ಕನ್ನಡ ವಾರ್ತೆಗಳು

ಹೊಂಡಕ್ಕೆ ಉರುಳಿ ಬಿದ್ದ ಟ್ಯಾಂಕರ್ : ಅನಿಲ ಸೋರಿಕೆ : ಪರಿಸರದಲ್ಲಿ ಮುನ್ನೆಚ್ಚರಿಕೆ ಕ್ರಮ :ದಿನವಿಡೀ ರಾಷ್ಟ್ರೀಯ ಹೆದ್ದಾರಿ ಸಂಚಾರ ಬಂದ್

Pinterest LinkedIn Tumblr

Tankar_Palty_kasrgod

ಕಾಸರಗೋಡು, ಡಿ.6: ಪೆಟ್ರೋಲಿಯಂ ಅನಿಲ ಸಾಗಾಟದ ಟ್ಯಾಂಕರ್‌ವೊಂದು ರಸ್ತೆ ಬದಿಯ ಹೊಂಡಕ್ಕೆ ಉರುಳಿಬಿದ್ದ ಘಟನೆ ರಾಷ್ಟ್ರೀಯ ಹೆದ್ದಾರಿಯ ಕುಂಬಳೆಯ ಶಿರಿಯಾ ಬಳಿ ಗುರುವಾರ ರಾತ್ರಿ 11:30ರ ಸುಮಾರಿಗೆ ನಡೆದಿದೆ.

ಉರುಳಿಬಿದ್ದ ರಭಸಕ್ಕೆ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಉಂಟಾಗಿದ್ದು, ಶಿರಿಯ ಸುತ್ತಮುತ್ತ ಸೂಕ್ತ ಮುನ್ನೆಚ್ಚರಿಕೆ ವಹಿಸಲಾಗಿತ್ತು. ಮಂಗಳೂರಿನಿಂದ ಕೊಚ್ಚಿಗೆ ತೆರಳುತ್ತಿದ್ದ ಈ ಟ್ಯಾಂಕರ್ ಶಿರಿಯಾ ಪೆಟ್ರೋಲ್ ಬಂಕ್ ಬಳಿ ತಲುಪುತ್ತಿದ್ದಂತೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಸುಮಾರು 20 ಅಡಿ ಆಳದ ಹೊಂಡಕ್ಕೆ ಉರುಳಿಬಿದ್ದಿದೆ. ಘಟನೆಯಲ್ಲಿ ಟ್ಯಾಂಕರ್ ಚಾಲಕ ಮತ್ತು ಕ್ಲೀನರ್ ಪಾರಾಗಿದ್ದಾರೆ.

ಅಪಘಾತದ ಸುದ್ದಿ ತಿಳಿದು ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಮುಂಜಾಗ್ರತಾ ಕ್ರಮಗಳನ್ನು ತೆಗೆದು ಕೊಂಡರು. ಮುಂಜಾವ 3 ಗಂಟೆ ಸುಮಾರಿಗೆ ಮಂಗಳೂರಿನಿಂದ ಆಗಮಿ ಸಿದ ಹಿಂದೂಸ್ಥಾನ ಪೆಟ್ರೋಲಿಯಂ ಕಂಪೆನಿಯ ಅಧಿಕಾರಿಗಳು ಹಾಗೂ ತಜ್ಞರು ಅನಿಲ ಸೋರಿಕೆಯನ್ನು ತಡೆ ಗಟ್ಟಿದರು.

ಅಪಘಾತ ಸಂಭವಿಸಿದ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಜಿಲ್ಲೆಯ ಉಪ್ಪಳ, ಕಾಸರಗೋಡು, ತೃಕರಿಪುರ, ಕಾಞಂಗಾಡ್ ಹಾಗೂ ಇನ್ನಿತೆರೆಡೆಗಳಿಂದ ಅಗ್ನಿಶಾಮಕದ ಘಟಕಗಳು ಸ್ಥಳಕ್ಕೆ ತಲುಪಿದವು. ಬೇರೆ ಟ್ಯಾಂಕರ್‌ಗೆ ಗ್ಯಾಸ್ ವರ್ಗಾ ವಣೆ: ಮಗುಚಿ ಬಿದ್ದ ಟ್ಯಾಂಕರ್ನಿಂದ ಅನಿಲ ಸೋರಿಕೆಯಾಗುತ್ತಿರುವ ಹಿನ್ನೆಲೆ ಯಲ್ಲಿ ಮಂಗಳೂರಿನಿಂದ ಆಗಮಿಸಿದ ತಜ್ಞರು ಅನಿಲವನ್ನು ಇನ್ನೊಂದು ಟ್ಯಾಂಕರ್‌ಗೆ ವರ್ಗಾಯಿಸಿ ದರು. ಗುರುವಾರ ಮಧ್ಯಾಹ್ನ 12 ಗಂಟೆಗೆ ಆರಂಭಗೊಂಡ ಈ ಪ್ರಕ್ರಿಯೆ ರಾತ್ರಿ 7:30ಕ್ಕೆ ಪೂರ್ಣಗೊಂಡಿತು.

ಈ ನಡುವೆ ಮಗುಚಿ ಬಿದ್ದಿರುವ ಟ್ಯಾಂಕರ್‌ನಲ್ಲಿ ಇನ್ನೂ ಅನಿಲ ಬಾಕಿ ಉಳಿದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ರಾತ್ರಿಯೂ ಮುನ್ನೆಚ್ಚರಿಕೆ ವಹಿಸಬೇಕು. ಟ್ಯಾಂಕರ್‌ನ್ನು ತೆರವುಗೊಳಿಸುವವರೆಗೆ ಸಮೀಪ ಪ್ರದೇಶದವರು ಬೆಂಕಿ ಉರಿಸಬಾರದು ಎಂದು ತೈಲ ಕಂಪೆನಿ ಅಧಿಕಾರಿಗಳು ಸೂಚಿಸಿದ್ದಾರೆ. ನಾಳೆ ಬೆಳಗ್ಗೆ ಟ್ಯಾಂಕರ್‌ನ್ನು ಹೊಂಡದಿಂದ ಮೇಲೆತ್ತಲಾಗುತ್ತದೆ.

