ಕನ್ನಡ ವಾರ್ತೆಗಳು

ವಕ್ವಾಡಿ ಪರಿಸರದಲ್ಲಿ ಚಿರತೆ ಕಾಟ; ಸೆರೆ ಹಿಡಿಯುವ ಕಾರ್ಯಾಚರಣೆ ವಿಫಲ

Pinterest LinkedIn Tumblr

ಕುಂದಾಪುರ: ಕಳೆದ ಒಂದು ವಾರದಿಂದ ವಕ್ವಾಡಿ, ಕೆದೂರು, ಹೂವಿನಕೆರೆ, ಕುರ್‍ವಾಡಿ,ಚಾರುಕೊಟ್ಟಿಗೆ ಪ್ರದೇಶದ ಗೆರುನೆಡುತೋಪು ಮತ್ತು ಅದಕ್ಕೆ ತಾಗಿಕೊಂಡಿರುವ ಅರಣ್ಯ ಪ್ರದೇಶದಲ್ಲಿ ಚಿರತೆ ಪ್ರತ್ಯಕ್ಷದಿಂದ ಭಯಭೀತರಾದ ಇಲ್ಲಿನ ಜನರು ಅರಣ್ಯ ಇಲಾಖೆಗೆ ದೂರು ನೀಡಿದ ಹಿನ್ನಲೆಯಲ್ಲಿ ಚಿರತೆ ಬಂಧನಕ್ಕಾಗಿ ಅರಣ್ಯ ಇಲಾಖೆ ಮತ್ತು ಊರಿನವರು ಸೇರಿ ರವಿವಾರ ಸಂಜೆ ಎರಡು ಹಂತದ ಕಾರ್ಯಚರಣೆ ವಿಫಲಗೊಂಡಿದೆ.

Vakwady_Chirathe_Karyacharane Vakwady_Chirathe_Karyacharane (1) Vakwady_Chirathe_Karyacharane (2) Vakwady_Chirathe_Karyacharane (3)

ಹೂವಿನಕೆರೆ ಮಠದ ಸಮೀಪ ಮಾವುತೋಟದಲ್ಲಿ ದೊಡ್ಡ ಚಿರತೆಯೊಂದು ಮಾವಿನ ಮರದ ಮೇಲೆ ಮಲಗಿದ್ದನ್ನು ನೋಡಿದ ನಾಗರಾಜ ಶೆಟ್ಟಿಗಾರ ಅಲ್ಲಿಯೇ ಸಮೀಪ ಇದ್ದ ಕೆಲವರನ್ನು ಸೇರಿಕೊಂಡು ಬರುವಷ್ಟರಲ್ಲಿ ಚಿರತೆ ಪರಾರಿಯಾಗಿದೆ. ತದನಂತರ ರಾಧಾಕೃಷ್ಣ ಶೇರೆಗಾರ ಮತ್ತು ಗೆಳೆಯರು ಮದುವೆ ಹಿಂದಿನ ಮೆಂದಿ ಕಾರ್ಯಕ್ರಮಕ್ಕೆ ತೆರಳುತ್ತರುವಾಗ ಚಿರತೆ ಮರಿಗಳು ಎದುರಿಗೆ ಸಿಕ್ಕಿತು. ಕೂಡಲೆ ಬೆಂಕಿ ದೊಂದಿ ಹಿಡಿದು ಪಟಾಕಿ ಸಿಡಿಸಿ ಚಿರತೆ ಮರಿಗಳನ್ನು ಓಡಿಸಿದ್ದಾರೆ. ಈ ಪರಿಸರದಲ್ಲಿ ಸಾಕುನಾಯಿಗಳನ್ನು ಎತ್ತಿಕೊಂಡು ಹೋಗಿವೆ. ಮೇಯಲು ಹೋದ ದನಕರುಗಳು ಮನೆಗೆ ತೆರಳಲಿಲ್ಲ. ಮತ್ತು ಅಲ್ಲಲ್ಲಿ ದನದ ಕೊಟ್ಟಿಗೆಗೆ ಪ್ರವೇಶಿಸಿ ದನನಕರುಗಳ ಮೇಲೆ ದಾಳಿ ಮಾಡಿವೆ. ವಾಹನಗಳು ಬರುತ್ತಿದ್ದರೂ ಇಲ್ಲಿರಾಜಾರೋಷದಿಂದ ಚಿರತೆಗಳು ತಿರುಗಾಡುವುದರಿಂದ ಜನರು ಮನೆಯಿಂದ ಹೊರಗಡೆ ಬರಲು ಹೆದರುತ್ತಿದ್ದಾರೆ.

ಫಾರೆಸ್ಟ್ ರೇಂಜರ್ ಲೋಹಿತ್ ನೇತೃತ್ವದಲ್ಲಿ ನಾಲ್ಕು ಜನ ಅರಣ್ಯ ಅಧಿಕಾರಿಗಳು, ಹತ್ತು ಫಾರೆಸ್ಟ್ ಗಾಡ್ಸ್, ಕಾಳಾವರ ಗ್ರಾ.ಪಂ ಅಧ್ಯಕ್ಷ ಚಂದ್ರ ಶೇಖರ್ ಶೆಟ್ಟಿಗಾರ್, ಕೆದೂರು ಗ್ರಾ.ಪಂ. ಅಧ್ಯಕ್ಷ ಶರತ್ ಕುಮಾರ್ ಶೆಟ್ಟಿ, ಬಲೆ ಹಾಕುವವರ ತಂಡ, ನೂರ ಐವತ್ತಕ್ಕೂ ಹೆಚ್ಚು ಸ್ಥಳೀಯರು ಕಾರ್ಯಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಯಾರ ಕಣ್ಣಿಗೂ ಚಿರತೆ ಗೋಚರಿಸದೇ ಇರುವುದರಿಂದ ನಿರಾಶರಾಗಿದ್ದಾರೆ.

Write A Comment