ಕನ್ನಡ ವಾರ್ತೆಗಳು

ಪಾದರಕ್ಷೆಯಲ್ಲಿ ಚಿನ್ನ ಸ್ಮಗಲಿಂಗ್ : 12.61 ಲಕ್ಷ ರೂ. ವೌಲ್ಯದ ಚಿನ್ನ ವಶ

Pinterest LinkedIn Tumblr

Gold_sized_airport

ಮಂಗಳೂರು, ನ.26: ಮಂಗಳೂರು ಕಸ್ಟಮ್ಸ್ ವಿಭಾಗದ ಅಧಿಕಾರಿಗಳು ಮಂಗಳವಾರ ನಡೆಸಿದ ಕಾರ್ಯಾಚರಣೆಯಲ್ಲಿ ಅಕ್ರಮವಾಗಿ ಚಿನ್ನದ ಸಾಗಿಸುತ್ತಿದ್ದ ಪ್ರಯಾಣಿಕನೋರ್ವನನ್ನು ಬಂಧಿಸಿ ಆತನಿಂದ 12.61 ಲಕ್ಷ ರೂ. ವೌಲ್ಯದ 474.600 ಗ್ರಾಂ ಚಿನ್ನದ ಬಾರ್ ಹಾಗೂ ಬಿಲ್ಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ದುಬೈಯಿಂದ ಹೊರಟು ಮಂಗಳವಾರ ಬೆಳಗ್ಗೆ 8:40ಕ್ಕೆ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಜೆಟ್ ಏರ್‌ವೇಸ್ ವಿಮಾನದಲ್ಲಿ ಬಂದ ಕಾಸರಗೋಡು ಚಂದ್ರಗಿರಿಯ ಹಂಝ ಅಮೀರ್ (26) ಎಂಬ ಪ್ರಯಾಣಿಕನ ಪಾದರಕ್ಷೆಯಲ್ಲಿ ಚಿನ್ನದ ಬಾರ್ ಹಾಗೂ ಬಿಲ್ಲೆಗಳು ದೊರೆತಿವೆ ಎಂದು ಕಸ್ಟಮ್ಸ್ ಅಧಿಕಾರಿಗಳು ತಿಳಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Write A Comment