ಕನ್ನಡ ವಾರ್ತೆಗಳು

ಡಿ.18ರಿಂದ ಸಂತ ಅಲೋಶಿಯಸ್ ಕಾಲೇಜ್ ನಲ್ಲಿ “ಅಲೋಶಿಯನ್ ಫೆಸ್ಟ್”

Pinterest LinkedIn Tumblr

ST_ALOYSIUS_COLLEGE_

ಮಂಗಳೂರು, ಡಿ.17 : ಸಂತ ಅಲೋಶಿಯಸ್ (ಸ್ವಾಯತ್ತ) ಕಾಲೇಜಿನ ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವ “ಅಲೋಶಿಯನ್ ಫೆಸ್ಟ್ -2014 “ ಡಿಸೆಂಬರ್ 18  ರಿಂದ 20 ರವರೆಗೆ ಕಾಲೇಜು ಆವರಣದಲ್ಲಿ ನಡೆಯಲಿದೆ. ರಾಷ್ಟ್ರಮಟ್ಟದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಉತ್ಸವದ ಉದ್ಘಾಟನೆಯು ಇದೇ ಡಿಸೆಂಬರ್ 18 ರಂದು ಬೆಳಿಗ್ಗೆ 9.30ಕ್ಕೆ ನೆರವೇರಲಿದೆ. ಸೆಂಟ್ರಲ್ ಬ್ಯಾಂಕ್ ಆಫ಼್ ಇಂಡಿಯಾದ, ಹಿರಿಯ ಪ್ರಾದೇಶಿಕ ವ್ಯವಸ್ಥಾಪಕರಾದ ಶ್ರೀ ವಸ್ತಿ ವೆಂಕಟೇಷ್‌ರವರು ಮುಖ್ಯ ಅತಿಥಿಯಾಗಿ ಈ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸಂತ ಅಲೋಶಿಯಸ್ ಸಮೂಹ ಸಂಸ್ಥೆಗಳ ರೆಕ್ಟರ್ ರೆ| ಫಾ| ಡೆನ್ಜಿಲ್ ಲೋಬೋ ಎಸ್.ಜೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಪ್ರಾಂಶುಪಾಲರಾದ ರೆ| ಫಾ| ಸ್ವೀಬರ್ಟ್ ಡಿಸಿಲ್ವಾ ಈ ಸಂದರ್ಭದಲ್ಲಿ ಉಪಸ್ಥಿತರಿರುತ್ತಾರೆ. ಈ ಉತ್ಸವ ಮೂರು ದಿನಗಳ ಕಾಲ ನಡೆಯಲಿದೆ. ಕಲಾ ವಿಭಾಗದ “ಆರ್ಟ್‌ಬೀಟ್”, ವಾಣಿಜ್ಯ ವಿಭಾಗದ “ಆಕ್ಮೆ”, ವ್ಯವಹಾರ ನಿರ್ವಹಣಾ ವಿಭಾಗದ “ಸ್ಪಿನ್ ಔಟ್”, ವಿಜ್ಞಾನ ವಿಭಾಗದ “ಇಂಪ್ರಿಂಟ್ಸ್”, ಮತ್ತು ಕಂಪ್ಯೂಟರ್ ಸೈನ್ಸ್ ವಿಭಾಗದ “ಕಾಂಪೋಸಿಟ್” ಎನ್ನುವ ಪ್ರತ್ಯೇಕ ಉತ್ಸವವನ್ನು ವಿವಿಧ ವಿಭಾಗಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ. ಅಲ್ಲದೇ, “ಅಸ್ತಿತ್ವ” ಎನ್ನುವ ಸಾಂಸ್ಕೃತಿಕ ಉತ್ಸವ, “ಬ್ಯಾಟಲ್ ಆಫ್ ಬ್ಯಾಂಡ್ಸ್” ಎನ್ನುವ ಸಂಗೀತ ಉತ್ಸವ ಮತ್ತು “ಅಲೋಶ್ಯಾಡ್” ಆಟೋಟ ಉತ್ಸವಗಳು ನಡೆಯಲಿದ್ದು, ಈ ವಿಭಾಗದಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ST_ALOYSIUS_COLLEGE_fest