ಮುಂಜಾಗೃತಾ ಕ್ರಮ

ಮುಂಜಾಗೃತಾ ಕ್ರಮವಾಗಿ ಘಟನಾ ಪರಿಸರದ 500 ಮೀ. ವ್ಯಾಪ್ತಿಯ ಸುಮಾರು 80 ಮನೆಗಳ ವರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿ ಸಲಾಯಿತು. ಪ್ರದೇಶದಲ್ಲಿ ರಾತ್ರಿ ಯಿಂದಲೇ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಬೆಂಕಿ ಉರಿ ಸದಂತೆ ಸ್ಥಳೀಯರಿಗೆ ಮುನ್ನೆಚ್ಚರಿಕೆ ನೀಡಲಾಯಿತು.
ಹೆದ್ದಾರಿ ಸಂಚಾರ ಬಂದ್ ಟ್ಯಾಂಕರ್‌ನಿಂದ ಅನಿಲ ಸೋರಿಕೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಂಗಳೂರು-ಕಾಸರಗೋಡು ಸಂಪರ್ಕದ ಪ್ರಮುಖ ರಸ್ತೆಯಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿನ್ನೆ ರಾತ್ರಿಯಿಂದ ಇಂದು ರಾತ್ರಿ 7:30 ರವರೆಗೂ ಹೆದ್ದಾರಿ ವಾಹನ ಸಂಚಾರವನ್ನು ಸಂಪೂರ್ಣ ಸ್ಥಗಿತ ಗೊಳಿಸಲಾಗಿತ್ತು. ಇದರಿಂದ

ಬಸ್ ಸೇರಿದಂತೆ ವಾಹನಗಳು ಬದಲಿ ಮಾರ್ಗವಾಗಿ ಸಂಚರಿಸಿದವು. ಮಂಗಳೂರು ಕಡೆಗೆ ತೆರಳುವ ವಾಹನಗಳು ಕಾಸರಗೋಡಿನಿಂದ ಸೀತಾಂಗೋಳಿ-ಪೆರ್ಮುದೆ-ಪೈವಳಿಕೆ ರಸ್ತೆಯಾಗಿ ಉಪ್ಪಳ ಮೂಲಕ ಹಾಗೂ ಕೆಲ ವಾಹನಗಳು ಪೆರ್ಮುದೆಯಿಂದ ಬಂದ್ಯೋಡ್ ಮಾರ್ಗವಾಗಿ ಸಂಚ ರಿಸಿದವು. ಮಂಗಳೂರಿನಿಂದ ಬರುವ ವಾಹನಗಳು ಉಪ್ಪಳ ಮತ್ತು ಬಂದ್ಯೋಡ್ ಒಳರಸ್ತೆ ಮೂಲಕ ಪೆರ್ಮುದೆ ಮಾರ್ಗವಾಗಿ ಸೀತಾಂಗೋಳಿ ತಲುಪಿ ಅಲ್ಲಿಂದ ಕಾಸರಗೋಡು ಹಾಗೂ ಇತರೆಡೆ ಪ್ರಯಾಣಿಸಿದವು. ಹಲವರು ರಸ್ತೆಯ ಅರಿವಿಲ್ಲದೆ ಪರದಾಡಿದರು. ರಾತ್ರಿಯ ವೇಳೆ ಹೆದ್ದಾರಿ ಸಂಚಾರ ಭಾಗಶಃ ಪುನಾರಂಭಗೊಂಡಿದೆ. ಆದರೆ ಘನ ವಾಹನಗಳ ಸಂಚಾರವನ್ನು ನಿರ್ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀತಿ ಮೂಡಿಸಿದ ಅನಿಲ ಸೋರಿಕೆ

ಉರುಳಿಬಿದ್ದ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾಗುತ್ತಿರುವ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ಆತಂಕ ಗೊಂಡಿದ್ದರು. ಅವಘಡ ನಡೆದ ಸ್ಥಳದ ಸಮೀಪವೇ ಪೆಟ್ರೋಲ್ ಬಂಕ್ ಇರುವುದು ಭಯ ಇನ್ನಷ್ಟು ಹೆಚ್ಚಲು ಕಾರಣವಾಗಿತ್ತು. ಈ ಹಿಂದೆ ಕಣ್ಣೂರು ಮತ್ತು ಉಪ್ಪಿನಂಗಡಿಯಲ್ಲಿ ಸಂಭವಿಸಿದ ಟ್ಯಾಂಕರ್ ಸ್ಫೋಟ ಹಲವರನ್ನು ಬಲಿ ತೆಗೆದುಕೊಂಡಿದ್ದರಿಂದ ಜನ ಭೀತಿ ಗೊಂಡಿದ್ದರು. ತಡರಾತ್ರಿ ನಡೆದ ಘಟನೆಯಿಂದ ಮುಂಜಾಗೃತ ಕ್ರಮ ಗಳ ಬಗ್ಗೆ ತಿಳಿಯದೆ ಸ್ಥಳೀಯರು ಪರದಾಡಿದರು. ಆದರೆ ಸ್ಥಳದಲ್ಲಿದ್ದ ಅಗ್ನಿಶಾಮಕದಳ ಹಾಗೂ ಪೊಲೀಸರು ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಂಡಿದ್ದರು.

Write A Comment