ಕನ್ನಡ ವಾರ್ತೆಗಳು

ಸಂತ ಅಲೋಶಿಯಸ್ ಕಾಲೇಜಿನ ಅಲೋಶಿಯನ್ ಫೆಸ್ಟ್ -2014-15 ಸಮಾರೋಪ

Pinterest LinkedIn Tumblr

ALOYSIs_FEST_validictory_1

ಮಂಗಳೂರು, ಡಿಸೆಂಬರ್ 21: ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ಮೂರು ದಿನಗಳ ರಾಷ್ರಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ “ಅಲೋಷಿಯನ್ ಫೆಸ್ಟ್-2014-15 ಶನಿವಾರ ಮುಕ್ತಾಯಗೊಂಡಿತು. ಕರ್ನಾಟಕ ಬ್ಯಾಂಕಿನ ಜನರಲ್ ಮ್ಯಾನೇಜರ್ ಡಾ| ಮೀರಾ ಅರಾನ್ಹ ಸಮಾರೋಪ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಮಾರೋಪದ ಅಧ್ಯಕ್ಷತೆಯನ್ನು ವಹಿಸಿದ್ದ ಸಂತ ಅಲೋಶಿಯಸ್ ಕಾಲೇಜಿನ ಕ್ಯಾಂಪಸ್ ಮಿನಿಸ್ಟರ್ ರೆ|ಫಾ|ಫ್ರಾನ್ಸಿಸ್ ಅಲ್ಮೇಡಾ ಎಸ್.ಜೆ. ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ಪ್ರಾಸ್ತವಿಕ ಮಾತುಗಳನ್ನಾಡಿದ ಕಾಲೇಜಿನ ಪ್ರಾಂಶುಪಾಲರಾದ ರೆ| ಫಾ| ಸ್ವೀಬರ್ಟ್ ಡಿಸಿಲ್ವಾ “ಸಂತ ಅಲೋಶಿಯಸ್ ಕಾಲೇಜು ರಾಷ್ಟ್ರ ಮಟ್ಟದಲ್ಲಿ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸವನ್ನು ಮಾಡುತ್ತಿದೆ. ಮಂಗಳೂರಿನಲ್ಲಿ ಧಾರ್ಮಿಕ ಕಲಹಗಳು ಸಾಮಾನ್ಯವಾಗಿದ್ದರೂ ನಮ್ಮ ವಿದ್ಯಾಸಂಸ್ಥೆಗಳಲ್ಲಿ ಎಲ್ಲಾ ಧರ್ಮದ ವಿದ್ಯಾರ್ಥಿಗಳು ಪರಸ್ಪರ ಗೌರವಿಸಿಕೊಂಡು ಸಹಬಾಳ್ವೆಯಿಂದ ಶಿಕ್ಷಣ ಪಡೆಯುತ್ತಿದ್ದಾರೆ, ವಿದ್ಯಾವಸ್ಥೆಯಲ್ಲಿ ಪಡೆದಂತಹಾ ಸರ್ವ ಧರ್ಮಸಮನ್ವಯತೆಯ ಶಿಕ್ಷಣವನ್ನು ತಮ್ಮ ಭವಿಷ್ಯದಲ್ಲೂ ಅನುಸರಿಸುವ ಅಗತ್ಯತೆಯಿದೆ” ಎಂದು ಅಭಿಪ್ರಾಯ ಪಟ್ಟರು.

ಮುಖ್ಯ ಅತಿಥಿಗಳಾದ ಡಾ| ಮೀರಾ ಅರ್‍ಹಾನ ಮಾತನಾಡುತ್ತ “ಸಕಾರಾತ್ಮಕ ಆಲೋಚನೆಗಳು ಯಶಸ್ಸಿಗೆ ಪೂರಕ.ಯಶಸ್ಸನ್ನು ಅರಸುವ ವಿದ್ಯಾರ್ಥಿಗಳಿಗೆ ಸತತ ಪರಿಶ್ರಮದ ಜೊತೆಗೆ ಧನಾತ್ಮಕ ಯೋಚನೆಗಳು ಅವಶ್ಯಕ” ಎಂದು ನೈಜ ವೃತ್ತಾಂತವನ್ನು ಉಲ್ಲೇಖಿಸುತ್ತಾ ಹೇಳಿದರು.

ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ರೆ|ಫಾ|ಫ್ರಾನ್ಸಿಸ್ ಅಲ್ಮೇಡಾ ಎಸ್.ಜೆ. ರವರು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡುತ್ತ ಯಶಸ್ಸಿನ ಹಾದಿಯಲ್ಲಿ ಎಷ್ಟೇ ಅಡೆತಡೆಗಳಿದ್ದರೂ, ಅದನ್ನು ಮೆಟ್ಟಿ ನಿಲ್ಲುವ ಛಲವನ್ನು ವಿದ್ಯಾರ್ಥಿಗಳು ಬೆಳೆಸಬೇಕು.ಮಾನವೀಯತೆಯನ್ನು ಎತ್ತಿ ಹಿಡಿದ ಜಗತ್ತಿನ ಅನೇಕ ಮಹಾನ್ ವ್ಯಕ್ತಿಗಳನ್ನು ಹೆಸರಿಸುತ್ತಾ, ನಾವು ಅವರಂತೆ ಸಾಧಿಸಲು ಶ್ರಮಿಸೋಣ ಎಂದು ಕರೆಕೊಟ್ಟರು.

ಕಾಲೇಜಿನ ವಿವಿಧ ವಿಭಾಗಗಳ ಉಪಪ್ರಾಂಶುಪಾಲರು, ಕಾರ್ಯಕ್ರಮ ಸಂಯೋಜಕರು ಹಾಗೂ ವಿದ್ಯಾರ್ಥಿ ಸಂಯೋಜಕರು, ಅಲೋಶಿಯಸ್ ಫೆಸ್ಟ್ ಸಂಯೋಜಕರಾದ ಪ್ರೋ| ಜಾನ್ ಶೆರಾ, ವಿದ್ಯಾರ್ಥಿ ನಾಯಕಿ ಲಿಜೇನ್ ಡಿ’ಸೋಜ, ಉಪನಾಯಕವಿನೀತ್ ಲಸ್ರಾಡೋ, ಕಾರ್ಯದರ್ಶಿ ದೀಪಕ್, ಸಹಕಾರ್ಯದರ್ಶಿ ಸಾತ್ಶ್ಯ್, ಕಾಲೇಜು ಸ್ಪೀಕರ್ ನಕುಲ್‌ರಾಜ್ ಉಪಸ್ಥಿತರಿದ್ದರು.

ALOYSIs_FEST_validictory_2 ALOYSIs_FEST_validictory_3 ALOYSIs_FEST_validictory_4 ALOYSIs_FEST_validictory_5 ALOYSIs_FEST_validictory_6 ALOYSIs_FEST_validictory_7 ALOYSIs_FEST_validictory_8 ALOYSIs_FEST_validictory_9 ALOYSIs_FEST_validictory_10 ALOYSIs_FEST_validictory_11 ALOYSIs_FEST_validictory_12 ALOYSIs_FEST_validictory_13 ALOYSIs_FEST_validictory_14 ALOYSIs_FEST_validictory_15

ಕಾಲೇಜು ಸ್ಪೀಕರ್ ನಕುಲ್‌ರಾಜ್ ಸ್ವಾಗತಿಸಿದರು.ಕಾಲೇಜಿನ ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಲಿಝೇನ್ ತಾನ್ಯಾ ಡಿ’ಸೋಜ ವಂದನಾರ್ಪಣೆ ಗೈದರು. ವಿಧ್ಯಾರ್ಥಿ ಸಂಘದ ಡೆಪ್ಯುಟಿ ಸ್ಪೀಕರ್ ರಿಯಾ ಕಾರ್ಯಕ್ರಮ ನಿರೂಪಿಸಿದರು.ಮೂರು ದಿನಗಳ ಕಾಲ ನಡೆದ ಈ ಸಾಂಸ್ಕೃತಿಕ ಉತ್ಸವದಲ್ಲಿ ವಿದ್ಯಾರ್ಥಿಗಳಿಗಾಗಿ ಹಲವಾರು ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