1.. ಕಲಾ ವಿಭಾಗದ ಆರ್ಟ್‌ಬೀಟ್ ಉತ್ಸವದಲ್ಲಿ “ಇತಿಹೋತ್ಸವ” ವಿಷಯದಲ್ಲಿ ಕೃತಿತ್ವ, ಚಿತ್ರಕಲೆ, ದರ್ಪಣ (ಛಾಯಾಗ್ರಹಣ), ವಾದವಿವಾದ, ಕುಂಭಕಲೆ, ಮನೋ-ವಿಶ್ಲೇಷಣೆ, ಕವಿತಾರಚನೆ, ನೃತ್ಯ, ವಾದ್ಯ ಸಂಗೀತ ಮುಂತಾದ 18 ವೈವಿಧ್ಯಮಯವಾದ ಸ್ಪರ್ಧೆಗಳು ನಡೆಯಲಿವೆ. ಗತವೈಭವವನ್ನು ಸಾರುವ ವಸ್ತ್ತುಪ್ರದರ್ಶನ ಈ ಸಂದರ್ಭದ ವಿಶೇಷ ಆಕರ್ಷಣೆ.
2. ವಾಣಿಜ್ಯ ವಿಭಾಗದ ‘ಆಕ್ಮೆ’ ಉತ್ಸವದಲ್ಲಿ, ವಿದ್ಯಾರ್ಥಿಗಳ ಪ್ರತಿಭೆಗಳನ್ನು ಗುರುತಿಸಿ, ಕುತೂಹಲ ಕೆರಳಿಸುವ ಸ್ಪರ್ಧೆಗಳ ಮೂಲಕ ವಾಣಿಜ್ಯ ಕ್ಷೇತ್ರದಲ್ಲಿ ಉನ್ನತ ಮಟ್ಟಕ್ಕೇರಲು ಸಹಕಾರಿಯಾದ ವೇದಿಕೆಯನ್ನು ಕಲ್ಪಿಸಿಕೊಡಲಾಗುವುದು.
3. ವ್ಯವಹಾರ ನಿರ್ವಹಣೆ ವಿಭಾಗದ ‘ಸ್ಪಿನ್ ಔಟ್’ ಉತ್ಸವದಲ್ಲಿ, ಬೆಸ್ಟ್ ಮ್ಯಾನೇಜರ್(ಉತ್ತಮ ಆಡಳಿತಗಾರ), (ಮಾನವ ಸಂಪನ್ಮೂಲ), ಕಂಟೆಂಟ್ ಮಾರ್ಕೆಟಿಂಗ್, ಪಬ್ಲಿಕ್ ರಿಲೇಶನ್ ಮುಂತಾದ ಹಲವು ಸ್ಪರ್ಧೆಗಳನ್ನು ಆಯೋಜಿಲಾಗಿದೆ.
4. ವಿಜ್ಞಾನ ವಿಭಾಗದ ‘ಇಂಪ್ರಿಂಟ್ಸ್’ ಉತ್ಸವದಲ್ಲಿ “ಭಾರತೀಯ ವೈಜ್ಞಾನಿಕ ಪ್ರಜ್ಞೆಯ ಪುನರುಜ್ಜೀವನ” ಎಂಬ ಆಶಯದಲ್ಲಿ ಇಂಟೆಲ್‌ಜೆನ್ಸಿಯ, ಮೈಕ್ರೋಸ್ಕೋಪ್, ಮ್ಯಾಥರೋನ್, ಖೇನ್ ಪೋಲಿಸ್ ಮುಂತಾದ ಹಲವು ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆ. ಈ ಉತ್ಸವದ ಅಂಗವಾಗಿ “ಶೂನ್ಯಶಕ್ತಿ” ವಿಜ್ಞಾನ ಮಾದರಿ ವಸ್ತು ಪ್ರದರ್ಶನವನ್ನು ನಡೆಸಲಾಗುತ್ತದೆ.

