ಕನ್ನಡ ವಾರ್ತೆಗಳು

ಬ್ಲಡ್ ಬ್ಯಾಂಕ್ ಗಳಿಗೂ ಆನ್ ಲೈನ್ ವ್ಯವಸ್ಥೆ.

Pinterest LinkedIn Tumblr

 blood_bnak_online

ನವದೆಹಲಿ,ಡಿ.06: ಅಪಘಾತ ಮತ್ತಿತರ ತುರ್ತು ಸಂದರ್ಭದಲ್ಲಿ ಅಗತ್ಯವಿರುವ ಗುಂಪಿನ ರಕ್ತಕ್ಕೆ ಬ್ಲಡ್ ಬ್ಯಾಂಕ್ ಗಳಿಗೆ ಅಲೆದಾಡುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಬ್ಲಡ್ ಬ್ಯಾಂಕ್ ವ್ಯವಸ್ಥೆ ಇನ್ನಷ್ಟು ಸುಧಾರಿಸಲು ಮುಂದಾಗಿರುವ ಸರ್ಕಾರ ಎಲ್ಲ ಬ್ಲಡ್ ಬ್ಯಾಂಕ್ ಗಳಿಗೂ ಆನ್ ಲೈನ್ ವ್ಯವಸ್ಥೆ ಅಳವಡಿಸಲಾಗುವುದು ಎಂದು ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ದೇಶದ ಹಲವು ಭಾಗದಲ್ಲಿ ಬ್ಲಡ್ ಬ್ಯಾಂಕ್ ಗಳಿದ್ದರೂ ಜನರು ತಮಗೆ ಅಗತ್ಯವಿರುವ ರಕ್ತಕ್ಕಾಗಿ ಅಲೆಯಬೇಕಾಗುತ್ತಿದೆ. ಇದಕ್ಕೆ ಪರಿಹಾರ ಕಲ್ಪಿಸಲು ಇಂಥ ಯೋಜನೆ ಜಾರಿ ಮಾಡಲಾಗುತ್ತಿದೆ ಎಂದು ಶುಕ್ರವಾರ ಲೋಕಸಭೆಗೆ ತಿಳಿಸಿದರು.

ವಿಶ್ವಸಂಸ್ಥೆ ಗುರುತಿಸಿರುವ ಸುರಕ್ಷಿತ ಮತ್ತು ಉತ್ತಮ ಬ್ಲಡ್ ಬ್ಯಾಂಕ್ ಹೊಂದಿರುವ 51 ದೇಶಗಳ ಪೈಕಿ ಭಾರತವೂ ಸ್ಥಾನ ಪಡೆದುಕೊಂಡಿದೆ. ಆನ್ ಲೈನ್ ವ್ಯವಸ್ಥೆ ಜಾರಿಯಾದರೆ ಈ ವ್ಯವಸ್ಥೆ ಇನ್ನಷ್ಟು ಭದ್ರವಾಗಲಿದೆ ಎಂದು ಹೇಳಿದರು. ದೇಶಾದ್ಯಂತ ಇನಷ್ಟು ಬ್ಲಡ್ ಬ್ಯಾಂಕ್ ತೆರಯುವ ಚಿಂತನೆಯನ್ನು ನಡೆಸಲಾಗಿದ್ದು ಜನರಿಗೆ ಅಗತ್ಯವಾದ ಗುಂಪಿನ ಬ್ಲಡ್ ಎಲ್ಲಿ ಲಭ್ಯವಿದೆ? ಎಂಬುದು ತಕ್ಷಣ ಗೊತ್ತಾಗಬೇಕು. ಆನ್ ಲೈನ್ ವ್ಯವಸ್ಥೆ ಇದಕ್ಕೆ ಪರಿಹಾರವಾಗಬಲ್ಲದು ಎಂದು ತಿಳಿಸಿದರು.

Write A Comment