ಕರಾವಳಿ

ಮಣಿಪಾಲದಲ್ಲಿ ವ್ಯಕ್ತಿಯ ಕಿಡ್ನಾಪ್ ಪ್ರಕರಣ: ತೆಲಂಗಾಣದಲ್ಲಿ ಆರೋಪಿಗಳ ಬಂಧಿಸಿ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಿಸಿದ ಪೊಲೀಸರು

Pinterest LinkedIn Tumblr

 

ಉಡುಪಿ: ಮಣಿಪಾಲ ಠಾಣೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು, ತೆಲಂಗಾಣದಲ್ಲಿ ಆರೋಪಿಗಳನ್ನು ಬಂಧಿಸಿ ಅಪಹರಣಕ್ಕೊಳಗಾದ ವ್ಯಕ್ತಿಯನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.

ಕುಂದಾಪುರದ ನಿವಾಸಿ ರಾಮ ಮಡಿವಾಳ ಅವರು, ತಮ್ಮ ಲಕ್ಷ್ಮಣ ಅವರಿಗೆ ಚಿಕಿತ್ಸೆ ಕೊಡಿಸಲು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದರು, ಚಿಕಿತ್ಸೆ ನಂತರ ಆಸ್ಪತ್ರೆ ಹೊರಗಿನ ಕ್ಯಾಂಟೀನಿನಲ್ಲಿ ರಾಮ ಮಡಿವಾಳ, ಅವರ ಅಣ್ಣ ರಾಜೇಶ್ ಹಾಗೂ ಸುಧೀರ್ ಟೀ ಕುಡಿಯುತ್ತಿದ್ದರು. ಈ ವೇಳೆ ನಂಬ‌ರ್ ಪ್ಲೇಟ್ ಇಲ್ಲದ ಕಪ್ಪು ಬಣ್ಣದ ಕಾರಿನಲ್ಲಿ ಬಂದ ಸುಮಾರು 7-8 ಜನರು ಏಕಾಏಕಿ ರಾಜೇಶ್ ಅವರನ್ನು ಹಿಡಿಯಲು ಯತ್ನಿಸಿದರು. ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಆರೋಪಿಗಳು ಅವರನ್ನು ಬಲವಂತವಾಗಿ ಕಾರಿನಲ್ಲಿ ಕೂರಿಸಿಕೊಂಡು ಮಣಿಪಾಲದಿಂದ ಹಿರಿಯಡ್ಕ ಕಡೆಗೆ ಕೊಂಡೊಯ್ದಿದ್ದಾರೆ.

ದೂರುದಾರರ ಪ್ರಕಾರ, ಆರೋಪಿಗಳು ಈ ಹಿಂದೆ ವ್ಯವಹಾರದ ವಿಚಾರವಾಗಿ ಮನೆಗೆ ಬಂದಿದ್ದು ಪರಿಚಿತರಾಗಿದ್ದರು. ಮಲ್ಲಾರೆಡ್ಡಿ, ತುಳಜಾ, ನರಸಿಂಗ, ಹುಸೇನ್, ಶಂಕರ, ನಾಗೇಶ್, ಪರಮೇಶ್ವ‌ರ್ ಹಾಗೂ ವಿಜಯ್ ಆರೋಪಿಗಳು. ತೆಲಂಗಾಣದಲ್ಲಿ ನಡೆಯುತ್ತಿದ್ದ ವ್ಯವಹಾರದ ವಿಚಾರಕ್ಕೆ ಸಂಬಂಧಿಸಿ ಅಪಹರಣ ನಡೆದಿರುವುದು ತನಿಖೆಯಿಂದ ತಿಳಿದುಬಂದಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ತೆಲಂಗಾಣ ರಾಜ್ಯದ ಜಗತಿಹಾಳ್ ಜಿಲ್ಲೆಯ ಕರೀಂನಗರದ ಗೋವಿಂದಪಳ್ಳಿ ಪ್ರದೇಶದ ಸಿಲ್ವ‌ರ್ ಸ್ಟೈ ಲಾಡ್ಜ್‌ಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡು, ತೆಲಂಗಾಣ ರಾಜ್ಯದ ಜಗತಿಹಾಳ್ ಜಿಲ್ಲೆಯ ಕರೀಂನಗರದ ಗೋವಿಂದಪಳ್ಳಿ ಪ್ರದೇಶದ ಸಿಲ್ವರ್ ಪ್ರೈ ಲಾಡ್ಜ್‌ಗೆ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಅಪಹರಣಕ್ಕೆ ಬಳಸಿದ ಕಿಯಾ ಕ್ಯಾರೆನ್ಸ್ ಕಾರು ಹಾಗೂ ನಂಬ‌ರ್ ಪ್ಲೇಟ್ ಇಲ್ಲದ ಮಹೀಂದ್ರ ಥಾರ್ ಕಾರನ್ನು ವಶಕ್ಕೆ ಪಡೆದು, ಅಪಹರಣಕ್ಕೊಳಗಾದ ರಾಜೇಶ್ ಅವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ.

Comments are closed.