ್ ಸೆಟ್ ಜಾನಪದ ಇರೆ ನೃತ್ಯ, ಶಂಕರ ಸ್ವಾಮಿಕೃಪಾ ಬದಿಯಡ್ಕ ತಂಡ, ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು, ಮಲಬಾರ್ ದಫ್ ನಾಸರ್ ಮೊಗ್ರಾಲ್ ಕಾಸರಗೋಡು ತಂಡ , ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕ ಕಾಸರಗೋಡು ಐ.ಓ.ಬಿ. ಕನ್ನಡ ಬಳಗ, ಇಂಡಿಯನ್ ಓವರ್‌ಸೀಸ್ ಬ್ಯಾಂಕ್ ವೀರ ವನಿತೆ ಅಬ್ಬಕ್ಕ ರಾಣಿ ಸ್ತಬ್ಧ ಚಿತ್ರ ಕೇಶವ ಪಾಣೆ ಮಂಗಳೂರು, ಕರಾವಳಿ ದೋಣಿ ಸ್ಪರ್ಧೆ ಸ್ತಬ್ಧ ಚಿತ್ರ ಕೇಶವ ಪಾಣೆ ಮಂಗಳೂರು, ಬ್ಯಾರಿ ಜೀವನ ಪರಿಕ್ರಮ ಸ್ತಬ್ಧ ಚಿತ್ರ ಇಸ್ಮಾಯಿಲ್ ಮೂಡುಶೆಡ್ಡೆ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಆಗ್ನಿ ಶಾಮಕ ದಳ ಕರ್ನಾಟಕ ಸರಕಾರ ಮುಂತಾದ ತಂಡಗಳು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದವು.

 

1 Comment

Write A Comment