ಕನ್ನಡ ವಾರ್ತೆಗಳು

ಬಾಲಿವುಡ್ ಗೆ ಹೊಸ ಅತಿಥಿ ನಿರೀಕ್ಷೆಯಲ್ಲಿ : ಜೆನಿಲಿಯಾ ಡಿ’ಸೋಜಾ

Pinterest LinkedIn Tumblr

Genelia_deshmukh_photo1

ಮುಂಬೈ,ನ.25: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಜೊತೆ ‘ಸತ್ಯ ಇನ್ ಲವ್’ ಚಿತ್ರದಲ್ಲಿ ಅಭಿನಯಿಸಿದ್ದ ತಾರೆ ಜೆನಿಲಿಯಾ ಡಿಸೋಜಾ ಈಗ ತುಂಬು ಗರ್ಭಿಣಿ. ಇನ್ನೇನು ಕೆಲ ದಿನಗಳಲ್ಲಿ ಆಕೆಯ ಮನೆಗೆ ಹೊಸ ಅತಿಥಿ ಆಗಮನವಾಗಲಿದೆ.

Genelia_deshmukh_photo

ಇತ್ತೀಚೆಗೆ ನಡೆದ ಸಲ್ಮಾನ್ ಖಾನ್ ತಂಗಿ ಅರ್ಪಿತಾ ಖಾನ್ ಅವರ ಮದುವೆ ನಿಶ್ಚಿತಾರ್ಥಕ್ಕೆ ಜೆನಿಲಿಯಾ ಆಗಮಿಸಿದ್ದರು. ತನ್ನ ಪತಿ ರಿತೇಶ್ ದೇಶ್ ಮುಖ್ ರೊಂದಿಗೆ ಬಂದಿದ್ದ ಜೆನಿಲಿಯಾ ಮೇಲೆ ಎಲ್ಲರ ಕಣ್ಣು ಬಿತ್ತು. ಮಾಧ್ಯಮಗಳಂತೂ ಆಕೆಯ ಫೋಟೋಗಳನ್ನು ಸೆರೆಹಿಡಿಯುವಲ್ಲಿ ಬಿಜಿಯಾದವು. ತಾಯ್ತನದ ಆನಂದವನ್ನು ಸವಿಯುತ್ತಿರುವ ಜೆನಿಲಿಯಾ ಮದುವೆ ಮನೆಯಲ್ಲಿ ಎಲ್ಲರೊಂದಿಗೂ ಕಲೆತುಬೆರೆತು ಖುಷಿಯಾಗಿದ್ದರು. ಜೆನಿಲಿಯಾ ಪತಿರಾಯ ರಿತೇಶ್ ದೇಶ್ ಮುಖ್ ಅವರಂತೂ ತಮ್ಮ ಪತ್ನಿಯನ್ನು ಒಂದು ಕ್ಷಣವೂ ಬಿಡದಂತೆ ಜಾಗ್ರತೆಯಾಗಿ ನೋಡಿಕೊಳ್ಳುತ್ತಿದ್ದರು. ತಂದೆತಾಯಿಯಾಗುತ್ತಿದ್ದೇವೆ ಎಂದ ಖುಷಿ ಇಬ್ಬರ ಮುಖದಲ್ಲೂ ಲಾಸ್ಯವಾಡುತ್ತಿತ್ತು.

Write A Comment