ಮಂಗಳೂರು,ನ.26: ಬೆಳಂಬೆಳಿಗ್ಗೆ ಬಸ್ಸು ಮತ್ತು ಲಾರಿಗಳ ನಡುವೆ ನಡೆದ ಭೀಕರ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿ ಸುಮಾರು 15 ಕ್ಕೂ ಹೆಚ್ಚುಮಂದಿಗೆ ಗಾಯಗಳಾದ ಘಟನೆ ಬುಧವಾರ ನಗರದ ನಂತೂರು ವೃತ್ತದ ಬಳಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರನ್ನು ಮೂಡಬಿದ್ರೇ ನಿವಾಸಿ ಕೆಪಿಟಿ ವಿಧ್ಯಾರ್ಥಿ ಉಮಾನಾಥ (21),ಮತ್ತು ಗುರುಪುರ ನಿವಾಸಿ ಬಸ್ಸಿನ ಕ್ಲೀನರ್ ಗಣೇಶ್ ಎಂದು ಗುರುತಿಸಲಾಗಿದೆ.
ನಾರವಿಯಿಂದ ಮಂಗಳೂರಿನ ಕಡೆಗೆ ಸಂಚರಿಸುತ್ತಿದ್ದ ಖಾಸಗಿ ಬಸ್ಸು `ನಿಶ್ಮಿತಾ’ ಟ್ರಾವೆಲ್ಸ್‌ನ ಚಾಲಕ ಅತೀವೇಗದಿಂದ ಬಸ್ ಚಾಲಾಯಿಸಿಕೊಂಡು ಬಂದು ಮೀನಿನ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ಸು ಮಗುಚಿಬಿದಿದ್ದೆ.
ಈ ಅಪಘಾತದಲ್ಲಿ ಮೂಡಬಿದ್ರೇ ನಿವಾಸಿಯಾದ ಕೆಪಿಟಿ ವಿಧ್ಯಾರ್ಥಿ ಉಮಾನಾಥ (21),ಮತ್ತು ಗುರುಪುರ ನಿವಾಸಿ ಬಸ್ಸಿನ ಕ್ಲೀನರ್ ಗಣೇಶ್ ಎಂಬವರಿಗೆ ಎದೆ ಮತ್ತು ಮುಖಗಳಿಗೆ ತ್ರೀವ್ರವಾದ ಗಾಯಗಾಳಾಗಿದ್ದು, ತಕ್ಷಣ ಅವರನ್ನು ಸಮೀಪದ ಖಾಸಾಗಿ ಆಸ್ಪತ್ರೆಗೆ ದಾಖಲುಮಾಡಲಾಯಿತು. ಆದರೆ ಇಬ್ಬರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.ಇನ್ನುಳಿದ ಗಾಯಾಳುಗಳನ್ನು (15 ಮಂದಿ) ನಗರದ ಎಜೆ ಆಸ್ಪತ್ರೆಯ ತ್ರೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆಗೊಳಪಡಿಸಲಾಗಿದೆ.
ಅಪಘಾತ ತೀವ್ರತೆಗೆ ಎರಡೂ ವಾಹನಗಳು ಮಗುಚಿ ಬಿದ್ದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಬಸ್ಸನ್ನು ಕ್ರೇನ್ ಸಹಾಯದಿಂದ ಮೇಲೆತ್ತಿ, ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿದ್ದಾರೆ. ಬಸ್ ಚಾಲಕನ ಅತೀವೇಗದ ಚಾಲನೆ ಹಾಗೂ ನಿರ್ಲ್ಯಕ್ಷವೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಕದ್ರಿ ಠಾಣೆಯಲ್ಲಿ ಪ್ರಕರಣ ದಾಖಾಲಾಗಿದೆ.
ನಂತೂರು ಸರ್ಕ್‌ಲ್‌ನಲ್ಲಿ ಪದೇ-ಪದೇ ಅಪಘಾತಗಳು ಸಂಭವಿಸುತ್ತಿದ್ದರೂ ಸಂಚಾರಿ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಹಿಂದೆ ಇದೇ ಸರ್ಕಲ್‌ನಲ್ಲಿ ಕೋಕಾಕೋಲಾ ಲಾರಿ, ಮತ್ತು ಕಟ್ಟಡ ನಿರ್ಮಾಣಕ್ಕೆ ಕಬ್ಬಿಣ ಸಾಗಿಸುತ್ತಿದ್ದ ಲಾರಿ ಉರುಳಿ ಬಿದ್ದಿತ್ತು. ಜೂನ್ ತಿಂಗಳಿನಲ್ಲಿ ಇದೇ ವೃತ್ತದಲ್ಲಿ ಎರಡು ಅಪಘಾತ ನಡೆದಿತ್ತು.