ಕುಂದಾಪುರ: ಕೋಟೇಶ್ವರದ ಕರ್ನಾಟಕ ಪಬ್ಲಿಕ್ ಸ್ಕೂಲ್, ಪ್ರೌಢಶಾಲಾ ವಿಭಾಗದ ಪ್ರತಿಭಾವಂತ ವಿದ್ಯಾರ್ಥಿನಿ ಮಹಾಲಕ್ಷ್ಮೀ ಸಿ.ಜೆ. ಇವರು ದೆಹಲಿಯ ಸಂಸತ್ ಭವನದಲ್ಲಿ ನಡೆಯಲಿರುವ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ ಕೇವಲ 11 ವಿದ್ಯಾರ್ಥಿಗಳಲ್ಲಿ, ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುವ ಏಕೈಕ ವಿದ್ಯಾರ್ಥಿನಿಯಾಗಿ ಮಹಾಲಕ್ಷ್ಮೀ ಆಯ್ಕೆಯಾಗಿರುವುದು ವಿಶೇಷ ಸಾಧನೆಯಾಗಿದೆ. ಈಕೆ ಎಸ್. ಜಿ. ಪ್ರಸಾದ್ ರಾವ್ ಮತ್ತು ಪೂರ್ಣಿಮಾ ಪಿ. ರಾವ್ ದಂಪತಿಯ ಪುತ್ರಿ.
ಈಕೆಯ ಈ ಸಾಧನೆಗೆ ಶಾಲೆಯ ಉಪ ಪ್ರಾಂಶುಪಾಲರು, ಎಸ್.ಡಿ.ಎಂ.ಸಿ, ಶಿಕ್ಷಕರು, ಪೋಷಕರು ಹಾಗೂ ಸಹಪಾಠಿಗಳು ಹರ್ಷ ವ್ಯಕ್ತಪಡಿಸಿ, ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಸಾಧಿಸಲಿ ಎಂದು ಹಾರೈಸಿದ್ದಾರೆ.
Comments are closed.