ಕನ್ನಡ ವಾರ್ತೆಗಳು

ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿ ವತಿಯಿಂದ ವಿದ್ಯಾನಿಧಿ ಸಹಾಯಾರ್ಥ ನಾಟಕ ಪ್ರದರ್ಶನ, ಸನ್ಮಾನ

Pinterest LinkedIn Tumblr

mumbai_kulal_sanga_1a

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ಕುಲಾಲ ಸಂಘ ಮುಂಬಯಿ ಇದರ ಚರ್ಚ್ ಗೇಟ್ – ದಹಿಸರ್ ಸ್ಥಳೀಯ ಸಮಿತಿಯ ವತಿಯಿಂದ ವಿದ್ಯಾನಿಧಿ ಸಹಾಯಾರ್ಥ ವಿಧಾತ್ರಿ ಕಲಾವಿದರಿಂದ ’ನಿಕ್ ಗೊತ್ತುಂಡಾ.. ?’ ತುಳು ನಾಟಕ ವನ್ನು ನ. 30 ರಂದು ಮಾಟುಂಗಾದ ಡಾ. ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಪ್ರದರ್ಶಿಸಲಾಯಿತು.  ಸಂಘದ ಅಧ್ಯಕ್ಷ ಗಿರೀಶ್ ಸಾಲ್ಯಾನ್ ಅವರ ಅಧ್ಯಕ್ಷತೆಯಲ್ಲಿ ಜರಗಿದ ಸಭಾ ಕಾರ್ಯಕ್ರಮದಲ್ಲಿ ಹಿರಿಯರಾದ ವಾಮನ್ ಕರ್ಕೇರ, ಬಿ. ಎಸ್. ಮೂಲ್ಯ, ಹೋಟೇಲು ಉದ್ಯಮಿ ವಸಂತ ಬಂಗೇರ, ದುರ್ಗಾದೇವಿ ಮಂದಿರ ಗೋರೆಗಾಂವ್ ಇದರ ಸ್ಥಾಪಕ ಸದಸ್ಯ ಎಸ್. ಬಿ. ಸಾಲ್ಯಾನ್, ಮಹಿಳಾ ವೈದ್ಯೆ ಡಾ. ದಿವ್ಯಾ ನಾರಾಯಣ ಮೂಲ್ಯ ಇವರನ್ನು ಸನ್ಮಾನಿಸಲಾಯಿತು. ನಾಟಕದ ನಿರ್ದೇಶಕರಾದ ಚಿದಾನಂದ ಕುಲಾಲ್ ಅದ್ಯಪಾಡಿ ಮತ್ತು ಬಾಸ್ಕರ ಕುಲಾಲ್ ಆದ್ಯಪಾಡಿಯವರನ್ನು ಗೌರವಿಸಲಾಯಿತು.

mumbai_kulal_sanga_2a mumbai_kulal_sanga_3 mumbai_kulal_sanga_4a

ಗಿರೀಶ್ ಸಾಲ್ಯಾನ್ ಅವರು ಮಾತನಾಡುತ್ತಾ ಕುಲಾಲ ಸಂಘವು, ಅಭಿವೃದ್ದಿಯೊಂದಿಗೆ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದೆ ಅಲ್ಲದೆ ಜನವರಿ 18 ರಂದು ಮಂಗಳೂರಿನಲ್ಲಿ ಕುಲಾಲ ಭವನದ ಕೆಲಸಕ್ಕೆ ಮುಹೂರ್ತ ನಡೆಯಲಿದ್ದು ಸಮಾಜ ಬಾಂಧವರನ್ನು ಆಮಂತ್ರಿಸಿದರು.ಡಾ. ದಿವ್ಯಾ ನಾರಾಯಣ ಮೂಲ್ಯ ಅವರು ಸನ್ಮಾನಕ್ಕೆ ಉತ್ತರಿಸಿ, ಮಕ್ಕಳಿಗೆ ಯಾವ ಕ್ಷೇತ್ರದಲ್ಲಿ ಶಿಕ್ಶಣ ಪಡೆಯಲು ಆಸಕ್ತಿ ಇದೆಯೋ ಅದರಲ್ಲೇ ಅವರನ್ನು ಮುಂದುವರಿಸಬೇಕು ಎಂದರು.   ಮುಖ್ಯ ಅತಿಥಿ ಸೋಮಯ್ಯ ಹೊನ್ನನಡೆ ಯವರು ಮಾತನಾಡುತ್ತಾ ಮಕ್ಕಳ ಶಿಕ್ಷಣ ಮತ್ತು ಆರೋಗ್ಯದ ಕಡೆ ಹೆಚ್ಚಿನ ಗಮನ ಹರಿಸಬೇಕಾಗಿದ್ದು ಸಮಾಜದ ಅರ್ಹ ಬಡ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಳ್ಳಲು ತಾನು ಸಿದ್ದನಿದ್ದೇನೆ ಎಂದರು.

mumbai_kulal_sanga_8 mumbai_kulal_sanga_5 mumbai_kulal_sanga_6 mumbai_kulal_sanga_7

ಕುಲಾಲ ಸಂಘದ ಉಪಾಧ್ಯಕ್ಷ ದೇವದಾಸ ಕುಲಾಲ್, ಪ್ರಧಾನ ಕಾರ್ಯದರ್ಶಿ ಡಿ. ಐ. ಮೂಲ್ಯ, ಕೋಶಾಧಿಕಾರಿ ಜಯ ಅಂಚನ್, ಡಾ. ಹರೀಶ್ ಬಿ. ಸಾಲ್ಯಾನ್, ಡಾ. ಸುಚಿತ್ರ ಎಸ್. ಸಾಲ್ಯಾನ್, ಡಾ. ಶ್ರೀದೇವಿ ಎಸ್. ಮೂಲ್ಯ, ಶಾಂಭವಿ ಮೂಲ್ಯ, ಐತು ಮೂಲ್ಯ, ಸ್ಥಳೀಯ ಸಮಿತಿಯ ಕಾರ್ಯಧ್ಯಕ್ಷ ಡಾ. ನಿಕೇಶ್ ಮೂಲ್ಯ, ಸ್ಥಳೀಯ ಸಮಿತಿಯ ಉಪಕಾರ್ಯಾಧ್ಯಕ್ಷ ರಘು ಮೂಲ್ಯ, ಅರುಣ್ ಡಿ. ಬಂಗೇರ, ಸತೀಶ್ ಬಂಗೇರ, ಪ್ರೇಮಲತಾ ಮೂಲ್ಯ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಡಾ. ನಿಕೇಶ್ ಮೂಲ್ಯ, ರತ್ನಾ ಕುಲಾಲ್, ಅರುಣ್ ಬಂಗೇರ, ವಿಜಯಾ ಮೂಲ್ಯ, ಹರೀಶ್ ಬಂಗೇರ ಅವರು ಅತಿಥಿಗಳನ್ನು ಪರಿಚಯಿಸಿದರು. ರಘು ಮೂಲ್ಯ, ಕಾರ್ಯಕ್ರಮವನ್ನು ನಿರೂಪಿಸಿದರು. ಸ್ಥಳೀಯ ಸಮಿತಿಯ ಸದಸ್ಯರಿಂದ ಸಂಗೀತ ಹಾಗೂ ನೃರ್ತ್ಯ ಕಾರ್ಯಕ್ರಮ ಜರಗಿತು.

Write A Comment