ಕನ್ನಡ ವಾರ್ತೆಗಳು

ರೈಲು ಪ್ರಯಾಣಕ್ಕೆ ಹೊರಡುವ ಮುನ್ನ ಎಚ್ಚರಿಕೆ ಮಾತು.

Pinterest LinkedIn Tumblr

train_shduled_news_pic

ಬೆಂಗಳೂರು, ನ. 18: ಇನ್ನೇನು ಡಿಸೆಂಬರ್ ತಿಂಗಳು ಆರಂಭವಾಗಲಿದೆ. ಪ್ರವಾಸಿ ತಾಣಕ್ಕೆ ತೆರಳುವವರ ಸಂಖ್ಯೆಯೂ ಹೆಚ್ಚಲಿದೆ. ನೀವು ಒಂದಿಲ್ಲೊಂದು ಸಂದರ್ಭ ರೈಲ್ವೆ ಪ್ರಯಾಣ ಮಾಡಲೇಬೇಕಾಗುತ್ತದೆ. ಹಾಗಾದರೆ ಟಿಕೆಟ್ ಬುಕ್ ಮಾಡುವುದು ಹೇಗೆ? ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳು ಯಾವವು? ಎಂಬ ಸಮಗ್ರ ಸಂಗತಿ ಅರಿತುಕೊಳ್ಳಬೇಕಾದ್ದು ಅಷ್ಟೇ ಮುಖ್ಯ. ರೈಲ್ವೆ ಇಲಾಖೆಯೂ ಸಹ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದೆ. ಜಾಹೀರಾತು ಮತ್ತಿತರ ಮಾಧ್ಯಮಗಳ ಮೂಲಕವೂ ಮಾಹಿತಿ ನೀಡುತ್ತದೆ. ಐ‌ಆರ್ ಸಿಟಿಸಿ ಇದಕ್ಕೆ ನೆರವಾಗುತ್ತಿದೆ

ರೈಲ್ವೆ ಪ್ರಯಾಣ ಮತ್ತು ಅನುಸರಿಸಬೇಕಾದ ಕ್ರಮಗಳು :
* ಸರತಿ ಸಾಲಿನ ಚಿಂತೆ ಬಿಟ್ಟು ಐ‌ಆರ್ ಸಿಟಿಸಿಯಲ್ಲಿ ಟಿಕೆಟ್ ಕಾಯ್ದಿರಿಸಿ
* ನಿಮ್ಮ ಯಾವೂದಾರೂ ವಿಳಾಸ ದಾಖಲಾತಿ ನೀಡುವುದು ಕಡ್ಡಾಯ
* ಇ ಟಿಕೆಟ್ ಗಳ ಖರೀದಿ ಮತ್ತು ಮಾರಾಟ ಅಪರಾಧವಾಗುತ್ತದೆ
* ನಿಮ್ಮ ಟಿಕೆಟ್ ಕ್ಯಾನ್ಸಲ್ ಮಾಡುವ ಹಕ್ಕನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ
* ಅಧಿಕೃತ ಐ‌ಆರ್ ಸಿಟಿಸಿಯಲ್ಲಿ ಏಜೆನ್ಸಿಗಳ ಬಳಿಯೇ ಟಿಕೆಟ್ ಖರೀದಿಸಿ
* ನಿಮ್ಮ ಸಂಪರ್ಕ ಸಂಖ್ಯೆ ದಾಖಲಿಸಲು ಮರೆಯಬೇಡಿ
* ಹಣ ಪಾವತಿ ಮಾಡಿದಕ್ಕೆ ದಾಖಲೆಯನ್ನೂ ಪಡೆದುಕೊಳ್ಳಿ
* ಟಿಕೆಟ್ ನ್ನು ಮತ್ತೊಮ್ಮೆ ಪರಿಶೀಲಿಸಿ, ಹೊರಡುವ ಸ್ಥಳ ಮತ್ತು ತಲುಪಬೇಕಾದ ಸ್ಥಳ ಸರಿಯಾಗಿದೆಯೇ ಗಮನಿಸಿಕೊಳ್ಳಿ
* ನಿಮ್ಮ ಸ್ಮಾರ್ಟ್ ಫೋನ್ ಮುಖಾಂತರೂ ಪರಿಶೀಲನೆಗೆ ಅವಕಾಶವಿದೆ.
* ಯಾವುದಾದರೂ ಏಜೆನ್ಸಿ ಹೆಚ್ಚಿನ ಹಣ ಪಡೆಯುತ್ತಿದೆ ಎಂದೆನಿಸಿದರೆ ಹಿಂಜರಿಕೆಯಿಲ್ಲದೆ ದೂರು ನೀಡಿ[agentcomplaint@irctc.co.in, ಮತ್ತು cvo@irctc.com ಗೆ ದೂರು ದಾಖಲಿಸಬಹುದು]

* ನಿಮ್ಮಿಂದ ಹೆಚ್ಚು ಹಣ ಪಡೆದರೆ ಅದನ್ನು ಹಿಂದಿರುಗಿಸಲೇಬೇಕಾಗುತ್ತದೆ.
* ಇಂಥ ಏಜೆನ್ಸಿಗಳನ್ನು ಕಪ್ಪು ಪಟ್ಟಿಗೆ ಸಲ್ಲಿಸಲಾಗುವುದು. ಏನು ಮಾಡಬೇಕು? ಏನು ಮಾಡಬಾರದು?
* ಪರಿಸರ ಪ್ರೇಮಿ ಇ-ಟಿಕೆಟ್ ಗೆ ಮೊದಲ ಆದ್ಯತೆಯಿರಲಿ
* ಟಿಕೆಟ್ ಮೇಲೆ ನಿಮ್ ಮೊಬೈಲ್ ಸಂಖ್ಯೆ ನಮೂದಿಸುವಂತೆ ಏಜೆಂಟರಿಗೆ ತಿಳಿಸಿ
* ನೀವು ನೀಡಿದ ಅಟಷ್ಟೂ ಹಣಕ್ಕೆ ರಸೀದಿ ಪಡೆದುಕೊಳ್ಳಿ
* ಟಿಕೆಟ್ ಮಾರಾಟ ಮಾಡಬೇಡಿ, ಮಾರಾಟ ಕಂಡು ಬಂದರೆ ದೂರು ನೀಡಿ
* ಯಾವ ಕಾರಣಕ್ಕೂ ತಪ್ಪು ವಿಳಾಸ ನಮೂದಿಸಬೇಡಿ ಒಟ್ಟಿನಲ್ಲಿ ರೈಲ್ವೆ ಇಲಾಖೆ ಜನ ಜಾಗೃತಿ ಮೂಡಿಸಲು ಇಂಥ ಪ್ರಕಟಣೆಗಳ ಮೂಲಕ ಮಾಹಿತಿ ನೀಡುತ್ತಿದ್ದು ಜನರ ಭಾಗವಹಿಸುವಿಕೆ ಹೆಚ್ಚಾದರೆ ಕಾರ್ಯಕ್ರಮ ಯಶಸ್ವಿಯಾಗುವುದರಲ್ಲಿ ಅನುಮಾನವಿಲ್ಲ.

Write A Comment