ಕನ್ನಡ ವಾರ್ತೆಗಳು

ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ ವಾರ್ಷಿಕ ಹೊನಲು ಬೆಳಕಿನ ಕ್ರೀಡೋತ್ಸವ

Pinterest LinkedIn Tumblr

kalladka_drill_celbratin_1

ಬಂಟ್ವಾಳ : ತಾಲ್ಲೂಕಿನ ಕಲ್ಲಡ್ಕ ಶ್ರೀರಾಮ ವಿದ್ಯಾ ಕೇಂದ್ರದಲ್ಲಿ   ರಾತ್ರಿ ನಡೆದ ವಾರ್ಷಿಕ ಹೊನಲು ಬೆಳಕಿನ ಕ್ರೀಡೋತ್ಸವದಲ್ಲಿ ಮಂಗಳಯಾನ ರಾಕೆಟ್ ಉಡಾವಣೆ ಸೇರಿದ ಜನಸೋನವನ್ನು ಮತ್ತೆ ನೆನಪಿಸಿತು. ಪ್ರಧಾನಮಂತ್ತಿ ನರೇಂದ್ರ ಮೋದಿಯವರು ಮಂಗಳಯಾನ ಉಡವಣೆಯ ಯಶಸ್ವಿಗೆ ಸಹಕರಿಸಿದ ವಿಜ್ಞಾನಿಗಳನ್ನು ಅಭಿನಂದಿಸಿ ದೇಶವನ್ನುದ್ದೇಶಿಸಿ ಮಾಡಿದ ಭಾಷಣದ ಅಣುಕು ಪ್ರದರ್ಶನ ಪ್ರೇಕ್ಷಕರ ಕರತಾಡನದ ಮೂಲಕ ಮೆಚ್ಚುಗೆ ವ್ಯಕ್ತ ಪಡಿಸುವಂತೆ ಮಾಡಿತು. ಇಲ್ಲಿನ ಒಟ್ಟು 2,881  ಮಂದಿ ವಿದ್ಯಾರ್ಥಿಗಳು ಆಕರ್ಷಕ ನೃತ್ಯ ಸಹಿತ ವಿವಿಧ ಸಾಹಸ ಪ್ರದರ್ಶನ ನಡೆಸುವ ಮೂಲಕ ಸೇರಿದ್ದ ಸಹಸ್ರಾರು ಮಂದಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದರು.

kalladka_drill_celbratin_2akalladka_drill_celbratin_3 kalladka_drill_celbratin_4 kalladka_drill_celbratin_5

ಇಲ್ಲಿನ ವಿಶಾಲ ಮೈದಾನದಲ್ಲಿ ಪ್ರಾಥಮಿಕ ಪೂರ್ವ, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳು ಭಾನುವಾರ ಸಂಜೆ ಆಕರ್ಷಕ ವೇಷಭೂಷಣದೊಂದಿಗೆ ನೃತ್ಯದ ಮೂಲಕ ಬಣ್ಣ ಬಣ್ಣದ ಚಿತ್ತಾರ ಮೂಡಿಸಿದರು. ಸುಮಾರು ೩ ತಾಸು ನಿರಂತರ ಮತ್ತು ಶಿಸ್ತುಬದ್ಧವಾಗಿ ಶಾರೀರಿಕ ಕಸರತ್ತಿನ ಮೂಲಕ ಸಾಹಸ ಪ್ರದರ್ಶನ ನೀಡುವುದರ ಜೊತೆಗೆ ಆಕರ್ಷಕ ಪಥಸಂಚಲನ, ಶಿಶುಮಂದಿರದ ಪುಟಾಣಿಗಳಿಂದ ನೃತ್ಯ, ಶಾಲಾ ವಾದ್ಯ ವೈವಿಧ್ಯದ ಘೋಷ್ ಪ್ರದರ್ಶನ, ಜಡೆಕೋಲಾಟ ಪ್ರದರ್ಶನ, ಕತ್ತಲೆಯಲ್ಲಿ ಹಣತೆ ಬೆಳಕಿನ ಚಿತ್ತಾರ, ಆತ್ಮರಕ್ಷಣೆಯ ನಿಶ್ಯಸ್ತ್ರ ನಿಯುದ್ಧ ಕಲೆ, ವಿವಿಧ ಯೋಗಾಸನಗಳ ಗುಚ್ಛ, ಚಲಿಸುವ ಮಲ್ಲಕಂಭದಲ್ಲಿ ಮಲ್ಲರ ಕುಸ್ತಿ, ಭಕ್ತಿಪ್ರಧಾನ ನೃತ್ಯ ಭಜನೆ, ಯಕ್ಷರೂಪಕದ ಝಲಕ್, ಸೈಕಲ್ ಮತ್ತು ಬೈಕ್‌ಗಳಲ್ಲಿ ವಿಭಿನ್ನ ಕಸರತ್ತು ಪ್ರದರ್ಶನ, ಬೆಂಕಿಯಲ್ಲಿ ಸಾಹಸ, ಲೀಲಾಜಾಲವಾಗಿ ಕಾಲ್ಚಕ್ರದಲ್ಲಿ ಓಡಾಟ, ಖಾಲಿ ಬಾಟಲು ಬಳಸಿ ಕೂಪಿಕಾ ಸಮತೋಲನ ಹೀಗೆ ಸಾಮೂಹಿಕ ವೈಯಕ್ತಿಕ ಮತ್ತು ಸಾಮೂಹಿಕ ಪ್ರದರ್ಶನ ಪ್ರೇಕ್ಷಕರನ್ನು ಗಮನ ಸೆಳೆಯುವಲ್ಲಿ ಯಶಸ್ವಿಯಾಗಿತು.  ಬೃಹತ್ ಗ್ಯಾಲರಿ ಮೂಲಕ ಪ್ರೇಕ್ಷಕರಿಗೆ ಮಕ್ಕಳ ಈ ಸಾಹಸ ಪ್ರದರ್ಶನ ನೋಡಲು ವ್ಯವಸ್ಥೆ ಮಾಡಿರುವುದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