ಆರ್ಟ್‌ಬೀಟ್ : ಇತಿಹೋತ್ಸವ ಎಂಬ ವಿಷಯದ ಅಡಿಯಲ್ಲಿ ನಡೆದ ಕಲಾ ವಿಭಾಗದ ಸಾಂಸ್ಕೃತಿಕ ಉತ್ಸವದಲ್ಲಿ ೧೦ಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದವು. ಕಲೆ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಪುರಾತನ ವಸ್ತುಗಳ ಪ್ರದರ್ಶನ ಉತ್ಸವದ ಪ್ರಮುಖ ಆಕರ್ಷಣೆಯಾಗಿತ್ತು. ನಾನಾ ರಾಜ್ಯಗಳ ಉಡುಗೆ-ತೊಡುಗೆ, ಗೃಹೋಪಯೋಗಿ ವಸ್ತುಗಳು ನೋಡುಗರ ಕಣ್ಮನ ಸೆಳೆದವು.

ಆಕ್ಮೆ ಉತ್ಸವದಲ್ಲಿ ಹತ್ತಕ್ಕೂ ಹೆಚ್ಚು ಕಾಲೇಜುಗಳು ಭಾಗವಹಿಸಿದವು. ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಮೋಕ್‌ಸ್ಟಾಕ್, ಬೆಸ್ಟ್ ಮ್ಯಾನೇಜರ್ ಮುಂತಾದ ವೈವಿಧ್ಯಮಯವಾದ ಸ್ಪರ್ಧೆಗಳನ್ನು ನಡೆಸಲಾಯಿತು.

ಸ್ಪಿನ್ ಔಟ್ ಉತ್ಸವದಲ್ಲಿ, ಔದ್ಯೋಗಿಕ ರಂಗಕ್ಕೆ ಸಂಭಂದಪಟ್ಟ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಯಿತು. ನಾನಾ ಭಾಗಗಳಿಂದ ಆಗಮಿಸಿದ ೧೮ ತಂಡಗಳು ಬಹಳ ಉತ್ಸಾಹದಿಂದ ಉತ್ತಮ ಆಡಳಿತಗಾರ, ಮಾನವ ಸಂಪನ್ಮೂಲ, ಕಂಟೆಂಟ್ ಮಾರ್ಕೆಟಿಂಗ್, ಪಬ್ಲಿಕ್ ರಿಲೇಶನ್ ಮುಂತಾದ ಹಲವು ಸ್ಪರ್ಧೆಗಳಲ್ಲಿ ಭಾಗವಹಿಸಿದರು.

ಇಂಪ್ರಿಂಟ್ಸ್ ಉತ್ಸವದಲ್ಲಿ ಆಯೋಜಿಲಾಗಿದ್ದ ಶೂನ್ಯಶಕ್ತಿ ವಿಜ್ಞಾನ ಮಾದರಿ ವಸ್ತು ಪ್ರದರ್ಶನ ಎಲ್ಲರ ಗಮನ ಸೆಳೆಯಿತು. ಜಗತ್ತಿಗೆ ಭಾರತೀಯ ವಿಜ್ಞಾನದ ಕೊಡುಗೆಯನ್ನು ಸಾರುವ ಹಲವು ಮಾದರಿಗಳು ವಿದ್ಯಾರ್ಥಿಗಳ ಕ್ರಿಯಶೀಲತೆಗೆ ಹಿಡಿದ ಕೈಗನ್ನಡಿಯಾಗಿದ್ದವು.
ಕಂಪ್ಯೂಟರ್ ಸೈನ್ಸ್ ವಿಭಾಗದ ಕಾಂಪೋಸಿಟ್ ಉತ್ಸವದಲ್ಲಿ ಐ.ಟಿ. ಕ್ವಿಝ್, ವೆಬ್ ಡಿಜೈನಿಂಗ್, ಟ್ರೆಜರ್ ಹಂಟ್, ಐ.ಟಿ. ಮ್ಯಾನೇಜರ್ ಮುಂತಾದ ವಿನೂತನ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.

