ಕನ್ನಡ ವಾರ್ತೆಗಳು

‘ಕೆ.ಎಸ್.ಆರ್.ಟಿ.ಸಿ’ ಪದಕ್ಕೆ ಎರಡು ರಾಜ್ಯಗಳ ನಡುವೆ ಪೈಪೊಟಿ.

Pinterest LinkedIn Tumblr

ksrtc_bus_logo

ಬೆಂಗಳೂರು, ನ.26: ಕರ್ನಾಟಕ ಹಾಗೂ ತೆಲಂಗಾಣ ಒಂದೇ ರಾಜ್ಯಪಕ್ಷಿ ಹೊಂದಿರುವುದರ ಬಗ್ಗೆ ನಿಮಗೆ ತಿಳಿದಿದೆ. ಅದೇ ರೀತಿ ಕೇರಳ ಹಾಗೂ ಕರ್ನಾಟಕದ ಸಾರಿಗೆ ಸಂಸ್ಥೆಗಳನ್ನು ‘ಕೆ.ಎಸ್.ಆರ್.ಟಿ.ಸಿ’ ಎಂದೇ ಕರೆಯಲಾಗುತ್ತದೆ. ಆದರೆ ‘ಕೆ.ಎಸ್.ಆರ್.ಟಿ.ಸಿ’ ಎಂಬ ಪದ ಯಾರ ಸ್ವತ್ತು ಎಂಬುದು ಈಗ ಚರ್ಚಾರ್ಹ ವಿಷಯವಾಗಿದೆ. ಮೊದಲೇ ಆರ್ಥಿಕ ದುಃಸ್ಥಿತಿಯಲ್ಲಿರುವ ಕೇರಳದ ರಾಜ್ಯ ಸಾರಿಗೆ ಸಂಸ್ಥೆ ಈಗ ‘ಕೆ.ಎಸ್.ಆರ್.ಟಿ.ಸಿ’ ಪದ ಸಂಪತ್ತನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.

ಕೆ.ಎಸ್.ಆರ್.ಟಿ.ಸಿ ಎಂಬ ಟ್ರೇಡ್ ಮಾರ್ಕ್ ನಮ್ಮ ಸ್ವತ್ತು. ಗಂಡಬೇರುಂಢ ಲಾಂಛನದೊಂದಿಗೆ ಕೆ.ಎಸ್.ಆರ್.ಟಿ.ಸಿ ಪದ ಬಳಕೆ ಮಾಡುತ್ತಾ ಬಂದಿದ್ದೇವೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ವಾದಿಸಿದೆ. ಈ ಬಗ್ಗೆ ಕೈಗಾರಿಕಾ ಸಚಿವಾಲಯದ ಅಡಿ ಬರುವ ಟ್ರೇಡ್ ಮಾರ್ಕ್ಸ್ ನೋಂದಣಿ ವಿಭಾಗಕ್ಕೆ ಕರ್ನಾಟಕ ಸಾರಿಗೆ ಸಂಸ್ಥೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿಯನ್ನು ಟ್ರೇಡ್ ಮಾರ್ಕ್ಸ್ ನೋಂದಣಿ ಪುರಸ್ಕರಿಸಿದೆ.

Write A Comment