ಕನ್ನಡ ವಾರ್ತೆಗಳು

ಟಿವಿ 9 ನಿರ್ಬಂಧ : ಸಚಿವ ಡಿಕೆಶಿ ವಿರುದ್ಧ ಪೂಜಾರಿ ಅಕ್ರೋಷ

Pinterest LinkedIn Tumblr

Poojary_Press_Meet

ಮಂಗಳೂರು : ಸರ್ಕಾರದ ವಿರುದ್ಧ ವರದಿಗಳನ್ನು ಪ್ರಸಾರ ಮಾಡುತ್ತಿದೆ ಎಂದು ಆರೋಪಿಸಿ ಟಿವಿ9 ಪ್ರಸಾರ ಮಾಡದಂತೆ ಕೇಬಲ್ ಆಪರೇಟರ್‌ಗಳ ಮೇಲೆ ಒತ್ತಡ ಹೇರಿದ ಸಚಿವ ಡಿ ಕೆ ಶಿವಕುಮಾರ್ ಅವರ ಕಾರ್ಯವೈಕರಿ ಬಗ್ಗೆ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅಸಮಾದಾನ ಹಾಗೂ ಆಕ್ರೋಷ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನಗರದ ಪತ್ರಿಕಾಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಿ.ಕೆ ಶಿ ಅವರು ಪ್ರಜಾಪ್ರಭುತ್ವದ ಪ್ರಮುಖ ಅಂಗವಾದ ಪತ್ರಿಕಾರಂಗದ ಕತ್ತು ಹಿಸಕುವ ಕಾರ್ಯ ಮಾಡುತ್ತಿದ್ದಾರೆ. ಇದನ್ನು ನಾನು ಯಾವತ್ತೂ ಸಮರ್ಥನೆ ಮಾಡುವುದಿಲ್ಲ. ಈ ರೀತಿಯ ನಿಮ್ಮ ವರ್ತನೆಯಿಂದ `ಸರಕಾರದ ಮಾನ ಹರಾಜು ಹಾಕುವ ಕೆಲಸ ಮಾಡ್ಬೇಡಿ’ ಇಂತಹ ದುರ್ವತನೆಯಿಂದಾಗಿ ಸಾರ್ವಜನಿಕ ಜೀವನದಲ್ಲಿ ನಿಮ್ಮ ಗೌರವಕ್ಕೆ ಧಕ್ಕೆಯುಂಟಾಗುತ್ತದೆ ಎಂದು ಡಿಕೆಶಿಯವರಿಗೆ ಕಿವಿಮಾತು ಹೇಳಿದರು.

ಮನುಷ್ಯ ತಪ್ಪು ಮಾಡುವುದು ಸಹಜ. ಆದರೆ ಆ ತಪ್ಪನ್ನು ತಿದ್ದಿಕೊಂಡು ಕ್ಷಮೆ ಕೇಳುವುದು ದೊಡ್ಡತನ.ಒಂದು ಕಾಲದಲ್ಲಿ ತುರ್ತು ಪರಿಸ್ಥಿತಿಯನ್ನು ಹೇರಿದ ಪ್ರಧಾನಿ ಇಂದಿರಾಗಾಂಧಿಯವರು ದೇಶದ ಜನರಲ್ಲಿ ಕ್ಷಮೆಯಾಚಿಸಿದ್ದರು ಎಂಬುದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದು. ನೀವು ತಪ್ಪು ಮಾಡಿದ್ದೀರಿ. ಅದಕ್ಕಾಗಿ ಕ್ಷಮೆ ಕೇಳಿ. ಅದು ಬಿಟ್ಟು ಸರಕಾರದ ಮಾನವನ್ನು ಬೀದಿಯಲ್ಲಿ ಹರಾಜು ಮಾಡಬೇಡಿ ಎಂದು ಡಿಕೆಶಿ ಗೆ ಪೂಜಾರಿ ಸಲಹೆ ನೀಡಿದರು.

ತಕ್ಷಣ ಮುಖ್ಯಮಂತ್ರಿ ಸಿದ್ಧರಾಮಯ್ಯನವರು ಮಧ್ಯ ಪ್ರವೇಶಿಸಿ ಈ ಸಮಸೈಗಳನ್ನು ಇತ್ಯಾರ್ಥಗೊಳಿಸಬೇಕು ಎಂದು ಪೂಜಾರಿ ಅಗ್ರಹಿಸಿದರು.

Write A Comment