5. ಕಂಪ್ಯೂಟರ್ ಸೈನ್ಸ್ ವಿಭಾಗವು ಮೊದಲ ಬಾರಿಗೆ “ಕಾಂಪೋಸಿಟ್” ಎಂಬ ಉತ್ಸವವನ್ನು ಆಯೋಜಿಸುತ್ತಿದೆ. ಐ.ಟಿ. ಕ್ವಿಝ್, ವೆಬ್ ಡಿಜೈನಿಂಗ್, ಟ್ರೆಜರ್ ಹಂಟ್, ಐ.ಟಿ. ಮ್ಯಾನೇಜರ್ ಮುಂತಾದ ವಿನೂತನ ಸ್ಪರ್ಧೆಗಳನ್ನು ನಡೆಸುತ್ತಿದೆ.
6. ‘ಅಸ್ತಿತ್ವ’ ಎಂಬ ಸಾಂಸ್ಕೃತಿಕ ಉತ್ಸವವೂ ಡಿಸೆಂಬರ್ 19  ಮತ್ತು 20  ರಂದು ನಡೆಯಲಿದ್ದು, ಎಲ್ಲಾ ನಿಕಾಯದ ವಿದ್ಯಾರ್ಥಿಗಳಿಗೆ ಈ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನದಲ್ಲಿ ಭಾಗವಹಿಸಲು ಅವಕಾಶವಿದೆ. ಸಾಂಸ್ಕೃತಿಕ ಕಾರ್ಯಕ್ರಮ, ಮನೋವರ್ಣ, ನಾಟ್ಯನೂಪುರ, ನಾಟ್ಯಸುರಭಿ, ಜೆಸ್ಟ್ ಎ ಮಿನಿಟ್ ಮುಂತಾದ ವಿಶೇಷ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈ ಭಾರಿ “ಬ್ಯಾಟಲ್ ಆಫ್ ಬ್ಯಾಂಡ್ಸ್” ಎಂಬ ನೂತನ ಸಂಗೀತ ಕಾರ್ಯಕ್ರಮವನ್ನು ಈ ಸಂದರ್ಭದಲ್ಲಿ ನಡೆಸಲಾಗುವುದು.
7. ‘ಅಲೋಶ್ಯಾಡ್’ ಆಟೋಟ ಉತ್ಸವವು ಕಾಲೇಜಿನ ಕ್ರೀಡಾಂಗಣದಲ್ಲಿ ಮೂರು ದಿನಗಳ ಕಾಲ ನಡೆಯಲಿದೆ. ಮಹಿಳೆಯರು ಮತ್ತು ಪುರುಷರಿಗಾಗಿ ಅಂತರ್ ಕಾಲೇಜು ಮಟ್ಟದ ತ್ರೋಬಾಲ್, ಬಾಸ್ಕೆಟ್‌ಬಾಲ್, ಸಾಫ಼್ಟ್‌ಬಾಲ್ ಮತ್ತು ಫುಟ್‌ಬಾಲ್ ಸ್ಪರ್ಧೆಗಳು ನಡೆಯಲಿರುವುದು.
8. ಛಾಯಾಚಿತ್ರ ಪ್ರದರ್ಶನ: ಕಾಲೇಜಿನ ಗ್ರಂಥಾಲಯ ವಿಭಾಗವು ಮೂರು ದಿನಗಳ ಕಾಲ ಛಾಯಾಚಿತ್ರ ಪ್ರದರ್ಶನವನ್ನು ಏರ್ಪಡಿಸಿದೆ.ಕಾಲೇಜಿನ ನೂರು ವರ್ಷಗಳ ಇತಿಹಾಸವನ್ನು ಸಾರುವ ಅಪೂರ್ವ ಛಾಯಾಚಿತ್ರಗಳನ್ನು ಕಾಲೇಜಿನ ಗ್ರಂಥಾಲಯದಲ್ಲಿ ಪ್ರದರ್ಶಿಸಲಾಗುವುದು.

