ಅಂತರಾಷ್ಟ್ರೀಯ

ಆಸ್ಟ್ರೇಲಿಯಾದ ಕ್ರಿಕೆಟೀಗ ಫಿಲ್ ಹ್ಯೂಸ್ ದೇಹ ಸ್ಥಿತಿ ಗಂಭೀರ.

Pinterest LinkedIn Tumblr

phil_hughes_hospitalised

ಸಿಡ್ನಿ, ನ.25: ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಫಿಲ್ ಹ್ಯೂಸ್ ಅವರು ಮಾರಣಾಂತಿಕ ದಾಳಿ ತುತ್ತಾಗಿ ಆಸ್ಪತ್ರೆ ಸೇರಿದ್ದಾರೆ. ಬೌನ್ಸರ್ ಆಡಲು ಹೋದ ಹ್ಯೂಸ್ ಅವರ ತಲೆಗೆ ಭಾರಿ ಪೆಟ್ಟು ಬಿದ್ದಿದ್ದು ಕ್ರೀಸ್ ನಲ್ಲೇ ಕುಸಿದಿದ್ದಾರೆ. ಷೆಫೀಲ್ಡ್ ಶೀಲ್ಡ್ ಪಂದ್ಯವೊಂದರಲ್ಲಿ ಮಂಗಳವಾರ ಬೆಳಗ್ಗೆ ಈ ಘಟನೆ ನಡೆದಿದೆ. ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನ್ಯೂ ಸೌಥ್ ವೇಲ್ಸ್ ಹಾಗೂ ದಕ್ಷಿಣ ಆಸ್ಟ್ರೇಲಿಯಾ ನಡುವೆ ನಡೆಯುತ್ತಿರುವ ನಾಲ್ಕು ದಿನಗಳ ಪಂದ್ಯದಲ್ಲಿ ಈ ದುರ್ಘಟನೆ ನಡೆದಿದೆ.

ಆಸ್ಟ್ರೇಲಿಯನ್ ಮಾಧ್ಯಮಗಳ ವರದಿ ಪ್ರಕಾರ ಫಿಲ್ ಹ್ಯೂಸ್ ದೇಹಸ್ಥಿತಿ ಗಂಭೀರವಾಗಿದ್ದು, ಜೀವನ್ಮರಣ ಹೋರಾಟ ನಡೆಸಿದ್ದಾರೆ ಎಂದು ತಿಳಿದು ಬಂದಿದೆ

Write A Comment