ಅಸ್ತಿತ್ವ ಎಂಬ ಸಾಂಸ್ಕೃತಿಕ ಉತ್ಸವದಲ್ಲಿ ಮನೋವರ್ಣ, ನಾಟ್ಯನೂಪುರ, ನಾಟ್ಯಸುರಭಿ, ಜೆಸ್ಟ್- ಎ- ಮಿನಿಟ್ ಮುಂತಾದ ವಿಶೇಷ ಸ್ಪರ್ಧೆಗಳು ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆದವು.

ಅಲೋಶ್ಯಾಡ್ ಆಟೋಟ ಉತ್ಸವ ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಿತು. ಮಹಿಳೆಯರು ಮತ್ತು ಪುರುಷರಿಗಾಗಿ ಅಂತರ್ ಕಾಲೇಜು ಮಟ್ಟದ ತ್ರೋಬಾಲ್, ಬಾಸ್ಕೆಟ್‌ಬಾಲ್, ಸಾಫ಼್ಟ್‌ಬಾಲ್ ಮತ್ತು ಫುಟ್‌ಬಾಲ್ ಸ್ಪರ್ಧೆಗಳಲ್ಲಿ 40 ತಂಡಗಳು ಭಾಗವಹಿಸಿದವು.

ALOYSIs_FEST_validictory_16 ALOYSIs_FEST_validictory_17 ALOYSIs_FEST_validictory_18 ALOYSIs_FEST_validictory_19 ALOYSIs_FEST_validictory_20 ALOYSIs_FEST_validictory_21 ALOYSIs_FEST_validictory_22 ALOYSIs_FEST_validictory_23 ALOYSIs_FEST_validictory_24 ALOYSIs_FEST_validictory_25 ALOYSIs_FEST_validictory_26 ALOYSIs_FEST_validictory_27 ALOYSIs_FEST_validictory_28 ALOYSIs_FEST_validictory_29 ALOYSIs_FEST_validictory_30 ALOYSIs_FEST_validictory_31 ALOYSIs_FEST_validictory_32

ವಿಜೇತರು:-
ಆರ್ಟ್‌ಬೀಟ್:-
ಪ್ರಥಮ -ಎಮ್.ಜಿ.ಎಮ್ ಕಾಲೇಜು, ಉಡುಪಿ.
ದ್ವಿತೀಯ-ಎಸ್.ಡಿ.ಎಮ್ ಕಾಲೇಜು, ಉಜಿರೆ.

ಆಕ್ಮೆ:-
ಪ್ರಥಮ-ಕ್ರೈಸ್ಟ್ ವಿಶ್ವವಿದ್ಯಾನಿಲಯ, ಬೆಂಗಳೂರು.
ದ್ವಿತೀಯ-ಜೈನ್‌ವಿಶ್ವವಿದ್ಯಾನಿಲಯ, ಬೆಂಗಳೂರು.
ಇಂಪ್ರಿಂಟ್ಸ್:-
ಪ್ರಥಮ- ಕೆನರಾ, ಮಂಗಳೂರು
ದ್ವಿತೀಯ- ಆಳ್ವಾಸ್ ಕಾಲೇಜು,ಮೂಡಬಿಡ್ರೆ.

