ಕನ್ನಡ ವಾರ್ತೆಗಳು

ಬ್ರಹ್ಮಾವರ: ಹಾವು ಕಚ್ಚಿ ಆಸ್ಪತ್ರೆಯಲ್ಲಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವು

Pinterest LinkedIn Tumblr

snake_nearhouse_bite

ಕುಂದಾಪುರ: ಹಾವು ಕಚ್ಚಿ ಅಸ್ವಸ್ಥಳಾಗಿದ್ದ ಮಹಿಳೆಯೋರ್ವರು ಚಿಕಿತ್ಸೆ ಫಲಕಾರಿಯಾದೇ ಆಸ್ಪತ್ರೆಯಲ್ಲಿ ಮ್ರತಪಟ್ಟ ಘಟನೆ ನಡೆದಿದೆ.

ಭವಾನಿ (58) ಎಂಬವರು ಗದ್ದೆ ಕೆಲಸ ಮುಗಿಸಿ ಮನೆಯ ಪಕ್ಕದಲ್ಲಿರುವ ಗದ್ದೆಯ ಅಂಚಿನಲ್ಲಿ ನಡೆದುಕೊಂಡು ಬರುವಾಗ ವಿಷದ ಹಾವು ಕಚ್ಚಿದ್ದು ಇವರನ್ನು ಚಿಕಿತ್ಸೆಗಾಗಿ ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಿಸಿದ್ದು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಇದೇ ತಿಂಗಳ  10 ನೇ ತಾರೀಖಿನಂದು ಸಂಜೆ  ಭವಾನಿಯವರು ಕೆಲಸ ಮುಗುಸಿ ಬರುತ್ತಿರುವಾಗ ಈ ಘಟನೆ ಸಂಭವಿಸಿದ್ದು, ಅವರನ್ನು ಕೂಡಲೇ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ  ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿಯೇ ಭವಾನಿ ಸಾವನ್ನಪ್ಪಿದ್ದಾರೆ.  ಈ ಬಗ್ಗೆ ಗಣೇಶ್ ಆಚಾರ್ಯರವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Write A Comment