ಕನ್ನಡ ವಾರ್ತೆಗಳು

ಜನವರಿ 23 : ಡಾ.ಸಿ.ವೀರಣ್ಣ,ಹೆನ್ರಿ ಡಿಸೋಜ,ಡಾ.ಜಯಮಾಲಾ ಸೇರಿದಂತೆ ಆರು ಸಾಧಕರಿಗೆ ಸಂದೇಶ ಪ್ರಶಸ್ತಿ ಪ್ರಧಾನ

Pinterest LinkedIn Tumblr

Sandesh_award_press

ಮಂಗಳೂರು, ಡಿ.21: ಸಂದೇಶ ಸಂಸ್ಕೃತಿ ಮತ್ತು ಶಿಕ್ಷಣ ಪ್ರತಿಷ್ಠಾನದ ವತಿಯಿಂದ ನೀಡಲಾಗುವ 2015ನೆ ಸಾಲಿನ ಸಂದೇಶ ಪ್ರಶಸ್ತಿಗೆ ಆರು ಮಂದಿಯನ್ನು ಆಯ್ಕೆ ಮಾಡಲಾಗಿದೆ.

ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಆಯ್ಕೆ ಸಮಿತಿಯ ಸದಸ್ಯರಾದ ಡಾ.ನಾ.ದಾಮೋದರ ಶೆಟ್ಟಿ ಅವರು, ಸಂದೇಶ ಸಾಹಿತ್ಯ ಪ್ರಶಸ್ತಿಗೆ ಡಾ.ಸಿ.ವೀರಣ್ಣ, ಕೊಂಕಣಿ ಸಂಗೀತ ಪ್ರಶಸ್ತಿಗೆ ಹೆನ್ರಿ ಡಿಸೋಜ, ಕಲಾ ಪ್ರಶಸ್ತಿಗೆ ನವೀನ್ ಡಿ. ಪಡೀಲ್, ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಯಲಕ್ಷ್ಮಿ ದಾಮ್ಲೆ, ಮಾಧ್ಯಮ ಪ್ರಶಸ್ತಿಗೆ ಡಾ.ಜಯಮಾಲಾ ಹಾಗೂ ವಿಶೇಷ ಪ್ರಶಸ್ತಿಗೆ ಗೋಪಾಲ ಖಾರ್ವಿ ಆಯ್ಕೆಯಾಗಿದ್ದಾರೆ ಎಂದರು.

ಕಳೆದ 23 ವರ್ಷಗಳಿಂದ ವಿವಿಧ ಕ್ಷೇತ್ರಗಳ 195 ಸಾಧಕರಿಗೆ ಪ್ರತಿಷ್ಠಾನದಿಂದ ಪ್ರಶಸ್ತಿ ನೀಡಲಾಗಿದೆ. ಜನವರಿ 23ರಂದು ಸಂಜೆ 5 ಗಂಟೆಗೆ ಸಂದೇಶದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಸಕ್ತ ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಧ್ಯಮ ಸಮಿತಿಯ ಮುಖ್ಯಸ್ಥ ಟೈಟಸ್ ನೊರೊನ್ಹ, ಸಂದೇಶ ಪ್ರತಿಷ್ಠಾನದ ರೆ.ಫಾ. ಜಯಪ್ರಕಾಶ್ ಡಿಸೋಜ, ವಿನ್ಸೆಂಟ್ ಮಸ್ಕರೇನ್ಹಸ್ ಉಪ ಸ್ಥಿತರಿದ್ದರು.

Write A Comment