ಸ್ಪಿನ್‌ಔಟ್:-
ಪ್ರಥಮ- ಕ್ರೈಸ್ಟ್ ವಿಶ್ವವಿದ್ಯಾನಿಲಯ ಬೆಂಗಳೂರು.
ದ್ವಿತೀಯ- ಕೆನರಾ ಕಾಲೇಜು, ಮಂಗಳೂರು
ಕಾಂಪೋಸಿಟ್:-
ಪ್ರಥಮ-ಕ್ರಿಸ್ತ ಜಯಂತಿ ಕಾಲೇಜು, ಬೆಂಗಳೂರು.
ದ್ವಿತೀಯ-ಎಸ್.ಡಿ.ಎಮ್. ಸಿ.ಬಿ.ಎಮ್, ಮಂಗಳೂರು
ಅಸ್ತಿತ್ವ:-
ಪ್ರಥಮ- ಎಸ್.ಡಿ.ಎಮ್. ಮ್ಯಾನೇಜ್ ಮೆಂಟ್ ಕಾಲೇಜು, ಮಂಗಳೂರು
ದ್ವಿತೀಯ-ಎಸ್.ಡಿ.ಎಮ್. ಕಾಲೇಜು, ಉಜಿರೆ.

ಅಲೋಶ್ಯಾಡ್:-

ಬಾಸ್ಕೆಟ್‌ಬಾಲ್-
ಪುರುಷರ ವಿಭಾಗ
ಪ್ರಥಮ-ಸಂತ ಜೋಸೆಫ್ ಕಾಲೇಜು, ಬೆಂಗಳೂರು
ದ್ವಿತೀಯ -ಸಂತ ಅಲೋಷಿಯಸ್, ಮಂಗಳೂರು
ಮಹಿಳೆಯರ ವಿಭಾಗ-
ಪ್ರಥಮ- ಕ್ರೈಸ್ಟ್ ವಿಶ್ವವಿದ್ಯಾನಿಲಯ ಬೆಂಗಳೂರು.
ದ್ವಿತೀಯ-ಎನ್.ಎಸ್.ಎ.ಎಮ್ ಕಾಲೇಜು,ನಿಟ್ಟೆ.

ವಾಲಿಬಾಲ್-
ಪುರುಷರ ವಿಭಾಗ
ಪ್ರಥಮ-ಶಾರದ ಕಾಲೇಜು, ಮಂಗಳೂರು
ದ್ವಿತೀಯ -ಕಾರ್ಮೆಲ್ ಕಾಲೇಜು, ಮೊಡಂಕಾಪು
ಮಹಿಳೆಯರ ವಿಭಾಗ-
ಪ್ರಥಮ-ಬೆಸೆಂಟ್ ಮಹಿಳಾ ಕಾಲೇಜು, ಮಂಗಳೂರು
ದ್ವಿತೀಯ- ಕ್ರೈಸ್ಟ್ ವಿಶ್ವವಿದ್ಯಾನಿಲಯ ಬೆಂಗಳೂರು.

ತ್ರೋಬಾಲ್
ಮಹಿಳೆಯರ ವಿಭಾಗ-
ಪ್ರಥಮ- ಕ್ರೈಸ್ಟ್ ವಿಶ್ವವಿದ್ಯಾನಿಲಯ ಬೆಂಗಳೂರು.
ದ್ವಿತೀಯ-ಸಂತ ಜೋಸೆಫ್ ಕಾಲೇಜು, ಬೆಂಗಳೂರು
ಸಾಫ಼್ಟ್‌ಬಾಲ್
ಪುರುಷರ ವಿಭಾಗ
ಪ್ರಥಮ- ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು,
ದ್ವಿತೀಯ -ಸಂತ ಅಲೋಷಿಯಸ್, ಮಂಗಳೂರು

ಫುಟ್‌ಬಾಲ್
ಪುರುಷರ ವಿಭಾಗ
ಪ್ರಥಮ-ಸಂತ ಅಲೋಷಿಯಸ್, ಮಂಗಳೂರು
ದ್ವಿತೀಯ- ಕ್ರೈಸ್ಟ್ ವಿಶ್ವವಿದ್ಯಾನಿಲಯ ಬೆಂಗಳೂರು.

ಬ್ಯಾಟಲ್‌ಆಫ್ ಬ್ಯಾಂಡ್ಸ್:-
ಪ್ರಥಮ-ಆರೋಹ ಮ್ಯೂಸಿಕ್
ದ್ವಿತೀಯ -ಆವಲಾಂಚ್ ಬ್ರೇಕ್ಡೌನ್

Write A Comment