ಕನ್ನಡ ವಾರ್ತೆಗಳು

ಮಣಿಪಾಲ: ದೇವರಿಗೆ ದೇವಾಲಯದ ಅಗತ್ಯವಿಲ್ಲ ಇದರ ಅಗತ್ಯವಿರುವುದು ಪ್ರಾರ್ಥನೆ ಸಲ್ಲಿಸಲು ಬರುವ ಭಕ್ತರಿಗೆ: ಡಾ ಜೆರಾಲ್ಡ್ ಐಸಾಕ್ ಲೋಬೊ

Pinterest LinkedIn Tumblr

ಉಡುಪಿ: ದೇವಾಲಯಗಳ ಅಭಿವೃದ್ಧಿಗೆ ಭಕ್ತರು ಏಕ ಮನಸ್ಸಿನಿಂ ಶ್ರಮಿಸಿದಾಗ ನಾವೆಲ್ಲಾ ಒಂದು ಎಂಬ ಭಾವನೆ ಬರುತ್ತದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ವಂ. ಡಾ ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಅವರು ಮಣಿಪಾಲದ ಕ್ರೈಸ್ಟ್ ಚರ್ಚಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ದೇವಾಲಯದ ಶಿಲಾನ್ಯಾಸ ಹಾಗೂ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

Udupi_Bhishap_News (1) Udupi_Bhishap_News (2) Udupi_Bhishap_News

ಭಾರತದಲ್ಲಿ ದೇವಾಲಯಗಳಿಗೆ ವಿಶೇಷ ಸ್ಥಾನವನ್ನು ನೀಡಲಾಗಿದೆ. ಇಲ್ಲಿ ಎಲ್ಲಾ ಧರ್ಮದವರು ಸಹಬಾಳ್ವೆಯ ಜೀವನ ನಡೆಸುವುದರೊಂದಿಗೆ, ತಮ್ಮ ಅಗತ್ಯಕ್ಕೆ ತಕ್ಕಂತೆ ತಮ್ಮ ದೇವಾಲಯದ ನಿರ್ಮಾಣವನ್ನು ಮಾಡುತ್ತಾರೆ. ಆದರೆ ದೇವರಿಗೆ ಕಲ್ಲು ಮಣ್ಣುಗಳಿಂದ ಕಟ್ಟಿದ ದೇವಾಲಯದ ಅಗತ್ಯವಿಲ್ಲ ಇದರ ಅಗತ್ಯವಿರುವುದು ಪ್ರಾರ್ಥನೆ ಸಲ್ಲಿಸಲು ಬರುವ ಭಕ್ತರಿಗೆ. ದೇವರಿಗೆ ಬೇಕಾಗಿರುವುದು ತನ್ನ ಭಕ್ತರ ಪ್ರೀತಿಯ ಹೃದಯವೆಂಬ ದೇವಾಲಯ ಅಲ್ಲಿ ದೇವರು ಸದಾ ನೆಲೆಸಲು ಇಷ್ಟಪಡುತ್ತಾರೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ವಿಧಾನಪರಿಷತ್ ಸದಸ್ಯ ಐವನ್ ಡಿ’ಸೋಜಾ ಮಾತನಾಡಿ ದೇವಾಲಯ ನಿರ್ಮಾಣಕ್ಕೆ ತಮ್ಮ ಸಂಪೂರ್ಣ ಸಹಕಾರವನ್ನು ನೀಡುವುದಾಗಿ ಭರವಸೆ ನೀಡಿದರು.

ಕಾರ್‍ಯಕ್ರಮದಲ್ಲಿ ಉದ್ಯಮಿ ಜೆರಿ ವಿನ್ಸೆಂಟ್ ಡಾಯಸ್, ನಗರಸಭಾ ಸದಸ್ಯ ರಮೇಶ್ ಕಾಂಚನ್, ಮಿಲಾಗ್ರಿಸ್ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕ ವಂ ಮಹೇಶ್ ಡಿ’ಸೋಜಾ, ಮಣಿಪಾಲ ಚರ್ಚಿನ ಧರ್ಮಗುರು ವಂ ಫ್ರಾನ್ಸಿಸ್ ಲೂವಿಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಪ್ರಮೀಳಾ ಫೆರ್ನಾಂಡಿಸ್, ಕಾರ್ಯದರ್ಶಿ ಜೋಯ್ಸ್ ಡಿ’ಸೋಜಾ, ವಂ. ಚಾಲ್ಸ್ ಸಲ್ಡಾನಾ ಇತರರು ಉಪಸ್ಥಿತರಿದ್ದರು.

Write A Comment