ಮಂಗಳೂರು, ನ.22: ಅಕ್ರಮ ಆಸ್ತಿ ಪತ್ತೆಯಾದಾಗ ಅದನ್ನು ಮುಟ್ಟು ಗೋಲು ಹಾಕುವ ಅಧಿಕಾರ ಲೋಕಾಯುಕ್ತಕ್ಕಿದ್ದು, ಈ ಅವಕಾಶವನ್ನು ಕಟ್ಟು ನಿಟ್ಟಾಗಿ ಅನುಷ್ಠಾನ ಗೊಳಿಸುವಂತೆ ಲೋಕಾಯುಕ್ತ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಲೋಕಾಯುಕ್ತ ನ್ಯಾ.ಮೂ. ವೈ.ಭಾಸ್ಕರ ರಾವ್ ಹೇಳಿದ್ದಾರೆ.
ದ.ಕ.ಜಿ.ಪಂ. ಸಭಾಂಗಣದಲ್ಲಿ ಶುಕ್ರವಾರ ಸಾರ್ವಜನಿಕರಿಂದ ಅಹ ವಾಲು ಸ್ವೀಕರಿಸಿದ ಬಳಿಕ ಪತ್ರಿಕಾ ಗೋಷ್ಠಿಯನ್ನು ಉದ್ದೇಶಿಸಿ ಮಾತನಾ ಡಿದ ಅವರು, ‘ಅಕ್ರಮ ಆಸ್ತಿ ಪತ್ತೆ ಆದಾಗ ದಂಡ ಪಾವತಿಸಿ ಆಸ್ತಿಯನ್ನು ತಮ್ಮಲ್ಲೇ ಇಟ್ಟುಕೊಳ್ಳುತ್ತಿದ್ದರು. ಆದರೆ ಸಿಆರ್‌ಪಿಸಿ ಕಲಂ 432 ಪ್ರಕಾರ ಆರೋಪ ಪಟ್ಟಿ ಸಲ್ಲಿಕೆ ವೇಳೆ ಆಸ್ತಿ ಅಕ್ರಮ ಎಂದು ಕಂಡು ಬಂದರೆ ಅದನ್ನು ಲೋಕಾಯುಕ್ತ ಪೊಲೀಸರು ಮುಟ್ಟುಗೋಲು ಹಾಕಿಕೊಳ್ಳಬಹುದು. ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸು ವಂತೆ ಸೂಚಿಸಲಾಗಿದೆ’ ಎಂದರು.
‘ಅಕ್ರಮ ಗಣಿ ಹಗರಣದ ತನಿಖೆ ಯನ್ನು ವಿಶೇಷ ನ್ಯಾಯಾಲಯದಲ್ಲಿ ನಡೆಸುವಂತೆ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿದೆ. ಆದರೆ ವಿಶೇಷ ಕೋರ್ಟ್ ಸ್ಥಾಪನೆಯಾಗುವವರೆಗೆ ಲೋಕಾಯುಕ್ತ ಕೋರ್ಟ್‌ನಲ್ಲೇ ಪ್ರಕರಣದ ವಿಚಾರಣೆ ನಡೆಸು ವಂತೆ ಹೈಕೋರ್ಟ್ ತಿಳಿಸಿದೆ’ ಎಂದ ನ್ಯಾ.ವೈ.ಭಾಸ್ಕರ ರಾವ್, ‘ಲೋಕಾಯುಕ್ತ ಪ್ರಕರಣದ ತನಿಖೆ ಬಗ್ಗೆ ವಿಶೇಷ ವಕೀಲರ ನೇಮಕಗೊಳಿಸಲಾಗುವುದು. ಜಿಲ್ಲಾ ಮಟ್ಟದಲ್ಲೂ ಲೋಕಾಯುಕ್ತ ಇಲಾಖೆಯಲ್ಲಿ ಖಾಲಿ ಹುದ್ದೆ ಭರ್ತಿ ಗೊಳಿಸಲಾಗುವುದು’ ಎಂದರು.
ಅಕ್ರಮ ಜಾಗ ಡಿನೋಟಿಫಿಕೇಶನ್ ಪ್ರಕರಣ ಹೈಕೋರ್ಟ್‌ನಲ್ಲಿದ್ದರೆ ಲೋಕಾ ಯುಕ್ತ ತನಿಖೆ ನಡೆಸಲು ಅಸಾಧ್ಯ. ಸಚಿವ ದಿನೇಶ್ ಗುಂಡೂ ರಾವ್ ಜಾಗ ಒತ್ತುವರಿ ಪ್ರಕರಣ ಲೋಕಾಯುಕ್ತದೆದುರು ಬಂದ ಕಾರಣ ಅವರಿಗೆ ನೋಟಿಸ್ ನೀಡಲಾಗಿದೆ. ಒತ್ತುವರಿ ಜಾಗದ ಬಗ್ಗೆ ತನಿಖೆ ನಡೆಸಲಾಗುವುದು ಎಂದು ನ್ಯಾ. ವೈ. ಭಾಸ್ಕರ ರಾವ್ ಹೇಳಿದರು.
ರಾಜ್ಯದಲ್ಲಿ ಒಟ್ಟು 4,566 ದೂರು :
ರಾಜ್ಯದಲ್ಲಿ 4,566 ದೂರುಗಳು ಲೋಕಾಯುಕ್ತಕ್ಕೆ ಬಂದಿದ್ದು, ಆ ಪೈಕಿ 2,269 ದೂರುಗಳನ್ನು ತಾನು ಅಧಿಕಾರ ಸ್ವೀಕರಿಸಿದಲ್ಲಿಂದ ಈವರೆಗೆ ಸ್ವೀಕರಿಸಿದ್ದೇನೆ. 6,123 ದೂರುಗಳನ್ನು ವಿಲೇವಾರಿ ಮಾಡಲಾಗಿದ್ದು, 712 ದೂರು ಇತ್ಯರ್ಥಕ್ಕೆ ಬಾಕಿ ಇವೆ. ಲೋಕಾಯುಕ್ತ ಪೊಲೀಸರು 167 ಕಾರ್ಯಾಚರಣೆ ನಡೆಸಿ 385 ಹಾಗೂ 269 ಇತರ ಕೇಸುಗಳನ್ನು ದಾಖಲಿಸಿದ್ದಾರೆ. 183.48 ಲಕ್ಷ ರೂ. ವೌಲ್ಯದ ಸ್ಥಿರಾಸ್ತಿ, 62.37 ಲಕ್ಷ ರೂ. ವೌಲ್ಯದ ಚರಾಸ್ಥಿ ಮುಟ್ಟುಗೋಲು ಹಾಕಲಾಗಿದೆ. 11.44 ಲಕ್ಷ ರೂ. ವೌಲ್ಯದ ಬೆಳ್ಳಿ, ಚಿನ್ನಾಭರಣ, 4.49 ಲಕ್ಷ ರೂ. ನಗದು ಸೇರಿದಂತೆ ಒಟ್ಟು 261.79 ಲಕ್ಷ ರೂ. ವೌಲ್ಯದ ಸೊತ್ತು ವಶಪಡಿಸಲಾಗಿದೆ ಎಂದು ನ್ಯಾ.ವೈ.ಭಾಸ್ಕರ ರಾವ್ ವಿವರಿಸಿದರು.