ಕನ್ನಡ ವಾರ್ತೆಗಳು

ಚೆನ್ನೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 13 ಕೆ.ಜಿ ತೂಕದ ಚಿನ್ನ ಪತ್ತೆ

Pinterest LinkedIn Tumblr

Gold_investment_0_0_0_0_0_0_0_0

ಚೆನ್ನೈ, ಡಿ.9: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಿಂಗಪುರದಿಂದ ಬಂದಿಳಿದು ಹೊರಡುವ ಆತುರ ತೋರುತ್ತಿದ್ದ ವ್ಯಕ್ತಿಯೊಬ್ಬನ ಮೇಲೆ ಅನುಮಾನ ಬಂದು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಬಂಧಿತ ಬಳಿ ಸುಮಾರು 13 ಕೆ.ಜಿ ತೂಕದ ಚಿನ್ನ ಇರುವುದು ಪತ್ತೆಯಾಗಿದೆ. ರಿಯಾಜ್ ಮಹಮ್ಮದ್ ಎಂಬ ವ್ಯಕ್ತಿ ಸಿಂಗಪುರದಿಂದ ಮಂಗಳವಾರ ಬೆಳಗ್ಗೆ ಆಗಮಿಸಿದ್ದಾನೆ. ಆತನ ಚಲನವಲನದ ಮೇಲೆ ಸಂಶಯ ಮೂಡಿದೆ. ಕಸ್ಟಮ್ ಅಧಿಕಾರಿಗಳು ತಪಾಸಣೆ ಮಾಡಿದಾಗ ಆತನ ಬಳಿ ಇದ್ದ ಸೂಟ್ ಕೇಸಿನಲ್ಲಿ 6.5 ಕೆಜಿ ಚಿನ್ನ ಇರುವುದು ಪತ್ತೆಯಾಗಿದೆ. ನಂತರ ಸಿಐಎಸ್ ಎಫ್ ಸಿಬ್ಬಂದಿ ಇನ್ನಷ್ಟು ವಿಚಾರಣೆ ನಡೆಸಿದ್ದಾರೆ.

ರಿಯಾಜ್ ಬಂದಿಳಿದ ವಿಮಾನದಲ್ಲಿ ವಾರಸುದಾರರಿಲ್ಲದ ಚೀಲವೊಂದು ಪತ್ತೆಯಾಗಿತ್ತು. ಭದ್ರತಾ ಸಿಬ್ಬಂದಿ ಆ ಚೀಲವನ್ನು ಸ್ವಾಧೀನಕ್ಕೆ ತೆಗೆದುಕೊಂಡು ಬಿಚ್ಚಿ ನೋಡಿದಾಗ ಅದರಲ್ಲಿ ಇನ್ನೂ 6.5 ಕೆ.ಜಿ ಚಿನ್ನ ಇರುವುದು ಕಂಡು ಬಂತು. ಒಟ್ಟಾರೆ ಚೆನ್ನೈ ವಿಮಾನ ನಿಲ್ದಾಣದಲ್ಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಸುಮಾರು 5 ಕೋಟಿ ರೂ. ಮೌಲ್ಯದ 13 ಕೆ.ಜಿಗೂ ಹೆಚ್ಚು ಚಿನ್ನ ಸಿಕ್ಕಿದ್ದು ವಶಪಡಿಸಿಕೊಂಡಿದ್ದಾರೆ.

Write A Comment