ಕನ್ನಡ ವಾರ್ತೆಗಳು

ಕಾರ್ಮಿಕರ ಹಕ್ಕು, ರಕ್ಷಣೆ, ಹಿತಾಸಕ್ತಿ ವಿರೋಧಿಸುವವರ ವಿರುದ್ಧ ಸಿಡಿದೇಳಬೇಕಾಗಿದೆ ; ಎನ್. ವೀರಸ್ವಾಮಿ

Pinterest LinkedIn Tumblr

ಕುಂದಾಪುರ: ಕಾರ್ಮಿಕ ಕಲ್ಯಾಣ ನಿಧಿಯನ್ನು ದುರ್ಬಳಕೆ ಮಾಡುವ ಸರ್ಕಾರ ಹಾಗೂ ಇಲಾಖೆಗಳ ವಿರುದ್ಧ, ಕಾರ್ಮಿಕರ ಹಕ್ಕುಗಳು, ರಕ್ಷಣೆ ಮತ್ತು ಹಿತಾಸಕ್ತಿಯ ವಿರುದ್ಧ ಕಾರ್ಯಾಚರಣೆ ನಡೆಸುವವರ ವಿರುದ್ಧ ಕಾರ್ಮಿಕ ಸಂಘಟನೆಗಳು ಸಿಡಿದೇಳಬೇಕಾಗಿದೆ ಎಂದು ಕಟ್ಟಡ ಮತ್ತು ಇತರ ಕಾರ್ಮಿಕರ ಸಂಘಟನೆಯ ರಾಜ್ಯ ಅಧ್ಯಕ್ಷ ಎನ್‌ವೀರಸ್ವಾಮಿ ಹೇಳಿದರು.

ನಗರದ ಎಲ್‌ಐಸಿ ರಸ್ತೆಯಲ್ಲಿರುವ ಕಾರ್ಮಿಕರ ಭವನದಲ್ಲಿ ಭಾನುವಾರ ಆಯೋಜಿಸಲಾಗಿದ್ದ ಕುಂದಾಪುರ ತಾಲೂಕು ಕಟ್ಟಡ ಮತ್ತು ಇತರೆ ಕಾರ್ಮಿಕರ ಸಂಘದ ಎಂಟನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.

CITU_Samavesha-Kundapura

ಕಾರ್ಮಿಕ ಸಂಘಟನೆ ಸಿ‌ಐಟಿಯು ಕಳೆದ ಹಲವು ದಶಕಗಳಿಮದ ನಡೆಸಿದ ಹೋರಾಟದ ಫಲವಾಗಿ ಕಾರ್ಮಿಕ ಕಲ್ಯಾಣ ನಿಧಿಯನ್ನು ಆರಂಭಿಸಲಾಗಿದೆಯೇ ಹೊರತು ಯಾವುದೇ ಸರ್ಕಾರ ಸ್ವಿಚ್ಚೆಯಿಂದ ಕಾರ್ಮಿಕರ ಕ್ಯಲಾಣಕ್ಕಾಗಿ ಇದನ್ನು ಆರಂಭಿಸಿಲ್ಲ ಎಂದು ಉಲ್ಲೇಖಿಸಿದ ಅವರು, ಇದರಿಂದಾಗಿಯೇ ಇತ್ತೀಚೆಗೆ ಕಲ್ಯಾಣ ಮಂಟಪ ನಿರ್ಮಾಣದ ನೆಪದಲ್ಲಿ ಕೋಟ್ಯಾಂತರ ರೂಪಾಯಿಗಳನ್ನು ಕಮಿಷನ್ ಆಸೆಗೋಸ್ಕರ ದುರ್ಬಳಕೆ ಮಾಡಲಾಗಿದೆ. ಕಾರ್ಮಿಕರಿಗೆ ಸಿಗಬೇಕಾದ ಸವಲತ್ತುಗಳನ್ನು ವಂಚಿಸಲಾಗುತ್ತದೆ ಎಂದು ಅವರು ಆರೋಪಿಸಿದರು.

ಇದೆಲ್ಲವನ್ನೂ ಗಮನದಲ್ಲಿರಿಸಿಕೊಂಡು ನವೆಂಬರ್ ೨೫ರಂದು ಉಡುಪಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿರುವ ಕಾರ್ಮಿಕ ಇಲಾಖೆಯ ಎದುರು ಅನಿರ್ಧಿಷ್ಟಾವಧಿ ಧರಣಿ ಕಾರ್ಯಕ್ರಮ ನಡೆಯಲಿದೆ ಎಂದವರು ಎಚ್ಚರಿಸಿದರು. ಅಲ್ಲದೇ ಮುಮದಿನ ದಿನಗಳಲ್ಲಿ ರಾಜ್ಯ ಹಾಗೂ ಕೇಂದ್ರ ಮಟ್ಟದಲ್ಲಿ ಎಲ್ಲಾ ಕಾರ್ಮಿಕ ಸಂಘಟನೆಗಳು ಒಟ್ಟುಗೂಡಿ ಹೋರಾಟ ನಡೆಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ ಎಂದು ಹೇಳಿದರು.

ಸಿ‌ಐಟಿಯು ಜಿಲ್ಲಾಧ್ಯಕ್ಷ ಕೆ. ಶಂಕರ್ ಮಾತನಾಡಿ, ಕಾರ್ಮಿಗರಿಗಿರುವ ಹಕ್ಕುಗಳು, ಅವರ ಬೇಡಿಕೆಗಳ ಬಗ್ಗೆ ಕಾರ್ಮಿಕರಿಗೆ ಅರಿವಿರಬೇಕು. ಇದಕ್ಕಾಗಿ ತಿಳುವಳಿಕೆ ಹೆಚ್ಚಿಸಿಕೊಳ್ಳಲು ತರಬೇತಿ ಪಡೆದುಕೊಲ್ಳಬೇಕಾಗಿದೆ. ಆ ಮೂಲಕ ತಮ್ಮ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಂಘಟನೆಯ ಮಾರ್ಗದರ್ಶನದಲ್ಲಿ ಸಾಧ್ಯ ಎಂದರು.

ಅಧ್ಯೆಕ್ತೆಯನ್ನು ಕಾರ್ಮಿಕ ಮುಖಂಡ ಯು. ದಾಸ್ ಭಂಡಾರಿ ವಹಿಸಿದ್ದರು. ಸುರೇಶ್ ಕಲ್ಲಾಗರ, ಜಗದೀಶ್ ಆಚಾರ್ ಹೆಮ್ಮಾಡಿ, ಶ್ರೀನಿವಾಸ ಪೂಜಾರಿ, ರಾಜೀವ ಪಡುಕೋಣೆ, ಸಂತೋಷ್ ಹೆಮ್ಮಾಡಿ, ಗಣೇಶ್ ತೊಂಡೆಮಕ್ಕಿ, ಗಣೇಶ್ ಮೊಗವೀರ, ಚಂದ್ರ ಅಂಪಾರ್, ಸುಧಾಕರ ಕುಂಭಾಶಿ, ಸತೀಶ್ ತೆಕ್ಕಟ್ಟೆ, ಸುರೇಶ್ ದೇವಲ್ಕುಂದ, ಜಿತೇಂದ್ರ ಕೊಣಿ, ಶ್ರೀಧರ ಉಪ್ಪುಂದ ಉಪಸ್ಥಿತರಿದ್ದರು.

Write A Comment