ಕನ್ನಡ ವಾರ್ತೆಗಳು

ತುಮಕೂರು ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್ ಘಟಕವನ್ನು ನಿರ್ಮಾಣಕ್ಕೆ ಅಧಿಕೃತ ಚಾಲನೆ.

Pinterest LinkedIn Tumblr

HAL_Helicopter_gubbi_land

ತುಮಕೂರು, ಡಿ.1 : ಗುಬ್ಬಿ ತಾಲೂಕಿನ ಬಿದರೆಹಳ್ಳ ಕಾವಲ್‌ನಲ್ಲಿ ಎಚ್‌ಎಎಲ್ ಹೆಲಿಕಾಪ್ಟರ್‌ ಘಟಕವನ್ನು ನಿರ್ಮಾಣ ಮಾಡುವ ಕಾರ್ಯಕ್ಕೆ ಅಧಿಕೃತವಾಗಿ ಚಾಲನೆ ಸಿಕ್ಕಿದೆ. 610 ಎಕರೆ ಸರ್ಕಾರಿ ಭೂಮಿಯನ್ನು ಜಿಲ್ಲಾ ಉಸ್ತುವಾರಿ ಸಚಿವ ಟಿ.ಬಿ.ಜಯಚಂದ್ರ ಅವರು ಎಚ್‌ಎಎಲ್‌ಗೆ ನೀಡಿದ್ದಾರೆ. ಗುಬ್ಬಿ ತಾಲ್ಲೂಕು ನಿಟ್ಟೂರು ಸಮೀಪದ ಬಿದರೆಹಳ್ಳ ಕಾವಲ್‌ನಲ್ಲಿನ 610 ಎಕರೆ ಪ್ರದೇಶದಲ್ಲಿ ಮುಂದಿನ ಮೂರೂವರೆ ವರ್ಷದಲ್ಲಿ ಹಿಂದೂಸ್ತಾನ್‌ ಏರೋನಾಟಿಕಲ್‌ ಲಿಮಿಟೆಡ್‌ (ಎಚ್ಎಎಲ್‌) ಹೆಲೆಕಾಪ್ಟರ್ ಘಟಕವನ್ನು ಆರಂಭಿಸಲಿದೆ. ಸರ್ಕಾರಿ ಭೂಮಿಯನ್ನು ನೀಡಿರುವ ಪತ್ರವನ್ನು ಸಚಿವ ಟಿ.ಬಿ.ಜಯಚಂದ್ರ ಅವರು ಎಚ್‌ಎಎಲ್ ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ವೇಲು ಮುರುಗನ್‌ ಅವರಿಗೆ ಹಸ್ತಾಂತರಿಸಿದ್ದಾರೆ.

ಎಚ್‌ಎಎಲ್ ಕರ್ನಾಟಕ ಸರ್ಕಾರದೊಂದಿಗೆ ಮಾಡಿಕೊಂಡ ಒಪ್ಪಂದದಂತೆ ಕಂಪೆನಿ ಬೀದರೆಹಳ್ಳ ಕಾವಲ್‌ನಲ್ಲಿ 4 ಸಾವಿರ ಕೋಟಿ ಬಂಡವಾಳ ಹೂಡಿಕೆ ಮಾಡಲಿದೆ. ವಾರ್ಷಿಕ 2 ಸಾವಿರ ಕೋಟಿ ವಹಿವಾಟು ನಡೆಸಲಿದ್ದು, 3ರಿಂದ 4 ಸಾವಿರ ನೇರ ಉದ್ಯೋಗ ಸೃಷ್ಟಿಯಾಗಲಿದೆ. ಹೇಮಾವತಿಯಿಂದ ಕಂಪೆನಿಗೆ ಬೇಕಾದ ನೀರಿನ ವ್ಯವಸ್ಥೆ ಕಲ್ಪಿಸಲಾಗುತ್ತದೆ ಮತ್ತು ಮೂರು ಹೈಟೆನ್ಷನ್‌ ತಂತಿಗಳ ಮೂಲಕ ಶೀಘ್ರದಲ್ಲಿಯೇ ವಿದ್ಯುತ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ. ವಿದ್ಯುತ್ ವ್ಯವಸ್ಥೆ ಕಲ್ಪಿಸಿದ ತಕ್ಷಣ ಎಚ್‌ಎಎಲ್ ಕಾಮಗಾರಿಯನ್ನು ಆರಂಭಿಸಲಿದೆ. ಘಟಕದಲ್ಲಿ ಏನು ತಯಾರಿಸುತ್ತಾರೆ : ಎಚ್‌ಎಎಲ್‌ ಈ ಘಟಕದಲ್ಲಿ ಭೂಸೇನೆ, ವಾಯುಸೇನೆ ಬಳಸುವ 5800 ಕೆಜಿಯ ಎಎಚ್‌ಎಲ್‌ ದ್ರುವ್‌, 3 ಟನ್‌ ತೂಕದ ಎಲ್‌ಯುಎಚ್‌ ಹೆಲಿಕಾಪ್ಟರ್‌ಗಳನ್ನು ತಯಾರಿಸಲಿದೆ. ಕೆಲವು ವರ್ಷಗಳ ಬಳಿಕ 10ರಿಂದ 12 ಟನ್‌ ತೂಕದ ಹೆಲಿಕಾಪ್ಟರ್‌ ತಯಾರಿಸುವ ಚಿಂತ­ನೆಯೂ ಇದೆ. ಹೆಲಿಕಾಪ್ಟರ್‌ ದುರಸ್ತಿ ಘಟಕವನ್ನು ಕೂಡ ಇಲ್ಲಿ ತೆರೆಯಲಾಗುತ್ತದೆ.

Write A Comment