ಕನ್ನಡ ವಾರ್ತೆಗಳು

ದುಬೈ ಪ್ರಯಾಣಿಕನ ಬಳಿ 27,27,120 ರೂ. ಮೌಲ್ಯದ 1033.00 ಗ್ರಾಂ ಅಕ್ರಮ ಚಿನ್ನ ಪತ್ತೆ

Pinterest LinkedIn Tumblr

Airport_gold_sezed_2

ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಬುಧವಾರ ಇನ್ನೊಂದು ಅಕ್ರಮ ಚಿನ್ನ ಸಾಗಾಟ ಪ್ರಕರಣವನ್ನು ಪತ್ತೆ ಹಚ್ಚಿ ಆರೋಪಿಯನ್ನು ಚಿನ್ನ ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ.

ದುಬಾಯಿಯಿಂದ ಆಗಮಿಸಿದ ಕಾಸರಗೋಡಿನ ಅಬ್ದುಲ್ ಗಫೂರ್ ಕಡಪ್ಪುರಂ Abdul Gaffoor Kadappuram (44) ಎಂಬ ಪ್ರಯಾಣಿಕನ ಬಳಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು 27,27,120 ರೂ. ಮೌಲ್ಯದ 1033.00 ಗ್ರಾಂ ಚಿನ್ನ ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Airport_gold_sezed_3 Airport_gold_sezed_1

ಆರೋಪಿ ಅಹಮ್ಮದ್ ಕುಂಞಿ ಕಡ್ಡಪ್ಪುರಮ್ ಡಿ.3 ರಂದು 8.10 ಕ್ಕೆ ದುಬಾಯಿನಿಂದ ಜೆಟ್‌ ಏರ್‌ವ್ಪೆಸ್‌ 9W531 ವಿಮಾನದಲ್ಲಿ ಮಂಗಳೂರಿಗೆ ಆಗಮಿಸಿದ್ದನು. ಈ ಸಂದರ್ಭದಲ್ಲಿ ಈತ  ಸೂಟ್ ಕೇಸ್, ಮಹಿಳೆಯರ ಹ್ಯಾಂಡ್ ಬ್ಯಾಗ್ ಮತ್ತು ಜೀನ್ಸ್ ಪ್ಯಾಂಟ್ ನ ಬಟನ್ ನಲ್ಲಿ ಸುಮಾರು 27,27,120 ರೂ. ಮೌಲ್ಯದ 1033.00 ಗ್ರಾಂ ಬೆಳ್ಳಿ ಲೇಪಿತ ಚಿನ್ನವನ್ನು ಅಡಗಿಸಿಟ್ಟು ಸಾಗಿಸಲು ಪ್ರಯತ್ನಿಸುತ್ತಿದ್ದ. ವಿಮಾನ ನಿಲ್ದಾಣದ ಕಸ್ಟಮ್ಸ್‌ ಅಧಿಕಾರಿಗಳು ಸಂಶಯದ ಮೇಲೆ ಈತನನ್ನು ತೀವ್ರ ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ಮುಂದುವರಿದಿದೆ..

Write A Comment