ಕನ್ನಡ ವಾರ್ತೆಗಳು

ಅತ್ಯಾಚಾರ ಅರೋಪ : ಕಿರುತೆರೆ ನಟ ಅಹವಾನ್ ಕುಮಾರ್‌ ಬಂಧನ

Pinterest LinkedIn Tumblr

ahaban_kumar_rape_case

ಮುಂಬಯಿ.ನ.27: ಓಶಿವಾರಾ ಪೊಲೀಸರು ಕಿರುತೆರೆ ನಟ ಅಹವಾನ್ ಕುಮಾರ್ ಅವರ ಸ್ನೇಹಿತೆ ನೀಡಿದ ರೇಪ್ ದೂರಿನ ಆಧಾರದ ಮೇಲೆ ಅಹವಾನ್ ಕುಮಾರ್‌ನನ್ನು ಬಂಧಿಸಿದ್ದಾರೆ. ಅಹವಾನ್ ಕುಮಾರ್ ಗೆಳತಿ ಕೂಡ ಕಿರುತೆರೆಯ ನಟಿಯಾಗಿದ್ದು, ತಾನು ಗರ್ಭಿಣಿಯಾದ ಮೇಲೆ ಗೆಳೆಯ ವಿವಾಹವಾಗಲು ನಿರಾಕರಿಸಿದ್ದಾನೆ ಎಂದು ಕಳೆದ ವರ್ಷ ಆರೋಪಿಸಿದ್ದಳು ಕಿರುತೆರೆ ನಟ ಅಹವಾನ್ ಕುಮಾರ್‌ನನ್ನು ಓಶಿವಾರಾ ಪೊಲೀಸರು ಬಂಧಿಸಿದರು.

ನಟಿ ಓಶಿವಾರಾ ಪೊಲೀಸ್ ಠಾಣೆಯಲ್ಲಿ ಎರಡು ಬಾರಿ ದೂರು ನೀಡಿದ್ದಳು. ಆದರೆ ಪೊಲೀಸರು ಎಫ್‌ಐಆರ್ ದಾಖಲು ಮಾಡದಿದ್ದರಿಂದ ನಟಿ ಪೊಲೀಸ್ ಆಯುಕ್ತ ರಾಕೇಶ್ ಮಾರಿಯ ಭೇಟಿ ಮಾಡಿದ್ದಳು.

ಕಳೆದ 2012ರ ಫೆ.123ರಂದು ಅಹವಾನ್ ಕುಮಾರ್ ಗೆಳತಿಯನ್ನು ಅಂಧೇರಿಯ ಸಂಗೀತ ನರ್ಸಿಂಗ್ ಹೋಮ್‌ನಲ್ಲಿ ಗರ್ಭಪಾತ ಮಾಡಿಸಿದ್ದ. ಅಹವಾನ್ ತನ್ನ ಹೆಸರನ್ನು ಪತಿ ಎಂದು ಆಸ್ಪತ್ರೆ ದಾಖಲೆಯಲ್ಲಿ ನೋಂದಾಯಿಸಿದ್ದನು.

ನಂತರ ನಟಿ ಅವಳನ್ನು ಮದುವೆಯಾಗುವಂತೆ ಒತ್ತಾಯಿಸಿದರೂ ಅಹವಾನ್ ನಿರಾಕರಿಸಿದ್ದ. ಅಂತಿಮವಾಗಿ ನಟಿ ಅವನ ವಿರುದ್ದ ಕಾನೂನು ಕ್ರಮಕ್ಕೆ ಮುಂದಾಗಿದ್ದಾಳೆ.

Write A Comment