ಕನ್ನಡ ವಾರ್ತೆಗಳು

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮತ್ತೆ ಅಕ್ರಮ ಚಿನ್ನ ಪತ್ತೆ – ಇಬ್ಬರು ಪ್ರಯಾಣಿಕರಿಂದ 18.61 ಲಕ್ಷ ರೂ. ವೌಲ್ಯದ ಚಿನ್ನ ವಶ

Pinterest LinkedIn Tumblr

Airport_Gold_arest

ಮಂಗಳೂರು, ನ.22: ಮಂಗಳೂರು ವಿಮಾನ ನಿಲ್ದಾಣದಲ್ಲಿ ಅಕ್ರಮ ಚಿನ್ನ ಸಾಗಾಟ ಪ್ರಕರಣಗಳು ದಿನ ದಿಂದ ದಿನಕ್ಕೆ ಹೆಚ್ಚುತ್ತಿದ್ದು, ಇದೀಗ ಮತ್ತೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟ್‌ಮ್ಸ್ ಅಧಿಕಾರಿಗಳು ಅಕ್ರಮ ಚಿನ್ನ ಸಾಗಾಟದ ಎರಡು ಪ್ರತ್ಯೇಕ ಪ್ರಕರಣಗಳನ್ನು ಪತ್ತೆ ಹಚ್ಚಿದ್ದಾರೆ. ಈ ಪ್ರಕರಣದಲ್ಲಿ ಅಕ್ರಮ ಚಿನ್ನ ಸಾಗಿಸುತ್ತಿದ್ದ ಇಬ್ಬರು ಪ್ರಯಾಣಿಕರನ್ನು ಸೆರೆ ಹಿಡಿದಿರುವ ಅಧಿಕಾರಿಗಳು ಅವರಿಂದ ಸುಮಾರೂ 18.61 ಲಕ್ಷ ರೂ. ವೌಲ್ಯದ 699.900 ಗ್ರಾಂ ಚಿನ್ನವನ್ನು ವಶಪಡಿಸಿಕೊಂಡಿದ್ದಾರೆ.

ಶುಕ್ರವಾರ ಬೆಳಗ್ಗೆ ದುಬೈಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ತಲುಪಿದ ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನದಲ್ಲಿ ಬಂದಿಳಿದ ಕಾಸರಗೋಡು ಉದುಮ ಕಲ್ಲಿನಗಲ್ ನಿವಾಸಿ ಅಝೀಝ್ ಸುಲೈಮಾನ್ (37) ಎಂಬವರ ಲಗೇಜ್ ಪರೀಶೀಲಿಸಿದಾಗ ಅದರಲ್ಲಿ 6.20 ಲಕ್ಷ ರೂ. ವೌಲ್ಯದ 233.300 ಗ್ರಾಂ ಚಿನ್ನದ ಬಾರ್‌ಗಳು ಪತ್ತೆಯಾದವು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ಕಾಸರಗೂಡು ಅಡ್ಕತ್ತಬೈಲ್ ನಿವಾಸಿ ಅಬ್ದುಲ್ ಹಮೀದ್ ಮಟ್ಟತ್ತೋಡಿ (42) ಎಂಬವರ ಬಳಿಯಿಂದ 12.41ಲಕ್ಷ ರೂ. ವೌಲ್ಯದ 466.600 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಹೆಚ್ಚಿನ ತನಿಖೆ ಮುಂದುವರಿದಿದೆ.

Write A Comment