ಈ ಸಾಂಸ್ಕೃತಿಕ ಉತ್ಸವದ ಸಮಾರೋಪ ಸಮಾರಂಭವು ಡಿಸೆಂಬರ್ 20 ರಂದು ಶನಿವಾರ, ಅಪರಾಹ್ನ4.00  ಗಂಟೆಗೆ ನಡೆಯಲಿದೆ. ಮುಖ್ಯ ಅತಿಥಿಯಾಗಿ ಕರ್ನಾಟಕ ಬ್ಯಾಂಕ್‌ನ ಜನರಲ್ ಮ್ಯಾನೇಜರ್‌ರಾದ ಡಾ| ಮೀರಾ ಅರ್‍ಹಾನ ಭಾಗವಹಿಸಲಿದ್ದಾರೆ.

‘ಅಲೋಶ್ಯನ್ ಫೆಸ್ಟ್ 2014 ‘, ರಾಷ್ಟ್ರಮಟ್ಟದ ಅಪೂರ್ವ ಉತ್ಸವವಾಗಿದ್ದು, ಈ ವರ್ಷ ಉತ್ಸವದಲ್ಲಿ 25 ರಿಂದ 30  ಕಾಲೇಜುಗಳು ಭಾಗವಹಿಸಲಿವೆ. ಸಂತ ಅಲೋಶಿಯಸ್ ಸಂಸ್ಥೆಗೆ 134  ವರ್ಷಗಳ ಇತಿಹಾಸವಿದೆ. ಸಂಸ್ಥೆಗೆ ತನ್ನದೇ ಆದ ರೀತಿ, ನೀತಿ ಪರಂಪರೆ ಮತ್ತು ಸಂಪ್ರದಾಯವಿದ್ದು, ‘ಪ್ರಕಾಶದಾಯಕ ತೇಜ ಪೂರಕ’. ಧ್ಯೇಯವನ್ನು ಹೊಂದಿದೆ. ಸಂಸ್ಥೆಯು ಜ್ಞಾನಜ್ಯೋತಿಯ ವಿಸ್ತರಣೆಯ ಬದ್ಧತೆಯನ್ನು ಹೊಂದಿದೆ. ಜ್ಞಾನ ಗ್ರಹಿಕೆಗೆ ಹೆಣ್ಣು ಗಂಡು ಎಂಬ ಭೇದವಿಲ್ಲ. ಅವರು ಶೈಕ್ಷಣಿಕವಾಗಿ ಸಂಪೂರ್ಣ ಪ್ರವೀಣರು, ಭಾವನಾತ್ಮಕವಾಗಿ ಸಮಾನರು ಮತ್ತು ನೈತಿಕವಾಗಿ ಪ್ರಾಮಾಣಿಕರು. ಇದರಿಂದಾಗಿ ಅವರು ಸಮಾಜಕ್ಕೆ ಶಕ್ತಿಯುತ ಸಂಪತ್ತಾಗಿ ಪರಿವರ್ತಿತರಾಗುವರು ಎಂದು ಸಂಸ್ಥೆ ನಂಬಿದೆ.

ಹೆಚ್ಚಿನ ಮಾಹಿತಿಗಾಗಿ ಸಂರ್ಪಕಿಸಿ: ಪ್ರೊ. ಜಾನ್ ಶೆರಾ(coordinator )-+919448328136,   ಲಿಜೇನ್ ಡಿ’ಸೋಜ-(-(President,Students’ Council)-8095243275

Write A Comment