kalladka_drill_celbratin_6 kalladka_drill_celbratin_7 kalladka_drill_celbratin_8kalladka_drill_celbratin_9akalladka_drill_celbratin_10

ಶಾಲೆ ಸಂಚಾಲಕ ಡಾ.ಕೆ.ಪ್ರಭಾಕರ ಭಟ್ ಸ್ವಾಗತಿಸಿ ಪ್ರಸ್ತಾವಿಸಿದರು. ಶಾಲಾ ಅಧ್ಯಕ್ಷ ಬಿ.ನಾರಾಯಣ ಭಟ್, ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ, ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವರಾದ ಅಲೆಕ್ಸಾಂಡರ್, ಬಿ.ನಾಗರಾಜ ಶೆಟ್ಟಿ, ಮಾಜಿ ಸಂಸದೆ ತೇಜಸ್ವಿನಿ ರಮೇಶ್, ವಿಧಾನಪರಿಷತ್ ಸದಸ್ಯ ಕ್ಯಾಪ್ಟನ್ ಗಣೇಶ ಕಾರ್ಣಿಕ್, ಮಾಜಿ ಶಾಸಕರಾದ ಎ.ರುಕ್ಮಯ ಪೂಜಾರಿ, ಕೆ.ಪದ್ಮನಾಭ ಕೊಟ್ಟಾರಿ, ಉದ್ಯಮಿ ವಿಜಯ ಸಂಕೇಶ್ವರ, ಪ್ರಕಾಶ ಭಟ್ ಮುಂಬೈ, ಪ್ರಕಾಶ ಶೆಟ್ಟಿ ಬೆಂಗಳೂರು, ಹರ್ಷ ಮೇಲಾಂಟ, ರಾಜ ಕೃಷ್ಣದೇವರಾಯ, ಗೋನಾಳ ರಾಜಶೇಖರ ಗೌಡ, ಯುಧಿಷ್ಠಿರ, ಆಶಾ ಪ್ರಕಾಶ್ ಶೆಟ್ಟಿ, ಶಾಸಕ ಮುನಿರಾಜು, ಉದ್ಯಮಿ ಗೋನಾಳ ರಾಜಶೇಖರ ಗೌಡ, ಆನಂದ ಶೆಟ್ಟಿ ಮುಂಬೈ, ಸಂಸದೆ ವಸಂತಿ ಸ್ಟ್ಯಾನ್ಲಿ, ವಿಶಾಲರಾವ್ ಹೈದರಬಾದ್, ಕಲ್ಯಾಣ್‌ರಾವ್, ಜಯಚಂದ್ರನ್,ರವಿಶಂಕರ್ ಶೆಟ್ಟಿ, ಚಲನಚಿತ್ರತಾರೆ ನಿಧಿ, ಆರ್‌ಸೆ‌ಎಸ್ ಪ್ರಮುಖರಾದ ಚಂದ್ರಶೇಖರ್ ಭಂಡಾರಿ, ಕಜಂಪಾಡಿ ಸುಬ್ರಹ್ಮಣ್ಯ ಭಟ್, ಸುಧೀರ್, ದಿನೇಶ್ ಹೆಗ್ಡೆ, ಮಂಗೆಶ್ ಬೇಂಡೆ, ಕಿರಣ್ ಕುಮಾರ್ ಮತ್ತಿತರರು ಇದ್ದರು.

Write A Comment