ಕನ್ನಡ ವಾರ್ತೆಗಳು

ಮಂಗಳೂರು : ಗೃಹ ಸಚಿವರಿಂದ ಪೊಲೀಸ್ ಸಮುದಾಯ ಭವನ ಹಾಗೂ ಪೊಲೀಸ್ ಕ್ಯಾಂಟೀನ್ ಉದ್ಘಾಟನೆ

Pinterest LinkedIn Tumblr

jorge_inua_photo_1

ಮಂಗಳೂರು :  ಮಂಗಳೂರಿನಲ್ಲಿ ನೂತನವಾಗಿ ನಿರ್ಮಿಸಲಾದ ಪೊಲೀಸ್ ಸಮುದಾಯ ಭವನ ಹಾಗೂ ಪೊಲೀಸ್ ಕ್ಯಾಂಟೀನ್ ಅನ್ನು ಮಂಗಳವಾರ ರಾಜ್ಯ ಗೃಹಸಚಿವ ಕೆ.ಜೆ.ಜಾರ್ಜ್ ಅವರು ಉದ್ಘಾಟಿಸಿ  ಕರ್ನಾಟಕ ಪೊಲೀಸ್ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ತೀವ್ರವಾಗಿ ಬಾಧಿಸುತ್ತಿರುವ ಹಿನ್ನೆಲೆಯಲ್ಲಿ 8,500 ಪೊಲೀಸ್ ಸಿಬ್ಬಂದಿ ನೇಮಕಕ್ಕೆ ರಾಜ್ಯ ಸರ್ಕಾರ ಮುಂದಾಗಿದೆ   ಎಂದು  ಮಾಹಿತಿ ನೀಡಿದ್ದಾರೆ. 

jorge_inua_photo_2a jorge_inua_photo_5aa geor_ge_inau_3a geor_ge_inau_4a

jorge_inua_photo_6

ಪ್ರತಿ ವರ್ಷ ಪೊಲೀಸ್ ಇಲಾಖೆಯಲ್ಲಿ ಸುಮಾರು 4,500 ಸಿಬ್ಬಂದಿ ನಿವೃತ್ತರಾಗುತ್ತಾರೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಪೊಲೀಸ್ ಇಲಾಖೆಯಲ್ಲಿ ಯಾವುದೇ ನೇಮಕಾತಿ ನಡೆಯದ ಕಾರಣ 22,500ಕ್ಕೂ ಹೆಚ್ಚು ಮಂಜೂರಾದ ಹುದ್ದೆಗಳು ರಾಜ್ಯದಲ್ಲಿ ಖಾಲಿ ಉಳಿದಿವೆ. ಆದ್ದರಿಂದ ಇಲಾಖೆಯಲ್ಲಿ ಖಾಲಿ ಉಳಿದಿರುವ ಸ್ಥಾನಗಳ ನೇಮಕಾತಿಗೆ ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಜಾರ್ಜ್ ಹೇಳಿದ್ದಾರೆ

ತಾತ್ಕಾಲಿಕ ಸೌಲಭ್ಯ: ರಾಜ್ಯದಲ್ಲಿ ಪ್ರತಿ ವರ್ಷ 4,500 ಪೊಲೀಸ್ ಸಿಬ್ಬಂದಿಗೆ ಮಾತ್ರ ತರಬೇತಿ ನೀಡುವಷ್ಟು ಸೌಲಭ್ಯವಿದೆ. ಈ ವರ್ಷ ನೇಮಕಗೊಳ್ಳುವ 8,500 ಸಿಬ್ಬಂದಿಯಲ್ಲಿ 4,000 ಸಿಬ್ಬಂದಿಗೆ ತರಬೇತಿಗಾಗಿ ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ ಎಂದು ಗೃಹ ಸಚಿವರು ತಿಳಿಸಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ, ಶಾಸಕ ಜೆ.ಆರ್.ಲೋಬೋ, ಪೊಲೀಸ್ ಕಮಿಷನರ್ ಹಿತೇಂದ್ರ, ಶಾಸಕ ಮೊಯ್ದಿನ್ ಬಾವಾ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Write A Comment